ವಿದ್ಯಾರ್ಥಿನಿಯರ ಕೊಠಡಿ ಬಳಿ ಹಸ್ತಮೈಥುನ ಮಾಡಿಕೊಂಡು ಉಪಟಳ: ಅಪ್ರಾಪ್ತನ ಬಂಧನ!
Bengaluru Crime News: ವಿದ್ಯಾರ್ಥಿನಿಯರ ಕೊಠಡಿ ಬಳಿ ಬಂದು ಅಸಭ್ಯವಾಗಿ ವರ್ತಿಸಿ ಉಪಟಳ ನೀಡುತ್ತಿದ್ದ ಅಪ್ರಾಪ್ತನನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ವಿದ್ಯಾರ್ಥಿನಿಯರ ಕೊಠಡಿ ಬಳಿ ಬಂದು ಅಸಭ್ಯವಾಗಿ ವರ್ತಿಸಿ ಉಪಟಳ ನೀಡುತ್ತಿದ್ದ ಅಪ್ರಾಪ್ತನನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಧ್ರುವ ನಾರಾಯಣ್ ನಿಧನದ ಬೆನ್ನಲ್ಲೇ ಅಗಲಿದ ಪತ್ನಿ: ಶನಿವಾರ ಅಂತ್ಯಕ್ರಿಯೆ
ಏಪ್ರಿಲ್ 1ರ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಬರುತ್ತಿದ್ದ ಬಿಹಾರ ಮೂಲದ ವಿದ್ಯಾರ್ಥಿನಿ ಸೇರಿದಂತೆ ಮೂವರು ಯುವತಿಯರಿಗೆ ಎದುರಾದ ಆರೋಪಿ ಅಶ್ಲೀಲವಾಗಿ ಮಾತನಾಡಿ ಕಿರುಕುಳ ನೀಡಿದ್ದಾನೆ. 23 ವರ್ಷದ ಬಿಹಾರ ಮೂಲದ ವಿದ್ಯಾರ್ಥಿನಿ ಮತ್ತು ಆಕೆಯ ಇಬ್ಬರು ಸ್ನೇಹಿತೆಯರು ಸದಾಶಿವನಗರದ ಎಜಿಎಸ್ ಲೇಔಟಿನಲ್ಲಿರುವ ಮನೆಗೆ ಬರುತ್ತಿದ್ದಾಗ ಮನೆಯ ಬಾಗಿಲು ಬಳಿ ನಿಂತು ಅಪ್ರಾಪ್ತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ.
ಇದನ್ನೂ ಓದಿ: Animals News: ಇಡೀ ಮನುಕುಲಕ್ಕೆ ಮಾದರಿಯಾಯಿತು ಈ ಮಂಗನ ಕಾರ್ಯ ! ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ
ಆರೋಪಿಯನ್ನು ಕಂಡ ಯುವತಿಯರು ತಕ್ಷಣ ರೂಮಿನೊಳಗೆ ಸೇರಿಕೊಂಡು ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ. ಯಾರು ಎಂದು ಕೇಳಿದಾಗ ತನ್ನ ಹೆಸರು ಹೇಳಿದ ಆರೋಪಿ, ತಾನು ಲೈಂಗಿಕ ತೃಪ್ತಿ ನೀಡುತ್ತೇನೆ. ಬಾಗಿಲು ತೆರೆಯಿರಿ, ವಿಡಿಯೋ ತೋರಿಸುತ್ತೇನೆ ಎಂದು ವಿಕೃತವಾಗಿ ಮಾತನಾಡುತ್ತ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಗಾಬರಿಗೊಂಡ ಯುವತಿಯರು ತಮ್ಮ ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಸ್ನೇಹಿತರ ಸಹಾಯದಿಂದ ಸದಾಶಿವನಗರ ಠಾಣೆಗೆ ಯುವತಿಯರು ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪ್ರಾಪ್ತ ಆರೋಪಿಯನ್ನು ಬಂಧಿಸಿ ಸರ್ಕಾರಿ ಬಾಲ ಮಂದಿರಕ್ಕೆ ಒಪ್ಪಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.