Animals News: ಇಡೀ ಮನುಕುಲಕ್ಕೆ ಮಾದರಿಯಾಯಿತು ಈ ಮಂಗನ ಕಾರ್ಯ !  ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ

Animal Stories: ಇತೀಚೀನ ದಿನಗಳಲ್ಲಿ ಕುಟುಂಬ ಸಂಬಂಧ ನಡುವೆ ಅಂತರ ಸೃಷ್ಠಿಯಾಗಿ ಕೆಲಸದ ನಡುವೆ ಕುಟುಂಬದ ಒಡನಾಟವೇ ಕಣ್ಮರೆಯಾಗುತ್ತಿದೆ. ಆದರೆ  ಇಲ್ಲೊಂದು ಕಪಿ ಕೆಲಸದ ದೃಶ್ಯವು   ಇಡೀ ಮನುಕುಲವೇ ನಾಚುವಂತಾಗಿದೆ.

Written by - Zee Kannada News Desk | Last Updated : Apr 7, 2023, 01:04 PM IST
  • ಮನುಕುಲವೇ ನಾಚುವಂತಹ ಘಟನೆ
  • ಸಾವಿಗೂ ಮುನ್ನ ಎರಡು ತಿಂಗಳ ಹಿಂದೆ ಆ ವ್ಯಕ್ತಿ ಮತ್ತು ಕೋತಿಯ ಒಡನಾಟ
  • ಬಾಳೆಹಣ್ಣು ನೀಡುತ್ತಿದ್ದ ತಾತಾನ ಮರಣ ನಂತರ ಬಂದು ಗೌರವ ಸಲ್ಲಿಸಿದ ಹನುಮ
Animals News: ಇಡೀ ಮನುಕುಲಕ್ಕೆ ಮಾದರಿಯಾಯಿತು ಈ ಮಂಗನ ಕಾರ್ಯ !  ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ title=

ವಿಜಯನಗರ : ಇತೀಚೀನ ದಿನಗಳಲ್ಲಿ ಕುಟುಂಬ ಸಂಬಂಧ ನಡುವೆ ಅಂತರ ಸೃಷ್ಠಿಯಾಗಿ  ಮಾನವೀಯತೆ ಜೊತೆಗೆ ಬಂಧು ಬಂಧವ್ಯವೂ ಕಣ್ಮರೆಯಾಗುತ್ತಿದೆ. ಕೆಲಸದ ನಡುವೆ ಕುಟುಂಬದಲ್ಲಿ ಯಾವುದೇ ಶುಭ , ಅಶುಭ ಕಾರ್ಯಕ್ರಮ ನಡೆದರೂ ಕೆಲಸದ ನೆಪ ಹೇಳಿ ತಪ್ಪಿಸಿಕೊಳ್ಳುವವರೇ ಹೆಚ್ಚು.. ಆದರೆ ಇಲ್ಲೊಂದು ದೃಶ್ಯ ಇಡೀ ಮನುಕುಲವೇ ನಾಚುವಂತಾಗಿದೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ಪಟ್ಟಣ ದಲ್ಲಿ ಪರಶುರಾಮ್ ಷಾ ಎನ್ನುವವರು ಶ್ರೀರಾಮ ನವಮಿಯ ದಿನದಂದು ಸಾವನ್ನಪ್ಪಿದ್ದರು. ತಾತಾ ತನ್ನ ಬದುಕಿನ ವೇಳೆಯಲ್ಲಿ ಮಂಗವೊಂದಕ್ಕೆ ಪ್ರತಿನಿತ್ಯ  ಬಾಳೆಹಣ್ಣು ನೀಡುತ್ತಿದ್ದರು.

ಇದನ್ನೂ ಓದಿ: ರಾಷ್ಟ್ರಪತಿಯಿಂದ ಎಸ್,ಎಲ್ ಭೈರಪ್ಪ, ಸುಧಾಮೂರ್ತಿ ಗೆ ಪದ್ಮಭೂಷಣ ಪ್ರಧಾನ

ಇವರು ಅನಾರೋಗದಿಂದ ಸಾವನ್ನೊಪ್ಪಿದ್ದ ಬಳಿಕ ತನಗೆ ನಿತ್ಯ ಬಾಳೆಹಣ್ಣು ನೀಡುತ್ತಿದ್ದ ತಾತಾನ  ಸಾವಿಗೆ ಬಂದು ಹಣೆಗೆ ಮುತ್ತಿಟ್ಟು ಅಂತಿಮ‌ ನಮನ ಸಲ್ಲಿಸಿರುವುದು ಇಡೀ ಮನುಕುಲವನ್ನೇ ನಾಚುವಂತೆ ಮಾಡಿದೆ. ಸ್ವಾರ್ಥ ಜಗದಲ್ಲಿ ನಿಸ್ವಾರ್ಥ ಪ್ರೀತಿ ತೋರಿದ ಮಂಗವೂ ಮೂಕ ಪ್ರಾಣಿಯು ಪ್ರೀತಿಗೆ ಅಭಾರಿ ಎಂದು ಸಾಬೀತು ಮಾಡಿದೆ. 

ಇದನ್ನೂ ಓದಿ: ಐತಿಹಾಸಿಕ ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ! ಕಣ್ತುಂಬಿಕೊಳ್ಳಲಿರುವ ಲಕ್ಷಾಂತರ ಭಕ್ತರು!

ತಾತಾನ ಸಾವಿಗೂ ಮುನ್ನ ಎರಡು ತಿಂಗಳ ಹಿಂದೆ ಆ ವ್ಯಕ್ತಿ ಮತ್ತು ಕೋತಿಯ ಒಡನಾಟ ಪ್ರಾರಂಭವಾಗಿತ್ತು . ಇವರು ಹೆಚ್ಚು ಮಧ್ಯ ಪ್ರಿಯರಾಗಿದ್ದರಿಂದ ಸಾವಿನ ಹಿಂದಿನ ದಿನವಷ್ಟೇ ತಾತಾನ  ಹುಟ್ಟುಹಬ್ಬದ ಪ್ರಯುಕ್ತ ಅವರು ಹೆಚ್ಚು ಮಧ್ಯ ಪ್ರಿಯರಾಗಿದ್ದರಿಂದ  ಕುಟುಂಬಸ್ಥರು ಸಾವಿನ ಹಿಂದಿನ ದಿನ ಮದ್ಯದ ಬಾಟಲ್ ಮಾದರಿಯ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಸಹ ಆಚರಿಸಿದ್ದರು. ಆದರೆ ಮಂಗನ ಕಾರ್ಯವೂ  ಇಡೀ ಮನುಕುಲಕ್ಕೆ ಮಾದರಿಯಾಗಿದೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News