SSLC ಪರೀಕ್ಷೆ ವೇಳೆ ಅವ್ಯವಹಾರ: ಕಲಬುರಗಿಯಲ್ಲಿ 16 ಶಿಕ್ಷಕರು ಅಮಾನತು!

Malpractice during SSLC exam: ಶಾಲೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಿದ್ದರು.

Written by - Puttaraj K Alur | Last Updated : Apr 7, 2023, 10:47 AM IST
  • SSLC ಪರೀಕ್ಷೆಯ ಗಣಿತ ಪತ್ರಿಕೆಯಲ್ಲಿ ವಿದ್ಯಾರ್ಥಿಗಳಿಗೆ “ಮಾಸ್ ಕಾಪಿ” ಮಾಡಲು ಅವಕಾಶ
  • ಕಲಬುರಗಿ ಜಿಲ್ಲೆಯ 16 ಶಿಕ್ಷಕರನ್ನು ಅಮಾನತುಗೊಳಿಸಿದ ಕರ್ನಾಟಕ ಶಿಕ್ಷಣ ಇಲಾಖೆ
  • ಅಫಜಲಪುರ ತಾಲೂಕಿನ ಗಬ್ಬೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿರುವ ಘಟನೆ
SSLC ಪರೀಕ್ಷೆ ವೇಳೆ ಅವ್ಯವಹಾರ: ಕಲಬುರಗಿಯಲ್ಲಿ 16 ಶಿಕ್ಷಕರು ಅಮಾನತು! title=
16 ಶಿಕ್ಷಕರು ಅಮಾನತು!

ಕಲಬುರಗಿ: ಎಪ್ರಿಲ್ 3ರಂದು ನಡೆದ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (SSLC) ಪರೀಕ್ಷೆಯ ಗಣಿತ ಪತ್ರಿಕೆಯಲ್ಲಿ ವಿದ್ಯಾರ್ಥಿಗಳಿಗೆ “ಮಾಸ್ ಕಾಪಿ” ಮಾಡಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಕರ್ನಾಟಕ ಶಿಕ್ಷಣ ಇಲಾಖೆಯು ಕಲಬುರಗಿ ಜಿಲ್ಲೆಯ 16 ಶಿಕ್ಷಕರನ್ನು ಬುಧವಾರ ಅಮಾನತುಗೊಳಿಸಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ಅಧಿಕಾರಿಗಳ ಪ್ರಕಾರ, ಅಫಜಲಪುರ ತಾಲೂಕಿನ ಗಬ್ಬೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ವರದಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಕೆಎಸ್‌ಇಎಬಿ ಅಧಿಕಾರಿಯೊಬ್ಬರು, ‘ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಸೋಮವಾರ ಚುನಾವಣಾ ಸುತ್ತಿನಲ್ಲಿದ್ದರು. ಆದರೆ ಪರೀಕ್ಷಾ ಕೇಂದ್ರದಲ್ಲಿ ಜನಸಂದಣಿ ನೋಡಿದ ನಂತರ ಶಾಲೆಯಲ್ಲಿ ಮಾಸ್ ಕಾಪಿ ನಡೆಯುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಅಧಿಕಾರಿ ಪರಿಶೀಲಿಸಲು ಹೋದಾಗ ಕಿಟಕಿಯ ಬಳಿ ಪೇಪರ್ ಸ್ಕ್ರಿಪ್ಟ್‌ಗಳು ಬಿದ್ದಿರುವುದು ಕಂಡುಬಂದಿದೆ. ಸಾಮೂಹಿಕ ನಕಲು ನಡೆಯುತ್ತಿದೆ ಎಂದು ಶಂಕಿಸಿದ ಎಸ್ಪಿ ಘಟನೆಯ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ವರದಿ ಮಾಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: 70-80 ಫೈಲ್ ಪೆಂಡಿಂಗ್ ಇಟ್ಟು 2.5 ಲಕ್ಷ ಲಂಚಕ್ಕೆ ಬೇಡಿಕೆ- ಅಧಿಕಾರಿಗಳು ಲೋಕಾ ಬಲೆಗೆ!!

ಬಳಿಕ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಲಬುರಗಿ ಸಹಾಯಕ ಪೊಲೀಸ್ ಆಯುಕ್ತರಿಗೆ ಸೂಚಿಸಿದರು. ಇದರಿಂದ ಪರೀಕ್ಷಾ ಕೇಂದ್ರದಲ್ಲಿ ನಿಯೋಜನೆಗೊಂಡಿದ್ದ ಎಲ್ಲಾ 16 ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ‘ಶಿಕ್ಷಕರು ಸಾಮೂಹಿಕ ನಕಲು ತಡೆಯಲು ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಅಮಾನತುಗೊಳಿಸಿದ್ದೇವೆ. ಇದೀಗ ಪರೀಕ್ಷಾ ಕೇಂದ್ರಕ್ಕೆ ಹೊಸ ಶಿಕ್ಷಕರನ್ನು ನಿಯೋಜಿಸಲಾಗಿದೆ’ ಎಂದು ಕೆಎಸ್‌ಇಎಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ 2ನೇ ಪದವಿ ಪೂರ್ವ (PU) ಪರೀಕ್ಷೆಯ ಮೌಲ್ಯಮಾಪನವು ಈಗಾಗಲೇ ಪ್ರಾರಂಭವಾಗಿದೆ. ಮೌಲ್ಯಮಾಪನಕ್ಕಾಗಿ ಸುಮಾರು 17 ಸಾವಿರ ಶಿಕ್ಷಕರನ್ನು ನಿಯೋಜಿಸಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವು ಶಿಕ್ಷಕರನ್ನು ತರಬೇತಿಗೆ ಕರೆಸಿಕೊಳ್ಳುವುದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಸ್ವಲ್ಪ ವಿಳಂಬವಾಗಲಿದೆ.

ಇದನ್ನೂ ಓದಿ: 2023-24 ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿ : ಈ ವರ್ಷ ಇಷ್ಟು ದಿನ ಶಾಲೆಗೆ ರಜೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News