ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಮಗನ ಮುಂದೆಯೇ ತಾಯಿಯ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ರೌಡಿಶೀಟರ್ ಗ್ಯಾಂಗ್ ನಿಂದ ಪೈಶಾಚಿಕ ಕೃತ್ಯ ನಡೆದಿದ್ದು, ಒಬ್ಬರಾದ ಮೇಲೆ ಒಬ್ಬರಂತೆ ಮಹಿಳೆ ಮೇಲೆ ಕಾಮುಕರು ಎರಗಿ ಚಿತ್ರಹಿಂಸೆ ನೀಡಿ ಅಟ್ಟಹಾಸ ಮೆರೆದಿದ್ದಾರೆ. 


COMMERCIAL BREAK
SCROLL TO CONTINUE READING

40 ವರ್ಷದ ತಾಯಿ ಮೇಲೆ ತನ್ನ ಕಣ್ಣ‌ ಮುಂದೆಯೇ ತಾಯಿ‌ ಮೇಲೆ ಅತ್ಯಾಚಾರವಾದ್ರೂ  ಸಹ 20 ವರ್ಷದ ಮಗ ನಿಸ್ಸಹಾಯಕನಾಗಿದ್ದಾನೆ. ಇನ್ನೂ ಮಹಿಳೆ ಮೇಲಿನ ಅತ್ಯಾಚಾರಕ್ಕೆ ಇಬ್ಬರು ಮಹಿಳೆಯರು ಸಾಥ್ ಕೊಟ್ಟಿದ್ದು, ತಮ್ಮ ಕಣ್ಣಮುಂದೆ ಘಟನೆ ನಡೆಯುತ್ತಿದ್ದರು ಪಾಪಿಗಳು ಸುಮ್ಮನೆ ನಿಂತಿದ್ದರಂತೆ. ಇನ್ನೂ ಪ್ರಕರಣದಲ್ಲಿ ತೀವ್ರ ಅಸ್ವಸ್ಥಗೊಂಡಿರುವ ಸಂತ್ರಸ್ಥೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಇದನ್ನೂ ಓದಿ:ತುಂಗಾಭದ್ರಾ ಡ್ಯಾಂಗೆ ಗೇಟ್‌ ಅಳವಡಿಕೆಗೆ ಹರಸಾಹಸ


ಪ್ರಕರಣ ಸಂಬಂಧ ರೌಡಿ ಶೀಟರ್ ಗಳಾದ ಜೋಸೆಫ್, ಶ್ರೀನಿವಾಸ್ @ ಪಾಗಲ್ ಸೀನಾ ಎಂಬುವವರ ಜೊತೆ ಸೌಮ್ಯಾ ಪ್ರತಾಪ್, ಜತಿನ್, ವಿಘ್ನೇಶ್  ಸೈಯದ್ ಶಹಬುದ್ದೀನ್, ಸ್ವಾತಿ,ಮಾದೇಶ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪ್ರಕರಣದ ಹಿನ್ನೆಲೆ  : ಸಂತ್ರಸ್ಥೆ,ಮತ್ತಾಕೆಯ ಮಗ ಹಾಗೂ ಮತ್ತಿಬ್ಬರರು ಸ್ನೇಹಿತರು ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ಇದೇ ಏರಿಯಾದ ರೌಡಿಶೀಟರ್ ಗಳಾದ ಜೋಸೇಫ್ ಹಾಗೂ ಶ್ರೀನಿವಾಸ್ @ ಪಗಾಲ್ ಸೀನಾನಿಗೆ ಸಂತ್ರಸ್ಥೆ ಹಾಗೂ ಮತ್ತಾಕೆಯ ಮಗನ ಪರಿಚಯವಿತ್ತು. ಸಂತ್ರಸ್ಥೆಯ ಮಗನ ಸ್ನೇಹಿತರು ಸಹ ಆಕೆಯ ಮಗನ ಜೊತೆ ಆತ್ಮೀಯರಾಗಿದ್ದರು. 


ಇದನ್ನೂ ಓದಿ:ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಮುಂದುವರಿಕೆ ಬಗ್ಗೆ ಸಚಿವರು ಹೇಳಿದ್ದೇನು?


ಮೊಬೈಲ್‌ ಮತ್ತು ಚಿನ್ನದ ಸರ ಕಳ್ಳತನ ಪ್ರಕರಣದಲ್ಲಿ ಸಂತ್ರಸ್ತೆ ಹಾಗೂ ಆಕೆಯ ಮಗ ಭಾಗಿಯಾಗಿದ್ದಾಗಿ ಆರೋಪಿಗಳಿಗೆ ಗೊತ್ತಾಗಿತ್ತು.. ಇದನ್ನು ಗಮನಿಸಿದ್ದ ಜೋಸೇಫ್ ಹಾಗೂ ಸೀನಾ ಇವನ್ನು ಅಪಹರಿಸಿ ಬೆದರಿಸಿದರೆ ಹಣ ಬಂಗಾರ ಸಿಗಬಹುದು ಎಂದು ಭಾವಿಸಿದ್ದರು. ಹೀಗಾಗಿ ಇದೇ 13 ತಾರೀಖು ಸಂಚು ರೂಪಿಸಿ ನಾಲ್ವರನ್ನು ಕಿಡ್ನಾಪ್ ಮಾಡಿದ್ದರು. ಜೊಸೇಫ್ ಹಾಗೂ ಸೀನನಿಗೆ ಇನ್ನೂ 7 ಆರೋಪಿಗಳು ಸಾಥ್ ಕೊಟ್ಟಿದ್ದಾರೆ.  


ನಾಲ್ವರನ್ನು ಬೆದರಿಸಲು ಪಕ್ಕಾ ಪ್ಲಾನ್ ಮಾಡಿದ್ದ ಆರೋಪಿಗಳು ನಕಲಿ ಪಿಎಸ್ಐ ರೆಡಿ ಮಾಡಿದ್ದರು. ಸೌಮ್ಯ ಎಂಬ ಆರೋಪಿತೆ ತಾನು ಪೊಲೀಸ್ ಹಣ ಕೊಡದಿದ್ದರೆ ನಿಮ್ಮ ಮೇಲೆ ಕೇಸ್ ಹಾಕುತ್ತೇನೆ ಎಂದು ಬೆದರಿಸಿದ್ದಳು. ಪರಿಚಯಸ್ಥ ಪ್ರತಾಪ್ ಎಂಬಾತ ಮನೆಯಲ್ಲಿ ಅಕ್ರಮವಾಗಿ ಇರಿಸಿ ಹಿಂಸಿಸಿದ್ದರು. ಯಾವಾಗ ಹಣ, ಬಂಗಾರ ಕೊಡಲಿಲ್ಲವೋ ಮಹಿಳೆ ಮೇಲೆ ಮೃಗದಂತೆ ಎರಗಿ ಆಕೆಯ ಮಗನ‌ ಮುಂದೆಯೇ ಅತ್ಯಾಚಾರವೆಸಗಿ ಚಿತ್ರಹಿಂಸೆ ಕೊಟ್ಟಿದ್ದಾರೆ. 


ಇದನ್ನೂ ಓದಿ:ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಸಚಿವ ದಿನೇಶ್ ಗುಂಡೂರಾವ್


ಇತ್ತ ನಾಲ್ವರು ನಾಪತ್ತೆಯಾದ ಸಂಬಂಧ ಚಂದ್ರಲೇಔಟ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಬಿದ್ದಾಗ ತಮ್ಮದೇ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ತಮ್ಮ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಿರುವ ಚಂದ್ರಲೇಔಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ‌.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ