ಮಧ್ಯಪ್ರದೇಶ: ಇಲ್ಲಿನ ಶಿಕ್ಷಣ ಸಚಿವ ಇಂದರ್‌ ಸಿಂಗ್‌ ಅವರ ಸೊಸೆ ಸವಿತಾ ಪರ್ಮಾರ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಸವಿತಾ ಅವರ ಮೃತದೇಹ ಪತ್ತೆಯಾಗಿದ್ದು, ಈ ಘಟನೆ ಭೋಪಾಲ್‌ನ ಶಾಜಾಪುರ್‌ ಜಿಲ್ಲೆಯಲ್ಲಿರುವ ಮನೆಯಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಗ್ಲೋಬಲ್‌ ಆರ್ಯಭಟ ಪ್ರಶಸ್ತಿ ಪುರಸ್ಕೃತೆ ʼಸಹನಾʼ: ಇಲ್ಲಿದೆ ಕರಾಟೆ ಕ್ವೀನ್‌ ಸಾಧನೆಯ ಹಾದಿ


ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿಗಳು ಇನ್ನು ಧೃಢವಾಗಿಲ್ಲ. ಇನ್ನು ಸವಿತಾ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬ ಮೂಲಗಳು ಸ್ಪಷನೆ ನೀಡಿವೆ.  ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಶಿಕ್ಷಣ ಸಚಿವ ಇಂದರ್‌ ಸಿಂಗ್‌ ಅವರ ಪುತ್ರ ದೇವರಾಜ್‌ ಸಿಂಗ್‌, ಸವಿತಾ ಅವರನ್ನು ವಿವಾಹವಾಗಿದ್ದರು. 


ಇನ್ನು ಈ ಘಟನೆ ನಡೆದ ಸಂದರ್ಭದಲ್ಲಿ ಸಚಿವ ಇಂದರ್ ಸಿಂಗ್ ಅವರು ಭೋಪಾಲ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಸವಿತಾ ಅವರ ಪತಿ ದೇವರಾಜ್ ಸಿಂಗ್ ಪಕ್ಕದ ಹಳ್ಳಿಯಾದ ಮೊಹಮ್ಮದ್ ಖೇರಾದಲ್ಲಿ ಸಂಬಂಧಿಕರ ಮದುವೆಗೆ ಹಾಜರಾಗಿದ್ದರಂತೆ. ಮನೆಯಲ್ಲಿ ಇತರ ಸಂಬಂಧಿಕರು ಇದ್ದಾಗಲೇ ಈ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.


​ಇದನ್ನು ಓದಿ: ವಿದೇಶಕ್ಕೆ ಹಾರಿದ ಹಿಜಾಬ್ ಹುಡುಗಿ ಮುಸ್ಕಾನ್ , ತನಿಖೆ ನಡೆಸುವಂತೆ ಕೇಳಿಬಂದಿದೆ ಒತ್ತಾಯ


ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ