ಗ್ಲೋಬಲ್‌ ಆರ್ಯಭಟ ಪ್ರಶಸ್ತಿ ಪುರಸ್ಕೃತೆ ʼಸಹನಾʼ: ಇಲ್ಲಿದೆ ಕರಾಟೆ ಕ್ವೀನ್‌ ಸಾಧನೆಯ ಹಾದಿ

ಭರತನಾಟ್ಯ, ಸಂಗೀತ, ಕರಾಟೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಈಕೆಯ ಹೆಸರು ಸಹನಾ ಎಂ. ಶೆಟ್ಟಿ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಗ್ರಾಮದ ಮೋಹನ್‌ ಶೆಟ್ಟಿ ಮತ್ತು ಹರಿಣಾಕ್ಷಿ ಎಂ ಶೆಟ್ಟಿ ದಂಪತಿಯ ಪುತ್ರಿ. 

Written by - Bhavishya Shetty | Last Updated : May 11, 2022, 11:44 AM IST
  • ಭರತನಾಟ್ಯ, ಸಂಗೀತ, ಕರಾಟೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಹನಾ ಎಂ. ಶೆಟ್ಟಿ
  • ದಕ್ಷಿಣ ಕನ್ನಡದ ಪ್ರತಿಭಾನ್ವಿತ ಸಾಧಕಿ ಸಹನಾ ಬಗ್ಗೆ ಇಲ್ಲಿದೆ ಮಾಹಿತಿ
  • ಗ್ಲೋಬಲ್‌ ಆರ್ಯಭಟ ಪ್ರಶಸ್ತಿಗೆ ಭಾಜನರಾದ ಸಹನಾ
ಗ್ಲೋಬಲ್‌ ಆರ್ಯಭಟ ಪ್ರಶಸ್ತಿ ಪುರಸ್ಕೃತೆ ʼಸಹನಾʼ: ಇಲ್ಲಿದೆ ಕರಾಟೆ ಕ್ವೀನ್‌ ಸಾಧನೆಯ ಹಾದಿ  title=
Sahana M Shetty

ಸಾಧನೆ ಮಾಡೋದಕ್ಕೆ ಕನಸಿನ ಜೊತೆಗೆ ಮನಸಿರಬೇಕು. ಹೀಗಿದ್ದಾಗ ಮಾತ್ರ ಎಂತಹ ಅಡಚಣೆಗಳು ಎದುರಾದರೂ ಗುರಿ ಮುಟ್ಟಲು ಸಾಧ್ಯ. ಹೆಣ್ಣು ಪ್ರತೀ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸುತ್ತಿದ್ದಾಳೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆಕೆಗೆ ಇಂದಿನ ಸಮಾಜದಲ್ಲಿ ಸಿಗುವ ಪ್ರೋತ್ಸಾಹವನ್ನು ಮೆಚ್ಚಲೇಬೇಕು. ಇದೀಗ ಅಂತಹದ್ದೇ ಪ್ರೋತ್ಸಾಹದ ಮೂಲಕ ಸಾಧನೆ ಮಾಡಿರುವ ವ್ಯಕ್ತಿಯ ಬಗ್ಗೆ ನಿಮಗೆ ತಿಳಿಸಲಿದ್ದೇವೆ. 

ಇದನ್ನು ಓದಿ: ಯಕ್ಷಗಾನಕ್ಕೂ ಸೈ... ಲೀಫ್‌ ಆರ್ಟ್‌ಗೂ ಸೈ... ʼಮಂದಾರʼ ಬಹುಮುಖ ಪ್ರತಿಭೆಯ ಸಾಧನೆಗೆ ಕರಾವಳಿಯೇ ಫಿದಾ

ಭರತನಾಟ್ಯ, ಸಂಗೀತ, ಕರಾಟೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಈಕೆಯ ಹೆಸರು ಸಹನಾ ಎಂ. ಶೆಟ್ಟಿ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಗ್ರಾಮದ ಮೋಹನ್‌ ಶೆಟ್ಟಿ ಮತ್ತು ಹರಿಣಾಕ್ಷಿ ಎಂ ಶೆಟ್ಟಿ ದಂಪತಿಯ ಪುತ್ರಿ. ಸದ್ಯ ಬಂಟ್ವಾಳದ ಎಸ್‌ವಿಎಸ್‌ ಕಾಲೇಜಿನಲ್ಲಿ ಅಂತಿಮ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿರುವ ಈಕೆ ಗ್ಲೋಬಲ್‌ ಆರ್ಯಭಟ ಪ್ರಶಸ್ತಿ ಪುರಸ್ಕೃತೆ. 

ಹೆಜ್ಜೆ ಇಡದ ಕ್ಷೇತ್ರವಿಲ್ಲ ಎಂಬಂತೆ ಸಾಧನೆ ಮಾಡುತ್ತಿರುವ ಇವರು "Asia Vedic Culture Foundation" ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿ ʼಗ್ಲೋಬಲ್‌ ಆರ್ಯಭಟ ಪ್ರಶಸ್ತಿʼ ಗೌರವಕ್ಕೆ ಭಾಜನರಾಗಿದ್ದಾರೆ. 

ಬಾಲ್ಯದಿಂದಲೇ ಸಾಧನೆಯ ಹಾದಿ ಹಿಡಿದ ಈಕೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರ ಹೀಗೆ ಹಲವಾರು ವೇದಿಕೆಗಳಲ್ಲಿ ತನ್ನ ಕಲೆ ಸಾಮಾರ್ಥ್ಯವನ್ನು ಪ್ರದರ್ಶಿಸಿದ್ದಾರೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿರುವ ಸಹನಾ, ಭರತನಾಟ್ಯದಲ್ಲಿ ವಿದ್ವತ್‌ ಹಾಗೂ ಕರಾಟೆಯಲ್ಲಿ ಬ್ಲ್ಯಾಕ್‌ ಬೆಲ್ಟ್‌ ಪಡೆದಿದ್ದಾರೆ. ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ ಸೇರಿ ಮಧ್ಯಪ್ರದೇಶ, ನವದೆಹಲಿ, ಹರಿಯಾಣ ಮೊದಲಾದ ರಾಷ್ಟ್ರೀಯ ವೇದಿಕೆಗಳಲ್ಲೂ ಸಾಧನೆ ಪ್ರದರ್ಶನ ಮಾಡಿ ಚಿನ್ನದ ಪದಕಗಳನ್ನು ಇವರು ಪಡೆದಿದ್ದಾರೆ.  

ಇದನ್ನು ಓದಿ: ಚಿತ್ರಗಳಿಗೆ ಕಲಾಕುಂಚದಲ್ಲಿ ಜೀವಕಳೆ ತುಂಬುವ ಅಪೂರ್ವ ʼಚೇತನʼ

ಸಹನಾಗೆ ಸಂದ ಗೌರವ: 
ಈಕೆಯ ಸಾಧನೆ ಮೆಚ್ಚಿ ತೌಳವ ಕುಮಾರಿ ಅವಾರ್ಡ್‌, ಭಾರತ ಕಲಾ ರತ್ನ ಅವಾರ್ಡ್‌ ಸೇರಿ ಹತ್ತು ಹಲವಾರು ಪ್ರಶಸ್ತಿಗಳ ಗರಿ ಸಂದಿದೆ. ಇದೀಗ ಪ್ರತಿಷ್ಟಿತ ಗ್ಲೋಬಲ್‌ ಆರ್ಯಭಟ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂಬುದು ಸಂತಸದ ಸಂಗತಿ.

ಸಹನಾ ಅವರ ಈ ಸಾಧನೆಯ ಹಿಂದೆ ಕುಟುಂಬ ವರ್ಗ, ಗುರು ಹಿರಿಯ ಪ್ರೋತ್ಸಾಹವೂ ಇದೆ. ಸಾಧನೆಯ ಹಾದಿಯಲ್ಲಿರುವ ಸಹನಾ ಇನ್ನಷ್ಟು ಬೆಳೆಯಲಿ ಎಂಬುದೇ ನಮ್ಮ ಆಶಯ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News