ಬೆಳಗಾವಿ: ಕಾರು ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ‌ತಿರುಗಿ  ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಹೊರವಲಯದ ಗೌಂಡವಾಡ ಗ್ರಾಮದಲ್ಲಿ ನಡೆದಿದೆ. ನಂತರ ನಡೆದ ಹಿಂಸಾಚಾರದಲ್ಲಿ ಹತ್ತಾರು ವಾಹನ ಮತ್ತು ಮೇವಿನ ಬಣವೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.


COMMERCIAL BREAK
SCROLL TO CONTINUE READING

ಹಳೆಯ ವೈಷಮ್ಯ ಹಾಗೂ ಕಾರು ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ಚಾಕುವಿನಿಂದ ಇರಿದು 37 ವರ್ಷದ ಸತೀಶ್ ಪಾಟೀಲ್ ಎಂಬುವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಬಳಿಕ ಕುಂದಾನಗರಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.


ಇದನ್ನೂ ಓದಿ: Bengaluru Traffic Police : ರಸ್ತೆ ಗುಂಡಿ ಇದ್ರೂ BBMP ಡೋಂಟ್ ಕೇರ್: ರಸ್ತೆ ಗುಂಡಿ ಮುಚ್ಚಿದ್ರು ಟ್ರಾಫಿಕ್ ಪೊಲೀಸ್!


ಕಾಳಭೈರವನಾಥ ದೇವಸ್ಥಾನಕ್ಕೆ ಸೇರಿದ ಜಮೀನು ವಿಚಾರವಾಗಿ ವೈಷಮ್ಯವಿತ್ತು ಎನ್ನಲಾಗಿದೆ. ಹಲವು ವರ್ಷಗಳಿಂದ ಇದ್ದ ಈ ವಿವಾದವು ಕೋರ್ಟ್ ಮೆಟ್ಟಿಲೇರಿತ್ತು. ದೇವಸ್ಥಾನಕ್ಕೆ ಮೀಸಲಿಟ್ಟ ಜಾಗ ಮಾರಲು ಹುನ್ನಾರ ಆರೋಪ ಹಿನ್ನೆಲೆ ದೇವಸ್ಥಾನದ ಜಮೀನು ಉಳಿವಿಗಾಗಿ ಸತೀಶ್ ಪಾಟೀಲ್ ಹೋರಾಟ ಮಾಡಿದ್ದರಂತೆ.


‘ಭೂ ಉಳಿತಾಯ ಮೋರ್ಚಾ’ ಹೆಸರಿನಲ್ಲಿ ಹೋರಾಟ ಮಾಡಿದ್ದ ಸತೀಶ್ ಗ್ರಾಮದಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಸತೀಶ್ ಕೊಲೆ ಹಿನ್ನೆಲೆ ಗ್ರಾಮದಲ್ಲಿ ಹಿಂಸಾಚಾರ ನಡೆದಿದೆ. ಇನ್ನೋವಾ ಸೇರಿ 4 ಕಾರು, 1 ಟ್ರ್ಯಾಕ್ಟರ್, 2 ಟೆಂಪೋ ಸೇರಿ ಹಲವು ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ಆಗಮಿಸಿ 3 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ.


ಇದನ್ನೂ ಓದಿ: Karnataka : ಜೈಲಲ್ಲಿದ್ದ ಮಗನಿಗೆ ಮಾದಕವಸ್ತು ನೀಡಲು ಯತ್ನಿಸಿದ ಪೊಲೀಸರ ಅತಿಥಿಯಾದ ತಾಯಿ!


ಗ್ರಾಮದ ಹಲವು ಮನೆಗಳ ಮೇಲೂ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಗಲಾಟೆ ಮಾಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಐವರು ಆರೋಪಿಗಳು ವಶಕ್ಕೆ ತೆಗೆದುಕೊಳ್ಳಲಾಗಿದೆ. ಗಲಾಟೆ ಪ್ರಕರಣ ಸಂಬಂಧ ಪೊಲೀಸರು 15 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಹಿನ್ನೆಲೆ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.