ಪಂಜಾಬ್ ಖ್ಯಾತ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಪಂಜಾಬ್ ಪೊಲೀಸರಿಗೆ ಭರ್ಜರಿ ಯಶಸ್ಸು ಸಿಕ್ಕಿದ್ದು, ಶೂಟರ್‌ಗಳಿಗೆ ವಾಹನ ಒದಗಿಸಿದ್ದ ಕ್ರೆಡಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಇದನ್ನು ದೊಡ್ಡ ಯಶಸ್ಸು ಎಂದು ಪರಿಗಣಿಸುತ್ತಿದ್ದು, ಮಾನ್ಸಾ ಪೊಲೀಸರು ಕ್ರೆಡಾನನ್ನು ವಿಚಾರಣೆ ನಡೆಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: Operation Blue Star anniversary : ಗೋಲ್ಡನ್ ಟೆಂಪಲ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆ ಹೇಗಿತ್ತು? ಇಲ್ಲಿ ನೋಡಿ


ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮೇ 29 ರಂದು ಸಿಧು ಮೂಸೆವಾಲಾರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸಿಧು ತನ್ನ ಇಬ್ಬರು ಸ್ನೇಹಿತರೊಂದಿಗೆ ತನ್ನ ಸ್ವಂತ ಕಾರಿನಲ್ಲಿ ಚಿಕ್ಕಮ್ಮನನ್ನು ಭೇಟಿಯಾಗಲು ಹೋಗುತ್ತಿದ್ದಾಗ, ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದ ಬಳಿ ಶೂಟರ್‌ಗಳು ದಾಳಿ ನಡೆಸಿ ಮುಸೇವಾಲಾ ಅವರ ವಾಹನದ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಸಿಧು ಮುಸೇವಾಲಾ ಸಾವನ್ನಪ್ಪಿದ್ದು, ವಾಹನದಲ್ಲಿದ್ದ ಅವರ ಇಬ್ಬರು ಸ್ನೇಹಿತರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.


ಇನ್ನು ಸಿಧು ಮೂಸೆವಾಲಾ ಅವರ ಹತ್ಯೆಯು ವಿಕ್ರಮಜಿತ್ ಅಲಿಯಾಸ್ ವಿಕ್ಕಿ ಮಿದ್ದುಖೇರಾ ಅವರ ಹತ್ಯೆಯ ಸೇಡು ಆಗಿರಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದರು. ದೆಹಲಿ ಪೊಲೀಸ್ ವಿಶೇಷ ಸೆಲ್ ನೀಡಿದ್ದ ವರದಿ ಪ್ರಕಾರ ಮೂಸ್ ವಾಲಾ ಮತ್ತು ಅವರ ಮ್ಯಾನೇಜರ್ ಇಬ್ಬರೂ ಕಳೆದ ವರ್ಷ ಆಗಸ್ಟ್‌ನಲ್ಲಿ ವಿಕ್ಕಿ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಈ ಕೇಸ್‌ಗಾಗಿ ದೆಹಲಿ ಪೊಲೀಸ್ ವಿಶೇಷ ಸೆಲ್ ಇತ್ತೀಚೆಗೆ ಕುಖ್ಯಾತ ದರೋಡೆಕೋರ ನೀರಜ್ ಬವಾನಿಯಾ ಮತ್ತು ಟಿಲ್ಲು ತಾಜ್‌ಪುರಿಯ ನಂಟಿನ ಬಗ್ಗೆ ಮಾಹಿತಿ ಕಲೆ ಹಾಕಿತ್ತು. 


ಇದನ್ನು ಓದಿ: ಹಲವು ವರ್ಷಗಳಿಂದ ಮಂತ್ರ ಜಪಿಸಿದರೂ ಜೀವನ ಬದಲಾಗಿಲ್ಲವೇ? ಈ ತಪ್ಪುಗಳು ಕಾರಣ


ವಿಕ್ಕಿ ಹತ್ಯೆ ಕೇಸ್‌ ಬೆನ್ನಟ್ಟಿದ್ದ ದೆಹಲಿ ಪೊಲೀಸರು ಸುಮಾರು ಹನ್ನೆರಡು ದುಷ್ಕರ್ಮಿಗಳನ್ನು ಬಂಧಿಸಿದ್ದರು. ಬಂಧಿತರನ್ನು ಶಾರ್ಪ್ ಶೂಟರ್ ಸಜ್ಜನ್ ಸಿಂಗ್ ಅಲಿಯಾಸ್ ಭೋಲು, ಅನಿಲ್ ಕುಮಾರ್ ಅಲಿಯಾಸ್ ಲತ್ ಮತ್ತು ಅಜಯ್ ಕುಮಾರ್ ಅಲಿಯಾಸ್ ಸನ್ನಿ ಕೌಶಲ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳ ವಿಚಾರಣೆ ವೇಳೆ ಬಂಧಿತ ಮೂವರು ವಿಕ್ಕಿ ಕೊಲೆ ಪ್ರಕರಣದಲ್ಲಿ ಮೂಸೆವಾಲಾ ಮತ್ತು ಆತನ ಮ್ಯಾನೇಜರ್ ಭಾಗಿಯಾಗಿರುವ ಬಗ್ಗೆ ಬಹಿರಂಗಪಡಿಸಿದ್ದರು ಎನ್ನಲಾಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.