Crime News: ಬಂಗಾರ ಕದಿಯೋಕೆ ಮನೆ ಕಳ್ಳತನ ಮಾಡಬೇಕು..ಇಲ್ಲ ಅಂದ್ರೆ ರಸ್ತೆಯಲ್ಲಿ ಮಹಿಳೆಯರ ಸರಗಳ್ಳತನ ಮಾಡಬೇಕು... ದರೋಡೆ ಮಾಡಬೇಕು.. ಇಷ್ಟೆಲ್ಲಾ ಕಷ್ಟಪಟ್ಟು ಕದ್ರೂ...ಅದನ್ನು ಮೂರು ಕಾಸಿಗೆ ಮಾರಬೇಕು... ಹೆವಿ ರಿಸ್ಕ್ ಲೋ.., ಇನ್ ಕೇಸ್...ಸಿಕ್ ಬಿದ್ರೆ...ಪೊಲೀಸರಿಂದ ಕೇಸ್ ಮೇಲೆ ಕೇಸು....ಇಷ್ಟೆಲ್ಲಾ ರಿಸ್ಕ್ ಯಾಕೆ ಅಂತಾ... ಮೊದಲ ಬಾರಿಗೆ ಅಡಿಕೆ ಮೇಲೆ ಕಣ್ಣು ನೆಟ್ಟ ಶೋಕಿಲಾಲ ಹುಡುಗರು ಎಷ್ಟು ಮನೆಗಳಲ್ಲಿ ಕಳ್ಳತನ ಮಾಡಿದ್ರು ಗೊತ್ತಾ? ಕಳ್ಳತನ (Theft) ಮಾಡಲು ಅವರು ರೂಪಿಸುತ್ತಿದ್ದ ಸ್ಕೆಚ್ ಹೇಗಿತ್ತು ಗೊತ್ತಾ.. ಇಲ್ಲಿದೆ ರೋಚಕ ಸ್ಟೋರಿ...                                                          
ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಅಡಿಕೆಯನ್ನು ಬೆಳೆಗಾರರು ಉಳಿಸಿಕೊಳ್ಳುವುದು ಕಷ್ಟವಾಗಿದೆ. ರಾತ್ರಿಯಾದರೆ ತೋಟದ ಮನೆಯಲ್ಲಿ ಸಂಗ್ರಹಿಸಿದ್ದ ಅಡಿಕೆ ಮೂಟೆಗಳನ್ನು ಕಾಪಾಡಿಕೊಳ್ಳುವುದು ದುಸ್ತರವಾಗಿದೆ. ಇದಕ್ಕೆ ಕನ್ನಡಿ ಹಿಡಿದಂತಿದೆ ಮಲೆನಾಡಿನ ಕೆಲವು ಗ್ರಾಮಗಳಲ್ಲಿ ನಡೆದ ಸರಣಿ ಅಡಿಕೆ ಕಳ್ಳತನ ಪ್ರಕರಣ. ರಾತ್ರಿಯಾದರೆ ವಾಹನಗಳಲ್ಲಿ ಬರುವ ಕಳ್ಳರು (Thieves) ತೋಟದ ಮನೆಗಳಲ್ಲಿ ಸಂಗ್ರಹಿಸಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಅಡಿಕೆಯನ್ನು ಕದ್ದು ಸಾಗಿಸುತ್ತಾರೆ. 


COMMERCIAL BREAK
SCROLL TO CONTINUE READING

ಸಣ್ಣ ಹಿಡುವಳಿದಾರರ ಮನೆಯಲ್ಲಿಯೇ ಹೆಚ್ಚು ಕಳ್ಳತನ! 
ಹೇಳಿ ಕೇಳಿ ಇದು ಮದುವೆ ಶುಭಕಾರ್ಯಗಳ ಸಮಯ. ಮನೆಯಲ್ಲಿರುವ ಅಡಿಕೆ (Nuts)ಯನ್ನು ( ಮಾರಿಯೆ ಮದುವೆ ಮಾಡಬೇಕಾದ ಅನಿವಾರ್ಯತೆ ರೈತರದ್ದಾಗಿರುತ್ತದೆ. ಬಂಗಾರದ (Gold) ಬೆಲೆ 75 ಸಾವಿರ ಗಡಿ ದಾಟಿರುವಾಗ ಮಗಳ ಮದುವೆ ಮಾಡಿಸುವ ತಂದೆ ಎರಡು ಕ್ವಿಂಟಾಲ್ ಅಡಿಕೆಯನ್ನಾದರೂ ಮಾರಬೇಕಾಗುತ್ತದೆ. ಅಡಿಕೆ ಮೂಟೆಗಳೇ ಬಡ ರೈತರ ಪಾಲಿನ ದಾರಿದೀಪವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿದ್ದ ಎರಡು ಮೂರು ಅಡಿಕೆ ಮೂಟೆಗಳನ್ನು ಕಳ್ಳರು ಕದ್ದಾಗ ಆ ನೊಂದ ಕುಟುಂಬ ಆರ್ಥಿಕವಾಗಿ ದುರ್ಬಲವಾಗುತ್ತದೆ. ಬದುಕುವ ಆಸೆಯನ್ನೇ ಕಳೆದುಕೊಳ್ಳುತ್ತದೆ. ಹೀಗಿರುವಾಗ ಮೊದಲ ಬಾರಿ ಅಡಿಕೆ ಕಳ್ಳತನಕ್ಕೆ ಲಗ್ಗೆಯಿಟ್ಟ ಈ ಐವರು ಕಳ್ಳರ ತಂಡ ಸಣ್ಣ ಹಿಡುವಳಿದಾರರ ಮನೆಗಳನ್ನೇ ಕೇಂದ್ರಿಕರಿಸಿಕೊಂಡು ಅಡಿಕೆ ಮೂಟೆಯನ್ನ ಕಳ್ಳತನ ಮಾಡಿತ್ತು. ಓರ್ವ ರೈತನ ಮನೆಯಲ್ಲಿ ಶುಂಠಿ ಕಳ್ಳತನ ಮಾಡಿತ್ತು. ಅದನ್ನು ಮಾರಿದ್ದ ಆರೋಪಿಗಳಿಂದ 50 ಸಾವಿರ ಹಣವನ್ನು ರಿಕವರಿ ಮಾಡಲಾಗಿದೆ.


ಇದನ್ನೂ ಓದಿ- ಮಹಿಳೆಯ ಕತ್ತು, ದೇಹದ ಅಂಗಾಂಗ ಸೀಳಿ ಭೀಕರ ಕೊಲೆ..!


ಇತ್ತೀಚೆಗಷ್ಟೇ, ಸಾಗರ ಗ್ರಾಮಾಂತರ ಠಾಣೆ (Sagar Rural Station) ವ್ಯಾಪ್ತಿಯಲ್ಲಿ ಸರಣಿ ಅಡಿಕೆ ಕಳ್ಳತನ ಪ್ರಕರಣಗಳು (Serial Nut Theft Cases) ದಾಖಲಾಗಿದ್ದವು. ಎಸ್‌ಪಿ ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ಸಾಗರ ಡಿವೈಎಸ್ಪಿ ಗೋಪಾಲ್ ನಾಯಕ್ ನೇತ್ಪತ್ವದಲ್ಲಿ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಮಹಾಬಲೇಶ್ವರ ರವರ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿತ್ತು. 


ಪೊಲೀಸರಿಗೆ ಸವಾಲಾಗಿದ್ದ ಈ ಪ್ರಕರಣವನ್ನು ಭೇದಿಸುವಲ್ಲಿ ಸಾಗರ ಗ್ರಾಮಾಂತರ ಪೊಲೀಸರು (Sagar Rural Police) ಯಶಸ್ವಿಯಾಗಿದ್ದಾರೆ. ಹತ್ತಾರು ಕಡೆ 20 ಕ್ಕೂ ಹೆಚ್ಚು ಅಡಿಕೆ ಮೂಟೆ ಕದ್ದಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತುಕ್‌ರಾಜ್‌, ಹನುಮಂತಪ್ಪ, ರಾಕೇಶ್‌, ಅಭಿಷೇಕ್‌, ಶಿವಕುಮಾರ್‌ ಬಂಧಿತ ಆರೋಪಿಗಳಾಗಿದ್ದು, ಎಲ್ಲರೂ ಶಿಕಾರಿಪುರ ತಾಲೂಕಿನ ಸಂಡಾ ಪೋಸ್ಟ್ ನ ಹರಗುವಳ್ಳಿ ಗ್ರಾಮದವರೇ ಆಗಿದ್ದಾರೆ. 


ಬಂಧಿತರೆಲ್ಲರೂ 20 ರಿಂದ 24 ವಯಸ್ಸಿನ ಆಸುಪಾಸಿನವರಾಗಿದ್ದಾರೆ.. ಬಂಧಿತರಿಂದ 8.19 ಲಕ್ಷ ರೂ. ಮೌಲ್ಯದ ಅಡಿಕೆ ಹಾಗೂ ವಾಹನ ಸೇರಿದಂತೆ ಹದಿನೈದು ಲಕ್ಷಕ್ಕೂ ಅಧಿಕ ಮಾಲನ್ನು ವಶಕ್ಕೆ ಪಡೆಯಲಾಗಿದೆ. ರಾತ್ರೋ ರಾತ್ರಿ ಕಳ್ಳತನಕ್ಕೆ ಅಣಿಯಾಗುತ್ತಿದ್ದ ಗ್ಯಾಂಗ್ ಸಣ್ಣ ವಾಹನ ಟಾಟಾ ಏಸ್ ನ್ನು ಕೃತ್ಯಕ್ಕೆ ಬಳಸುತ್ತಿದ್ದರು. ಸಾಗರ ಗ್ರಾಮಾಂತರ, ಆನಂದಪುರ, ಕಾರ್ಗಲ್‌, ಸೊರಬ ಠಾಣೆಗಳ ಒಟ್ಟು 8 ಪ್ರಕರಣಗಳಲ್ಲಿ  ಆರೋಪಿಗಳು ಭಾಗಿಯಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ. 


ಇದನ್ನೂ ಓದಿ- ಕಾರು-ಟ್ರಕ್ ನಡುವೆ ಭೀಕರ ಅಪಘಾತ: 6 ಮಂದಿ ದುರ್ಮರಣ..!


ಹಗಲು ಹೊತ್ತು ಸ್ಕೆಚ್ ಹಾಕುತ್ತಿದ್ದ ಆರೋಪಿಗಳು!
ಹಾಗೆ ನೋಡಿದ್ರೆ ಕಳ್ಳತನ ಮಾಡಿದ ಆರೋಪಿಗಳು ಈ ಹಿಂದೆ ಯಾವುದೇ ಕ್ರೈಂ ಇತಿಹಾಸವನ್ನು ಹೊಂದಿಲ್ಲ. ಮನೆಯಲ್ಲಿ ಬಡತನವಿದ್ದ ಕಾರಣಕ್ಕೆ ಶೋಕಿಲಾಲರಾಗಲು ಮುಂದಾದಾಗ ಹಣಕ್ಕಾಗಿ ಅವರುಗಳು ಅಡಿಕೆ ಕದಿಯುವುದಕ್ಕೆ ಅಣಿಯಾದ್ರು. ಆರೋಪಿಗಳ ಬಳಿ ಹೇಗೂ  ಟಾಟಾ ಏಸ್ ಹಾಗೂ ಮಹಿಂದ್ರಾ ಪಿಕ್ ಅಪ್ ವಾಹನಗಳಿದ್ದವು. ಹಗಲು ಹೊತ್ತು ಹಳ್ಳಿಯ ಮೇಲೆ ಹೋಗುತ್ತಿದ್ದ ಇವರು ಅಡಿಕೆ ತೋಟದ ಮನೆಗಳ ಮೇಲೆ ಮತ್ತು ಅಡಿಕೆ ಗೋದಾಮು ದಾಸ್ತಾನು ಮಾಡುವವರ ಮೇಲೆ ಕಣ್ಣು ನೆಡುತ್ತಿದ್ದರು. ಮನೆಯಲ್ಲಿ ನಾಯಿ ಇದೆಯಾ ಎಂಬುದನ್ನು ಖಾತರಿ ಮಾಡಿಕೊಳ್ಳುತ್ತಿದ್ದರು. ವೆಹಿಕಲ್ ಸುಗಮ ಸಂಚಾರಕ್ಕೆ ಪೂರಕ ರಸ್ತೆಗಳನ್ನು ಹುಡುಕುತ್ತಿದ್ದರು. ವಾಹನ ಹೇಗೆ ಬರಬೇಕು.., ಹೋಗಬೇಕು.., ರಿವರ್ಸ್ ತೆಗೆದುಕೊಳ್ಳಲು ಅವಕಾಶ ಇದೆಯಾ.., ಕಳ್ಳತನ ನಂತರ ಹೇಗೆ ಪಾರಾಗಬೇಕು.., ಅಡ್ಡ ರಸ್ತೆಗಳಿವೆಯಾ.., ಆ ದಾರಿಯಲ್ಲಿ ಸಾಗಿದರೆ ಸಿಸಿ ಕ್ಯಾಮರಗಳು ಇದೆಯಾ.., ಹೇಗೆ ರಾತ್ರಿ ಹೊತ್ತು ಲೈಟಿಲ್ಲದೆ ಗಾಡಿ ಎಲ್ಲಿ ನಿಲ್ಲಿಸಬಹುದು.., ಅಡಿಕೆ ಕದ್ದ ನಂತರ ಸಾಗಿಸುವ ಸಮಯ ಸಂದರ್ಭ..., ಹೀಗೆ ಎಲ್ಲವನ್ನು ಅವಲೋಕಿಸುವ ಆರೋಪಿಗಳು ನಂತರ ಸ್ಕೆಚ್ ರೆಡಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 


ಕೂಲಿಯಾಳುಗಳ ರೀತಿ ತೆರೆದ ವಾಹನದಲ್ಲಿ ಹಳ್ಳಿ ಪ್ರವೇಶಿಸುತ್ತಿದ್ದ ಆರೋಪಿಗಳು ಯಾರಿಗೂ ಅನುಮಾನ ಬಾರದ ರೀತಿ ಕೂಲಿಯಾಳುಗಳನ್ನು ತೆರೆದ ವಾಹನದಲ್ಲಿ ಸಾಗಿಸುವ ರೀತಿಯಲ್ಲಿ ತಮ್ಮವರನ್ನು ಕರೆದುಕೊಂಡು ಹಗಲು ಹೊತ್ತಿನಲ್ಲಿಯೇ ಹಳ್ಳಿ ಸುತ್ತು ಹಾಕುತ್ತಿದ್ದರು. ಊರಿನಲ್ಲಿ ಯಾರ ತೋಟ ಚೆನ್ನಾಗಿದೆ ಅವರ ಬಳಿ ಕೆಲಸಕ್ಕೆ ಸೇರಿಕೊಳ್ಳುವುದು. ನಂತರ ಸುತ್ತಮುತ್ತಲ ಪರಿಸರವನ್ನು ಅವಲೋಕಿಸಿದ ಬಳಿಕ ಮುಂದೊಂದು ದಿನ ಕಳ್ಳತನಕ್ಕೆ ಪ್ಲಾನ್ ಮಾಡುತ್ತಿದ್ದರು. ಹಗಲು ಹೊತ್ತು ತೋಟದ ಕೂಲಿಯಾಳುಗಳಂತೆ ನಟಿಸುತ್ತಿದ್ದ ಆರೋಪಿಗಳು ಯಾರ ಮನೆಗಳಲ್ಲಿ ಅಡಿಕೆ ಮೂಟೆಗಳನ್ನು ಮನೆ ಹೊರಗೆ ಸ್ಟಾಕ್ ಇಡಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.