Cheating Case: ತಂತ್ರಜ್ಞಾನ ಅಭಿವೃದ್ಧಿಯಾದಂತೆ ಸೈಬರ್‌ ವಂಚನೆಗಳ ಸಂಖ್ಯೆಯೂ ಜಾಸ್ತಿಯಾಗುತ್ತಿವೆ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಖತರ್ನಾಕ್‌ ಖದೀಮರು ಸಾವಿರಾರು ಜನರಿಗೆ ಕೋಟಿ ಕೋಟಿ ಲೆಕ್ಕದಲ್ಲಿ ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆನ್‌ಲೈನ್‌ ವಂಚನೆ ಅನ್ನೋದು ಇತ್ತೀಚೆಗೆ ಕಾಮನ್‌ ಆಗಿದೆ. ಅದೇ ರೀತಿಯ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ನಕಲಿ ಬಂಡವಾಳ ಹೂಡಿಕೆ ಯೋಜನೆ ಮೂಲಕ ರಾಜಸ್ಥಾನದ ಅಜ್ಮೀರ್‌ ಮೂಲದ 11ನೇ ತರಗತಿ ವಿದ್ಯಾರ್ಥಿ ಬರೋಬ್ಬರಿ 200 ಮಂದಿಗೆ ವಂಚಿಸಿ ಸಿಕ್ಕಿಬಿದ್ದಿದ್ದಾನೆ. ಯೂಟ್ಯೂಬ್ ಇನ್ಫೂಯೆನ್ಸರ್ ಆಗಿರುವ 19 ವರ್ಷದ ಬಾಲಕ ಕಾಸಿಫ್ ಮಿಶ್ರಾ ಆನ್‌ಲೈನ್ ಮೂಲಕ ನಕಲಿ ಬಂಡವಾಳ ಹೂಡಿಕೆ ಯೋಜನೆಯಡಿ 200 ಮಂದಿಗೆ ಸುಮಾರು 42 ಲಕ್ಷ ರೂ. ವಂಚಿಸಿದ್ದಾನೆಂದು ವರದಿಯಾಗಿದೆ.  


ಇದನ್ನೂ ಓದಿ: ಒಂದೇ ಒಂದು ರೀಲ್‌.. ಇಂಟರ್‌ನೆಟ್‌ ಫುಲ್‌ ಹ್ಯಾಂಗ್‌, ಇನ್ಟಾದಲ್ಲಿ ಈಕೆಯದ್ದೇ ಹವಾ..! ವಿಡಿಯೋ ಇಲ್ಲಿದೆ..


ಆರೋಪಿ ಕಾಸಿಫ್, ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲಕ್ಷಾಂತರ ಫಾಲೋಫರ್ಸ್ ಹೊಂದಿದ್ದು, ತನ್ನ ಯೂಟ್ಯೂಬ್‌ ಚಾನೆಲ್ ಮೂಲಕ ಬಂಡವಾಳ ಹೂಡಿಕೆಗೆ ಆಮೀಷವೊಡ್ಡಿದ್ದಾನೆ. ಆರಂಭದಲ್ಲಿ ಸಣ್ಣ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದವರಿಗೆ ಹೆಚ್ಚು ಹಣ ನೀಡಿ ನಂಬಿಸಿದ್ದಾನೆ. 


ಬಳಿಕ ನಿಮ್ಮ ಸ್ನೇಹಿತರು ಮತ್ತು ಪರಿಚಿತರಿಗೆ ಹೇಳಿ ಅಂತಾ ಮನವೊಲಿಸಿದ್ದಾನೆ. ನಂತರ 99,999 ರೂ. ಬಂಡವಾಳ ಹೂಡಿದರೆ 13 ತಿಂಗಳಲ್ಲಿ 13,99,999 ರೂ. ಗಳಿಸುತ್ತೀರಿ ಅಂತಾ ಆಮೀಷ ಒಡ್ಡಿದ್ದಾನೆ. ಬಾಲಕನ ಮಾತು ನಂಬಿ ಆತನ ಆಮೀಷದ ಬಲೆಗೆ ಸುಮಾರು 200 ಮಂದಿ ಬಿದ್ದಿದ್ದಾರೆ.


ಇದನ್ನೂ ಓದಿ: ಉದ್ಗಾಟನೆಯಾದರೂ ಮುಗಿಯದ ಅಯೋಧ್ಯೆ ರಾಮಮಂದಿರ ಕಾಮಗಾರಿ, ಮಂದಿರ ಪೂರ್ಣಗೊಳ್ಳಲು ತಡವಾಗುತ್ತಿರುವುದೇಕೆ?


ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಬಾಲಕನ ಮನೆಯಲ್ಲಿ ಹಣ ಎಣಿಸುವ ಯಂತ್ರ, ಕಾರು, ಲ್ಯಾಪ್‌ಟಾಪ್, ಮೊಬೈಲ್ ಮುಂತಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಎರಡು ದಿನಗಳ ಕಾಲ ಆತನನ್ನು ರಿಮ್ಯಾಂಡ್ ಹೋಂಗೆ ಕಳುಹಿಸಿದ್ದಾರೆಂದು ತಿಳಿದುಬಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ