ಬೆಂಗಳೂರು: ಜ್ಯೂಸ್ ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕುಡಿಸಿ ಮಹಿಳೆ ಖಾಸಗಿ ಭಾಗದ ವಿಡಿಯೊ ಚಿತ್ರೀಕರಿಸಿ ಎರಡು ವರ್ಷಗಳಿಂದ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಸೈಕೋ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪಿಯು ಮಹಿಳೆಗೆ ವಿಚಿತ್ರ ರೀತಿಯಲ್ಲಿ ತನ್ನ ಬೇಡಿಕೆ ಇಟ್ಟಿದ್ದಾನೆ. 


COMMERCIAL BREAK
SCROLL TO CONTINUE READING

ತನ್ನೊಂದಿಗೆ ಸ್ಟೈಲ್ ಆಗಿ ಮಾತನಾಡಿ ಲುಕ್ ಕೊಟ್ಟು ಪೋಸ್ ಕೊಡಬೇಕು.‌ ಇಲ್ಲದಿದ್ದರೆ ಸಂತ್ರಸ್ತೆ ಗಂಡನಿಗೆ ವಿಡಿಯೋ ತೋರಿಸುವುದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಎರಡು ವರ್ಷಗಳ ಬಳಿಕ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಂಜುಗಾಗಿ ಬಲೆ ಬೀಸಿದ್ದಾರೆ. 


ಇದನ್ನೂ ಓದಿ- ಆಂಟಿ ಪ್ರೀತ್ಸೆ ಅಂತ ಹಿಂದೆ ಬಿದ್ದ ಪಾಗಲ್ ಪ್ರೇಮಿ! ಒಪ್ಪದ ಮಹಿಳೆಯ ಕೊಲ್ಲಲು ಮಿಕ್ಸಿಲ್ಲಿಟ್ಟ ಬಾಂಬ್?


ಮಂಡ್ಯದ ಡಿಂಕಾ ಗ್ರಾಮದ ನಿವಾಸಿಯಾಗಿರುವ  ಮಂಜುಗೆ ಸುಂಕದಕಟ್ಟೆಯ ಮಹಿಳೆಯ ಪರಿಚಯವಾಗಿತ್ತು. ಒಂದೇ ಊರಿನವರಾಗಿದ್ದ ಸಂತ್ರಸ್ತೆ ಮನೆಯವರ ಜೊತೆ ಸಲುಗೆ ಬೆಳೆದಿತ್ತು. ಬೆಂಗಳೂರಿನಲ್ಲಿರುವ ಮಹಿಳೆ ವಿಳಾಸ ತಿಳಿದುಕೊಂಡು ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಅಲ್ಲದೆ‌ ಮಹಿಳೆ ಕೆಲಸ ಮಾಡುತ್ತಿದ್ದ ಸ್ಥಳ ಸಹ  ಗೊತ್ತಾಗಿತ್ತು.  2020ರಲ್ಲಿ ಮಂಜು ಯುವತಿಯೊಬ್ಬಳ ಜೊತೆ ಸಂತ್ರಸ್ತೆ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ತನ್ನ ಹುಟ್ಟುಹಬ್ಬವಿದ್ದು ಕೇಕ್ ಕಟ್ ಮಾಡೋಣ ಬಾ ಎಂದು ಕರೆದಿದ್ದ. ಆರೋಪಿಯೊಂದಿಗೆ ಯುವತಿ ಇದ್ದ ಕಾರಣ  ಸಂತ್ರಸ್ತೆ ಆತನ ಮನೆಗೆ ಹೋಗಿದ್ದಳು‌. ಈ ವೇಳೆ ಜ್ಯೂಸ್ ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕುಡಿಸಿ ಮೊಬೈಲ್ ನಲ್ಲಿ ಖಾಸಗಿ ಪೋಟೊ ಹಾಗೂ ವಿಡಿಯೊ ಮಾಡಿಕೊಂಡು ತದನಂತರ ಏನೋ ಗೊತ್ತಿಲ್ಲದಂತೆ ವರ್ತಿಸಿದ್ದ‌ ಮಂಜು. 


ಇದನ್ನೂ ಓದಿ- ಪ್ರೇಯಸಿ ಆಸೆ ತೀರಿಸಲು ಅಣ್ಣನ ಮನೆಗೆ ಕನ್ನ: ಹುಡುಗಿ ಜೊತೆ ಗೋವಾದಲ್ಲಿ ಮಜಾ ಮಾಡುತ್ತಿದ್ದವ ಅಂದರ್!


ಮಾರನೇ ದಿನ ವಿಡಿಯೊ ತೋರಿಸಿ ಬ್ಲ್ಯಾಕ್ ಮೇಲ್‌ ಮಾಡಿದ್ದ‌. ತನ್ನೊಂದಿಗೆ ಸ್ಟೈಲ್ ಆಗಿ ಮಾತನಾಡಬೇಕು.‌ ಪೋಸ್ ಕೊಡಬೇಕೆಂದು ವಿಚಿತ್ರ ರೀತಿ ಬಯಕೆ ವ್ಯಕ್ತಪಡಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಕಳೆದ ಎರಡು ವರ್ಷಗಳಿಂದಲೂ ನೀಡುತ್ತಿದ್ದ ಕಿರುಕುಳ ತಾಳಲಾರದೆ ಸುಂಕದಕಟ್ಟೆಯಿಂದ ಕಲ್ಕೆರೆಯಲ್ಲಿ ಸಂತ್ರಸ್ತೆ ಶಿಫ್ಟ್ ಆಗಿದ್ದಳು. ಆರೋಪಿ ಪೊಲೀಸರಿಗೆ ತಿಳಿಸಿದರೆ ಚಾಕುವಿನಿಂದ ಚುಚ್ಚಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.  ಈ ಮಧ್ಯೆ ಪರಪುರುಷ ಕೊಡುತ್ತಿದ್ದ ಕಾಟದ ಬಗ್ಗೆ ಸಂತ್ರಸ್ತೆ ಗಂಡನಿಗೆ ತಿಳಿಸಿದ ಬಳಿಕ ಪೊಲೀಸ್ ಠಾಣೆಗೆ ದೂರ ಸಲ್ಲಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.