ಪ್ರೇಯಸಿ ಆಸೆ ತೀರಿಸಲು ಅಣ್ಣನ ಮನೆಗೆ ಕನ್ನ: ಹುಡುಗಿ ಜೊತೆ ಗೋವಾದಲ್ಲಿ ಮಜಾ ಮಾಡುತ್ತಿದ್ದವ ಅಂದರ್!

ಒಡಹುಟ್ಟಿದ ತಮ್ಮ ಅಂತಾ ಕೆಲಸವಿಲ್ಲದೇ ರೋಡ್‌ ರೋಮಿಯೋ ತರ ಬೀದಿ-ಬೀದಿ ಅಲೆಯುತ್ತಿದ್ದ ಇರ್ಫಾನ್‌ನನ್ನು ಮನೆಯಲ್ಲಿಟ್ಟುಕೊಂಡು ಊಟ-ಬಟ್ಟೆ ಕೊಟ್ಟು ಸಾಕುತ್ತಿದ್ದರು. ಆದರೆ ಆತ ಸ್ವಂತ ಅಣ್ಣನ ಮನೆಗೆ ಕನ್ನ ಹಾಕಿದ್ದಾನೆ.

Written by - VISHWANATH HARIHARA | Edited by - Puttaraj K Alur | Last Updated : Dec 27, 2022, 06:26 AM IST
  • ಪ್ರೇಯಸಿಯ ಆಸೆಯನ್ನು ತೀರಿಸಲು ಅಣ್ಣನ ಮನೆಗೆ ಕನ್ನ ಹಾಕಿದ ತಮ್ಮ
  • ಹುಡುಗಿ ಜೊತೆ ಗೋವಾದಲ್ಲಿ ಮಜಾ ಮಾಡುತ್ತಿದ್ದವ ಜೈಲುಪಾಲು
  • 103 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದವನನ್ನು ಬಂಧಿಸಿದ ಖಾಕಿ
ಪ್ರೇಯಸಿ ಆಸೆ ತೀರಿಸಲು ಅಣ್ಣನ ಮನೆಗೆ ಕನ್ನ: ಹುಡುಗಿ ಜೊತೆ ಗೋವಾದಲ್ಲಿ ಮಜಾ ಮಾಡುತ್ತಿದ್ದವ ಅಂದರ್!  title=
ಅಣ್ಣನ ಮನೆಗೆ ಕನ್ನ ಹಾಕಿದ್ದ ತಮ್ಮನ ಬಂಧನ!

ಬೆಂಗಳೂರು: ಪ್ರಪಂಚದಲ್ಲಿ ಎಂತೆಂಥವರು ಇರುತ್ತಾರೆ ಎಂಬ ಮಾತಿಗೆ ಈ ಪ್ರಕರಣವೇ ಸಾಕ್ಷಿಯಾಗಿದೆ. ಸರಿಯಾದ ವಿದ್ಯೆ, ಬುದ್ದಿ ಇಲ್ಲದೆ, ಕೈಯಲ್ಲಿ ಕೆಲಸವಿಲ್ಲದಿದ್ದರೂ ಲವ್ವಿ ಡವ್ವಿ ಎಂದು ಹುಡುಗಿ ಹಿಂದೆ ಬಿದ್ದಿದ್ದ ಯುವಕನೊಬ್ಬ ತಮ್ಮ ಎಂದು ಮನೆಯಲ್ಲಿಟ್ಟುಕೊಂಡು ಅನ್ನ ಹಾಕಿದ್ದ ಅಣ್ಣನ ಮನೆಗೆ ಕನ್ನ ಹಾಕಿದ್ದಾನೆ.

ಹೌದು, ಇದು ತಮ್ಮನೇ ಅಣ್ಣನ ಮನೆಗೆ ಕನ್ನ ಹಾಕಿ ಮಜಾ ಮಾಡಿರುವ ಸ್ಟೋರಿ. ಸದ್ಯ ಈ ಕೃತ್ಯ ಎಸಗಿ ಪೊಲೀಸರ ಅತಿಥಿಯಾದವನ ಹೆಸರು ಮೊಹಮ್ಮದ್ ಇರ್ಫಾನ್. ಆರೋಪಿ ಆಡುಗೋಡಿಯ ಮಹಾಲಿಂಗೇಶ್ವರ ಬಂಡೆ ಏರಿಯಾದಲ್ಲಿ ತನ್ನ ಅಣ್ಣ ಸಲ್ಮಾನ್, ಅತ್ತಿಗೆ ಹಾಗೂ ತಾಯಿಯೊಂದಿಗೆ ವಾಸವಿದ್ದ. ಸಲ್ಮಾನ್ ಸುದ್ದುಗುಂಟೆಪಾಳ್ಯದಲ್ಲಿ ಸೇಲ್ಸ್ ಮನ್ ಕೆಲಸ ಮಾಡಿಕೊಂಡಿದ್ದರು.

ಇದನ್ನೂ ಓದಿ: Crime News: ರೈಲಿಗೆ ತಲೆ ಕೊಟ್ಟು ಪ್ರೇಮಿಗಳಿಬ್ಬರು ಸೂಸೈಡ್!

ಒಡಹುಟ್ಟಿದ ತಮ್ಮ ಅಂತಾ ಕೆಲಸವಿಲ್ಲದೇ ರೋಡ್‌ ರೋಮಿಯೋ ತರ ಬೀದಿ-ಬೀದಿ ಅಲೆಯುತ್ತಿದ್ದ ಇರ್ಫಾನ್‌ನನ್ನು ಮನೆಯಲ್ಲಿಟ್ಟುಕೊಂಡು ಊಟ-ಬಟ್ಟೆ ಕೊಟ್ಟು ಸಾಕುತ್ತಿದ್ದರು. ಆದರೆ ಖಾಲಿ ಇದ್ದ ಇರ್ಫಾನ್‌ಗೆ ಯುವತಿಯೊಬ್ಬಳ ಮೇಳೆ ಲವ್‌ ಆಗಿ, ಆಕೆಯನ್ನು ಹೇಗೋ ಬುಟ್ಟಿಗೆ ಹಾಕಿಕೊಂಡಿದ್ದ. ಕೈಯಲ್ಲಿ ಕೆಲಸ ಇಲ್ಲದ ಈತನಿಗೆ ದುಡ್ಡು ಎಲ್ಲಿಂದ ಬರುತ್ತೆ? ಯುವತಿ ಸಹ ತನ್ನ ಲವ್ವರ್‌ ಚೆನ್ನಾಗಿ ನೋಡಿಕೊಳ್ಳುತ್ತಾನೆ ಅಂತಾ ಫಿಕ್ಸ್‌ ಆಗಿದ್ಲು ಅನ್ನಿಸುತ್ತೆ. ಹೀಗಾಗಿ ಗೋವಾಕ್ಕೆ ಹೋಗಿ ಎಂಜಾಯ್‌ ಮಾಡೋಣ ಅಂತಾ ಇರ್ಫಾನ್‌ಗೆ ಕೇಳಿದ್ದಾಳೆ. ಹೀಗಾಗಿ ಪ್ರೇಯಸಿ ಆಸೆ ಈಡೇರಿಸಬೇಕು ಎಂದು ನಿರ್ಧರಿಸಿದ್ದ ಇರ್ಫಾನ್‌ ಮನೆಯ ಬೀರುವಿನಲ್ಲಿದ್ದ 103 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಮನೆಯವರಿಗೂ ಸಹ 4 ದಿನ ಆದರೂ ಸಹ ಈತ ಎಲ್ಲಿದ್ದಾನೆ ಅನ್ನೋದು ಗೊತ್ತಿರಲಿಲ್ಲ.

ನವೆಂಬರ್ 29ರಂದು‌ ಬೀರು ಪರಿಶೀಲಿಸಿದಾಗ ಚಿನ್ನ ಕಳ್ಳತನವಾಗಿರುವ ಬಗ್ಗೆ ಗೊತ್ತಾಗಿತ್ತು. ತಕ್ಷಣವೇ ಆಡುಗೋಡಿ ಪೊಲೀಸ್‌ ಠಾಣೆಯಲ್ಲಿ ಸಲ್ಮಾನ್ ದೂರು ದಾಖಲಿಸಿದ್ದರು. ಈ ದೂರಿನನ್ವಯ ತನಿಖೆ ನಡೆಸಿದಾಗ ಇರ್ಫಾನ್ ಚಿನ್ನ ಕದ್ದು  ಅಡವಿಟ್ಟು ಪ್ರೇಯಸಿ ಜೊತೆ ಗೋವಾದಲ್ಲಿ ಎಂಜಾಯ್‌ ಮಾಡುತ್ತಿದ್ದಾನೆ ಎಂಬುದು ಗೊತ್ತಾಗಿದೆ. ಸದ್ಯ ಆರೋಪಿಯನ್ನು ಗೋವಾದಲ್ಲಿ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಜಗಳ: ಕ್ರಿಕೆಟ್ ಆಡುತ್ತಿದ್ದ ಇಬ್ಬರು ಯುವಕರ ಬರ್ಬರ ಹತ್ಯೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News