ಆಂಟಿ ಪ್ರೀತ್ಸೆ ಅಂತ ಹಿಂದೆ ಬಿದ್ದ ಪಾಗಲ್ ಪ್ರೇಮಿ! ಒಪ್ಪದ ಮಹಿಳೆಯ ಕೊಲ್ಲಲು ಮಿಕ್ಸಿಲ್ಲಿಟ್ಟ ಬಾಂಬ್?

Hassan mixer grinder blast case : ಹಾಸನ ನಗರವನ್ನೆ ಬೆಚ್ಚಿ ಬಿಳಿಸಿದ್ದ ಮಿಕ್ಸಿ ಬ್ಲಾಸ್ಟ್ ಪ್ರಕರಣಕ್ಕೆ  ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯೊಬ್ಬಳ ಹಿಂದೆ ಬಿದ್ದಿದ್ದ ಯುವಕನೊಬ್ಬ ಆಕೆ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಮಿಕ್ಸಿಯಲ್ಲಿ ಸಣ್ಣ ಪ್ರಮಾಣದ ಸ್ಫೋಟಕ ಇಟ್ಟು ಕಳಿಸಿದ್ದ. ಆದರೆ ಈ ಸಂಚಿಗೆ ಕೊರಿಯರ್ ಅಂಗಡಿ ಮಾಲೀಕ ಬಲಿಪಶುವಾಗಿದ್ದಾನೆ. 

Written by - Zee Kannada News Desk | Last Updated : Dec 27, 2022, 05:55 PM IST
  • ಹಾಸನ ಮಿಕ್ಸಿ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
  • ಆಂಟಿ ಪ್ರೀತ್ಸೆ ಅಂತ ಹಿಂದೆ ಬಿದ್ದ ಪಾಗಲ್ ಪ್ರೇಮಿ!
  • ಒಪ್ಪದ ಮಹಿಳೆಯ ಕೊಲ್ಲಲು ಮಿಕ್ಸಿಲ್ಲಿಟ್ಟ ಬಾಂಬ್?
ಆಂಟಿ ಪ್ರೀತ್ಸೆ ಅಂತ ಹಿಂದೆ ಬಿದ್ದ ಪಾಗಲ್ ಪ್ರೇಮಿ! ಒಪ್ಪದ ಮಹಿಳೆಯ ಕೊಲ್ಲಲು ಮಿಕ್ಸಿಲ್ಲಿಟ್ಟ ಬಾಂಬ್? title=
ಮಿಕ್ಸಿ ಬ್ಲಾಸ್ಟ್

ಹಾಸನ: ಇಲ್ಲಿನ ಕೊರಿಯರ್ ಶಾಪ್‌ನಲ್ಲಿ ಮಿಕ್ಸಿ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಚ್ಛೇದಿತ ಮಹಿಳೆಯೊಬ್ಬರ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿ, ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆಯನ್ನು ಮುಗಿಸಲು ಸ್ಕೆಚ್ ಹಾಕಿ ಮಿಕ್ಸಿ ಬಾಂಬ್ ಕಳಿಸಿದ್ದ ಎಂಬ ಸಂಗತಿ ಬಯಲಾಗಿದೆ. ನಗರದ ಕೆ.ಆರ್.ಪುರಂ ಸಬ್ ರಿಜಿಸ್ಟ್ರಾರ್ ಕಚೇರಿ ರಸ್ತೆಯಲ್ಲಿನ ಅಂಗಡಿಯಲ್ಲಿ ಸೋಮವಾರ (ಡಿ. 26) ಸಂಜೆ ಮಿಕ್ಸಿ ಸ್ಫೋಟಗೊಂಡು ಆತಂಕಕ್ಕೆ ಕಾರಣವಾಗಿತ್ತು. ಇದು ಉಗ್ರ ಕೃತ್ಯ ಇರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿತ್ತು. 

ಈ ಮಧ್ಯೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗೋಷ್ಠಿ ನಡೆಸಿ ಉಗ್ರ ಕೃತ್ಯವಲ್ಲ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆಸಿರುವ ಸೋಟ ಎಂಬ ಮಾಹಿತಿ ನೀಡಿದ್ದರು. ಈಗ ಸಂಪೂರ್ಣ ತನಿಖೆ ನಡೆಸಿರುವ ಪೊಲೀಸರು ಇದು ಪಾಗಲ್ ಪ್ರೇಮಿಯೊಬ್ಬನ ಕೃತ್ಯ ಎಂಬುದನ್ನು ಬಯಲಿಗೆಳೆದಿದ್ದಾರೆ.

ಇದನ್ನೂ ಓದಿ : ಅಶಾಂತಿ ಮೂಡಿಸಲು ಬಿಜೆಪಿ ಆಡುತ್ತಿರುವ ನಾಟಕ: ಡಿ ಕೆ ಶಿವಕುಮಾರ್

ಬೆಂಗಳೂರು ಮೂಲದ ಪಾಗಲ್ ಪ್ರೇಮಿಯೊಬ್ಬ ಹಾಸನದ ಮಹಿಳೆಯೊಬ್ಬಳ ಹಿಂದೆ ಬಿದ್ದಿದ್ದ. ಆದರೆ, ಆತನ ಪ್ರೀತಿಯನ್ನು ಆಕೆ ನಿರಾಕರಿಸುತ್ತಲೇ ಬಂದಿದ್ದಳು. ಎನ್ನಲಾಗಿದೆ. ಈ ಸಂಬಂಧ ಇಬ್ಬರ ನಡುವೆ ಗಲಾಟೆಯೂ ನಡೆದಿತ್ತು. ಎರಡು ಬಾರಿ ತನ್ನ ವಿಳಾಸ ಬರೆಯದೆ ಆತ ಆ ಮಹಿಳೆಯ ವಿಳಾಸಕ್ಕೆ ಕೊರಿಯರ್ ಮೂಲಕ ಕೆಲವು ವಸ್ತುಗಳನ್ನು ಕಳಿಸಿದ್ದರೂ ಆಕೆ ಅದನ್ನು ಕಸದ ಬುಟ್ಟಿಗೆ ಹಾಕಿದ್ದಳು. ಈ ಹಿನ್ನೆಲೆಯಲ್ಲಿ ವ್ಯಗ್ರನಾದ ಆತ ಉಗ್ರ ರೀತಿಯಲ್ಲಿ ಫ್ಯಾನ್ ಮಾಡಿದ್ದ. ಆಕೆಯನ್ನೇ ಕೊಂದು ಹಾಕಲು ಮುಂದಾಗಿದ್ದ. 

ಇದರ ಭಾಗವಾಗಿ ಮಿಕ್ಸರ್‌ನಲ್ಲಿ ಸ್ಫೋಟಕವನ್ನು ಇಟ್ಟು ಕಳುಹಿಸಿದ್ದ. ಆದರೆ, ಈ ಬಾರಿ ಮತ್ತೆ ಪ್ರಂ ಅಡ್ರೆಸ್ ಇಲ್ಲದೆ ಬಂದ ಕೊರಿಯರ್ ಅನ್ನು ಮಹಿಳೆ ಎಸೆಯದೆ ಪುನಃ ಕೊರಿಯರ್ ಶಾಪ್‌ಗೆ ತಂದುಕೊಟ್ಟು ಅದನ್ನು ವಾಪಸ್ ಮಾಡುವಂತೆ ಹೇಳಿದ್ದಳು. ಆಗ, ಶಾಪ್ ಮಾಲೀಕ ಶಶಿ ಅದನ್ನು ವಾಪಸ್ ಕಳುಹಿಸಲು 350 ರೂಪಾಯಿ ಶುಲ್ಕವನ್ನು ಕೇಳಿದ್ದ. ಆದರೆ, ಹಣ ಕೊಡಲು ನಿರಾಕರಿಸಿದ ಮಹಿಳೆ, ಇದು ನನಗೆ ಸಂಬಂಧಪಟ್ಟಿದ್ದಲ್ಲ, ನೀವು ಏನಾದರೂ ಮಾಡಿ ಎಂದು ಹೊರ ನಡೆದಿದ್ದಳು.

ಕೊರಿಯರ್ ಅಂಗಡಿ ಮಾಲೀಕ ಶಶಿ ಆ ಪಾರ್ಸೆಲ್ ಬಾಕ್ಸ್‌ನಲ್ಲಿ ಏನಿದೆ ಎಂಬುದನ್ನು ಕುತೂಹಲದಿಂದ ತೆರೆದು ನೋಡಿದ್ದ. ಅದರೊಳಗೆ ಮಿಕ್ಸಿ ಇರುವುದನ್ನು ಕಂಡು ಪರಿಶೀಲನೆ ಮಾಡಲು ಮುಂದಾಗಿದ್ದ. ಹೀಗೆ ಪರಿಶೀಲಿಸುವಾಗ ಮಿಕ್ಸಿ ಬ್ಲಾಸ್ಟ್ ಆಗಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಇದನ್ನೂ ಓದಿ : ಬಿಜೆಪಿಯಲ್ಲಿರುವ ಬಹುತೇಕರು ಸಿ.ಟಿ.ರವಿಯರಂತೆ ಕೊಳಕು ಗಿರಾಕಿಗಳು: ದಿನೇಶ್ ಗುಂಡೂರಾವ್

ಆ ಮಹಿಳೆ ತನ್ನ ಪ್ರೀತಿಯನ್ನು ನಿರಾಕರಣೆ ಮಾಡಿದ್ದರಿಂದ ಅವಳನ್ನು ಕೊಂದೇ ಬಿಡಲು ಯೋಚಿಸಿದ ಆರೋಪಿ ಮಿಕ್ಸಿಯೊಳಗೆ ಸಣ್ಣ ಪ್ರಮಾಣದ ಸ್ಫೋಟಕ ಇಟ್ಟಿದ್ದ. ಅದನ್ನು ಆನ್ ಮಾಡಿದರೆ ಬ್ಲಾಸ್ಟ್ ಆಗುವಂತೆ ಪ್ಲಾನ್ ಮಾಡಿದ್ದ. ಆದರೆ, ಪಂ ಅಡ್ರೆಸ್ ಇಲ್ಲದೇ ಇದ್ದುದರಿಂದ ಇದು ಆತನದ್ದೇ ಗಿಫ್ಟ್ ಎಂದು ಭಾವಿಸಿದ ಮಹಿಳೆ ಆ ಕೊರಿಯರ್ ಬಾಕ್ಸ್ ಅನ್ನು ಓಪನ್ ಮಾಡದೆಯೇ ಹಿಂದಿರುಗಿಸಿದ್ದಳು. ಹಾಗಾಗಿ ಆಕೆ ಅಪಾಯದಿಂದ ಪಾರಾದಳು.

ಕೊರಿಯರ್ ಮಾಡಿದ್ದಾನೆನ್ನಲಾದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಹಾಸನದ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಆರೋಪಿಯ ವಿವರವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News