ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಸಾಜ್ ಪಾರ್ಲರ್‌ಗಳ ಹಾವಳಿ ಹೆಚ್ಚಾಗಿದೆ. ಸಾವಿರಾರು ಪಾರ್ಲರ್ ಗಳು ತಲೆ ಎತ್ತಿವೆ. ಇಂತಹ ಪಾರ್ಲರ್ ಗಳಲ್ಲಿ ‌ಕೆಲಸ ಮಾಡುವ ಯುವತಿಯರು ಎಷ್ಟರ ಮಟ್ಟಿಗೆ‌  ಸೇಫ್ ಅನ್ನೋದೆ ಈಗಿನ ಪ್ರಶ್ನೆಯಾಗಿದೆ. ಜಯನಗರ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿನ ಮ್ಯಾಜಿಕ್ ಟೆಚ್ ಯೂನಿಸೆಕ್ಸ್ ಸೆಲೂನ್ ಪಾರ್ಲರ್ ಒಂದರಲ್ಲಿ ಇದೀಗ ಅತ್ಯಾಚಾರದ ಆರೋಪವೊಂದು ಕೇಳಿ ಬಂದಿದೆ.‌ಕಾಮಕ ರವೀಂದ್ರ ಶೆಟ್ಟಿ ಎಂಬಾತ ಯುವತಿಯ ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾನೆ.


COMMERCIAL BREAK
SCROLL TO CONTINUE READING

ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುವ ಯುವತಿ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾನೆ.‌ ಕಾಮುಕ ರವೀಂದ್ರ ಶೆಟ್ಟಿಯ ಸಂಭಂದಿ ರತ್ನಾವತಿ ಮತ್ತು ಜಗದೀಶ್ ಎಂಬುವವರಿಗೆ ಸೇರಿದ ಸಲೂನ್ ಎನ್ನಲಾಗಿದೆ. ಈತ ಪದೇ ಪದೇ ಪಾರ್ಲರ್‌ಗೆ ಬಂದು ಮಸಾಜ್ ಮಾಡಿಸಿಕೊಳ್ಳುತ್ತಿದ್ದ. ಅಲ್ಲದೇ ಮಸಾಜ್‌ ನನಗೆ ಸಾಕಾಗೋದಿಲ್ಲ ಹ್ಯಾಪಿ ಎಂಡಿಂಗ್ ಬೇಕು ಅಂತಿದ್ದ.‌


ಇದನ್ನೂ ಓದಿ: ಮತ್ತೆ ರಾಜಕೀಯಕ್ಕೆ ಧುಮುಕಿದ ಹಿರಿಯ ನಟ ಅನಂತ್‌ನಾಗ್


ಹೀಗೆ ಇದೇ‌ ತಿಂಗಳ 14 ನೇ ತಾರೀಖಿನಂದು ಮತ್ತೆ ಮಸಾಜ್ ಪಾರ್ಲರ್ ಗೆ ಬಂದ ಈತ ಯುವತಿಯನ್ನು ಬಲವಂತವಾಗಿ ರೂಂ ಒಳಗಡೆ ಎಳೆದೊಯ್ದು ಆಕೆಯ ಬಟ್ಟೆ, ಒಳ ಉಡುಪುಗಳನ್ನು ಬಲವಂತವಾಗಿ ಬಿಚ್ಚಿ ಕ್ರೌರ್ಯ ಮೆರಿದಿದ್ಜಾನೆ. ತನ್ನ ಪ್ರೈವೇಟ್ ಪಾರ್ಟ್ಸ್ ಗಳನ್ನು ಯುವತಿಗೆ ಬಲವಂತವಾಗಿ ಮುಟ್ಟಲು ಹೇಳಿದ್ದಾನೆ‌ ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಾಳೆ.


ಸದ್ಯ ನೊಂದ ಯುವತಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.‌ ಇನ್ನೂ ಯುವತಿಯ ಜಾತಿ ವಿಚಾರವಾಗಿಯೂ ಸಹ ಕಾಮುಕ ರವೀಂದ್ರ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ಯುವತಿ ದೂರಿದ್ದು ಅಟ್ರಾಸಿಟಿ ಕೇಸ್ ಸಹ ದಾಖಲು ಮಾಡಲಾಗಿದೆ. ದೂರಿನನ್ವಯ ಪೊಲೀಸರು ಆರೋಪಿ ರವೀಂದ್ರ ಶೆಟ್ಟಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.