ಮತ್ತೆ ರಾಜಕೀಯಕ್ಕೆ ಧುಮುಕಿದ ಹಿರಿಯ ನಟ ಅನಂತ್‌ನಾಗ್

ಅನಂತನಾಗ್ ಭಾರತೀಯ ಚಿತ್ರಲೋಕ ಕಂಡ ಅದ್ಭುತ ಪ್ರತಿಭೆ. ತಮ್ಮ ಸ್ವಾಬಾವಿಕ ನಟನಾಶೈಲಿಯಿಂದಲೇ ಗಮನ ಸೆಳೆಯುವ ಇವರು ಕನ್ನಡ ಮಾತ್ರವಲ್ಲದೇ ಮರಾಠಿ,ತಮಿಳು,ತೆಲುಗು,ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. 6 ಫಿಲ್ಮ್ ಫೇರ್ ಮತ್ತು 5 ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. 

Written by - Zee Kannada News Desk | Last Updated : Feb 22, 2023, 12:22 PM IST
  • ಕೆಲವು ವರ್ಷಗಳಿಂದ ರಾಜಕೀಯದಿಂದ ದೂರ ಉಳಿದಿದ್ದರು.
  • ಅನಂತನಾಗ್ ಭಾರತೀಯ ಚಿತ್ರಲೋಕ ಕಂಡ ಅದ್ಭುತ ಪ್ರತಿಭೆ.
  • ಮೊದಲಿಂದನಿಂದಲೂ ಸಾಮಾಜಿಕ ಕಳಿಕಳಿ ಹೊಂದಿರುವ ಅನಂತ ನಾಗ್ 1983 ರಿಂದ ಜನತಾದಳ ಪಕ್ಷದ ಜೊತೆ ಗುರುತಿಸಕೊಂಡಿದ್ದರು.
ಮತ್ತೆ ರಾಜಕೀಯಕ್ಕೆ ಧುಮುಕಿದ ಹಿರಿಯ ನಟ ಅನಂತ್‌ನಾಗ್  title=

ಕನ್ನಡ ಚಿತ್ರರಂಗದ ಹಿರಿಯರ ನಟ ಅನಂತ್‌ನಾಗ್‌ಗೂ ರಾಜಕೀಯಕ್ಕೂ ಹಳೆಯ ನಂಟು ಇದೆ. ಆದರೆ, ಕೆಲವು ವರ್ಷಗಳಿಂದ ರಾಜಕೀಯದಿಂದ ದೂರ ಉಳಿದಿದ್ದರು. ಈಗ ಮತ್ತೆ ರಾಜಕೀಯ ಕಡೆಗೆ ಒಲವು ತೋರಿದ್ದಾರೆ. ಹಿರಿಯ ನಟ ಅನಂತ್‌ನಾಗ್‌ ಇಂದು (ಫೆಬ್ರವರಿ 22) ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಇಂದು ಸಂಜೆ 4.30ಕ್ಕೆ ಸೇರಲಿದ್ದಾರೆ. ಇವರೊಂದಿಗೆ ಸಚಿವರಾದ ಮುನಿರತ್ನ, ಡಾ.ಸುಧಾಕರ್ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಅನಂತನಾಗ್ ಭಾರತೀಯ ಚಿತ್ರಲೋಕ ಕಂಡ ಅದ್ಭುತ ಪ್ರತಿಭೆ. ತಮ್ಮ ಸ್ವಾಬಾವಿಕ ನಟನಾಶೈಲಿಯಿಂದಲೇ ಗಮನ ಸೆಳೆಯುವ ಇವರು ಕನ್ನಡ ಮಾತ್ರವಲ್ಲದೇ ಮರಾಠಿ,ತಮಿಳು,ತೆಲುಗು,ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. 6 ಫಿಲ್ಮ್ ಫೇರ್ ಮತ್ತು 5 ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕರ್ನಾಟಕ ರಾಜಕೀಯದಲ್ಲಿಯೂ ತಮ್ಮ ಛಾಪನ್ನು ಮೂಡಿಸಿರುವ ಇವರು 1994ರ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಚಿವರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗದ ದಂತಕಥೆ ದಿ. ಶಂಕರನಾಗ್ ಇವರ ನಲ್ಮೆಯ ಕಿರಿಯ ಸಹೋದರ. ಇವರ ಪತ್ನಿ ಗಾಯತ್ರಿ ಕೂಡಾ ಕನ್ನಡ ಚಿತ್ರರಂಗದ ಹಿರಿಯನಟಿ.

ಚಿತ್ರಜೀವನ

1972 ರಲ್ಲಿ ಕನ್ನಡ ಚಿತ್ರ `ಸಂಕಲ್ಪ' ಮತ್ತು ಶ್ಯಾಮ ಬೆನಗಲ್ ರ `ಅಂಕುರ್' ಚಿತ್ರದಿಂದ ಸಿನಿಪಯಣ ಶುರು ಮಾಡಿದರು. ಅನಂತನಾಗ್ ನಟಿಸಿದ 7 ಹಿಂದಿ ಚಿತ್ರಗಳಲ್ಲಿ 6 ಚಿತ್ರಗಳನ್ನು ಶ್ಯಾಮ್ ಬೆನಗಲ್ ಅವರ ನಿರ್ದೆಶನದಲ್ಲಿ ನಟಿಸಿರುವುದು ವಿಶೇಷ. ಮುಂದೆ ಜಿ.ವಿ.ಅಯ್ಯರ್ ನಿರ್ದೇಶನದಲ್ಲಿ ಮೂಡಿಬಂದ `ಹಂಸಗೀತೆ' ಚಿತ್ರದಲ್ಲಿ ಸಂಗೀತಗಾರ ವೆಂಕಟಸುಬ್ಬಯ್ಯನವರ ಪಾತ್ರದಲ್ಲಿ ಮಿಂಚಿದರು.1975 ರಲ್ಲಿ ತೆರೆಕಂಡ ದೊರೈ ಭಗವಾನ್ ನಿರ್ದೇಶನದ `ಬಯಲುದಾರಿ' ಚಿತ್ರದಲ್ಲಿ ಕಲ್ಪನಾ ಜೊತೆ ನಟಿಸಿ ಕನ್ನಡ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರಾದರು.ನಟಿ ಲಕ್ಷಿಯವರ ಜೊತೆ `ಚಂದನದ ಗೊಂಬೆ' ಚಿತ್ರದ ಮೂಲಕ ಒಂದುಗೂಡಿದ ಅನಂತ್ ಸುಮಾರು 25 ಚಿತ್ರಗಳಲ್ಲಿ ನಟಿಸಿದರು.ಕನ್ನಡ ಚಿತ್ರರಂಗದಲ್ಲಿ ಒಬ್ಬ ನಾಯಕನಟ ಹಾಸ್ಯಪ್ರಧಾನ ಚಿತ್ರಗಳಲ್ಲಿ ನಟಿಸುವ ಪ್ರವೃತ್ತಿಗೆ ಮುನ್ನುಡಿ ಬರೆದ ಕೀರ್ತಿ ಅನಂತನಾಗ್ ಅವರದು. ಸಾಲು ಸಾಲಾಗಿ ಬಂದ ಗಣೇಶನ ಸರಣಿ ಚಿತ್ರಗಳೇ ಇವಕ್ಕೆ ಸಾಕ್ಷಿ.ಇವರು 1995 ರಲ್ಲಿ ನಟಿಸಿದ ಟೆಲಿಫೋನ್ ಸಂಭಾಷಣೆ ಆಧಾರಿತ ಚಿತ್ರ `ಬೆಳದಿಂಗಳ ಬಾಲೆ' ಕನ್ನಡ ಚಿತ್ರರಂಗಕ್ಕೆ ಹೊಸದಿಕ್ಕನ್ನೇ ಕೊಟ್ಟಿತ್ತು. ಹೀಗೆ ಶುರುವಾದ ಅನಂತನಾಗರ ಚಿತ್ರಜೀವನ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳನ್ನು ದಾಟಿ ಮುನ್ನುಗ್ಗುತ್ತಿದೆ.

ಇದನ್ನೂ ಓದಿ-ಗಾಯಕ ಸೋನು ನಿಗಮ್‌ ಮೇಲೆ ʼಶಿವಸೇನಾ ಶಾಸಕನ ಪುತ್ರʼನಿಂದ ಹಲ್ಲೆ..! ಇದೇ ಕಾರಣ..

ರಾಜಕೀಯ ಜೀವನ

ಮೊದಲಿಂದನಿಂದಲೂ ಸಾಮಾಜಿಕ ಕಳಿಕಳಿ ಹೊಂದಿರುವ ಅನಂತ ನಾಗ್ 1983 ರಿಂದ ಜನತಾದಳ ಪಕ್ಷದ ಜೊತೆ ಗುರುತಿಸಕೊಂಡಿದ್ದರು.1983,1985,1989 ರ ಚುನಾವಣೆಗಳಲ್ಲಿ ಜನತಾದಳದ ಸ್ಟಾರ್ ಪ್ರಚಾರಕರಾಗಿದ್ದರು. 1994ರಲ್ಲಿ ಮಲ್ಲೇಶ್ವರಂ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಇವರು ಜೆ.ಎಚ್.ಪಟೇಲ್ ರ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಸಚಿವರಾಗಿದ್ದರು.1983 ರ ಲೋಕಸಭೆ ಚುನಾವಣೆಯಲ್ಲಿ ಕೂಡ ಸ್ಪರ್ಧಿಸಿದ್ದರು.

ತಮ್ಮ ಶಂಕರನಾಗ್ ರ ಜೊತೆಗಿನ ಭಾಂಧವ್ಯ

ಅನಂತನಾಗ್ ರ ಜೀವನದಲ್ಲಿ ಶಂಕರನಾಗ್ ಕೇವಲ ಕಿರಿಯ ಸಹೋದರನಾಗಿರದೇ ಒಬ್ಬ ಮಗನಾಗಿಯೇ ಇದ್ದರು. ಇಬ್ಬರು ಸಹೋದರರು ನಾಟಕರಂಗದಲ್ಲಿ ಮಾತ್ರವಲ್ಲದೇ ಚಿತ್ರರಂಗದಲ್ಲಿಯೂ ಕೂಡ ಜೊತೆಜೊತೆಗೆ ನೆಡೆದರು. ತದ್ವಿರುದ್ದ ವ್ಯಕ್ತಿತ್ವದವರಾದ ಈ ಇಬ್ಬರು ಸಹೋದರರ ಮಿಂಚಿನ ಓಟಕ್ಕೆ ವಿಧಿ ಬೇಗನೇ ತಡೆಯೊಡ್ಡಿತು. ಅನಂತನಾಗ್ ಜೀವನದ ಅತಿ ದೊಡ್ಡ ಆಘಾತ ಶಂಕರನನ್ನು ಕಳೆದುಕೊಂಡಿದ್ದು. ಪ್ರೀತಿಯ ತಮ್ಮನ ನೆನಪಲ್ಲಿ `ನನ್ನ ತಮ್ಮ ಶಂಕರ' ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಬಂದಿದೆ.

ಇದನ್ನೂ ಓದಿ-ಪವಿತ್ರ ಶ್ರೀಕಾಳಹಸ್ತಿ ದೇಗುಲದಲ್ಲಿ ಮಂಗ್ಲಿ ಸಾಂಗ್‌ ಶೂಟಂಗ್‌..! ಪರ್ಮಿಷನ್‌ ಹೇಗೆ ಸಿಕ್ತು..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News