ಹೆಸರು ಮಾತ್ರಾ ಜ್ಯೂಲಿಯೆಟ್‌ ಆದ್ರೆ ಚಿತ್ರದಲ್ಲಿ ಜೂಲಿಯಟ್‌ ಇಲ್ಲ ರೋಮಿಯೋನು ಇಲ್ಲ..!

ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಕಮ್ಮಿಯಾಗುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದಲ್ಲಿ ಮಾಸ್ ಸಿನಿಮಾಗಳನ್ನೇ ಹೆಚ್ಚಾಗಿ ನಿರ್ಮಾಣ ಮಾಡಲಾಗುತ್ತಿದೆ. ಅಬ್ಬರದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಕಾಣಿಸುತ್ತಿಲ್ಲ.

Written by - Zee Kannada News Desk | Last Updated : Feb 22, 2023, 11:47 AM IST
  • 'ಜೂಲಿಯೆಟ್ 2' ಮಹಿಳಾ ಪ್ರಧಾನ ಚಿತ್ರ ಸಿನಿಮಾ ಆಗಿರೋದ್ರಿಂದ ಸ್ಟೋರಿ ಏನು?
  • "ಕಾಡಿನಲ್ಲಿ ನಡೆದ ಚಿತ್ರೀಕರಣದ ಅನುಭವ‌ ಮರೆಯಲು ಅಸಾಧ್ಯ.
  • ಕಷ್ಟಕ್ಕೆ ಸಿಲುಕಿದ ಹೆಣ್ಣು ಮಗಳೊಬ್ಬಳು ಅದ್ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ?
ಹೆಸರು ಮಾತ್ರಾ ಜ್ಯೂಲಿಯೆಟ್‌ ಆದ್ರೆ ಚಿತ್ರದಲ್ಲಿ ಜೂಲಿಯಟ್‌ ಇಲ್ಲ ರೋಮಿಯೋನು ಇಲ್ಲ..!  title=

ಅಬ್ಬರದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಕಾಣಿಸುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೂ, ಕನ್ನಡದಲ್ಲೊಂದು ಫಿಮೇಲ್ ಓರಿಯೆಂಟೆಡ್ ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ 'ಜೂಲಿಯಟ್ 2'. ಸಿನಿಮಾ ಹೆಸರು ನೋಡಿದ ಮೇಲೆ ಇದು ಲವ್ ಸ್ಟೋರಿ ಅಂತ ಭಾವಿಸಬೇಕಿಲ್ಲ. ಈ ಸಿನಿಮಾದಲ್ಲಿ ಪ್ರೇಮ್ ಕಹಾನಿನೂ ಇಲ್ಲ. ರೋಮಿಯೋನೂ ಇಲ್ಲ.ಈ ಮಹಿಳಾ ಪ್ರಧಾನ ಸಿನಿಮಾ 'ಜೂಲಿಯಟ್ 2' ಸಿನಿಮಾ ಫೆಬ್ರವರಿ 24 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ವಿರಾಟ್ ಬಿ ಗೌಡ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಯೂಟ್ಯೂಬ್‌ನಲ್ಲಿ ಸಖತ್ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.

ಇದನ್ನೂ ಓದಿ-Rishabh Shetty: ಇನ್ಮುಂದೆ ರಿಷಬ್ ಶೆಟ್ಟಿ ಫೋನ್ ಆಫ್ ಆಗುತ್ತೆ..! ಶಾಕಿಂಗ್ ಹೇಳಿಕೆ ಕೊಟ್ಟ ಡಿವೈನ್ ಸ್ಟಾರ್

'ಜೂಲಿಯೆಟ್ 2' ಮಹಿಳಾ ಪ್ರಧಾನ ಚಿತ್ರ ಸಿನಿಮಾ ಆಗಿರೋದ್ರಿಂದ ಸ್ಟೋರಿ ಏನು? ಅನ್ನೋ ಕುತೂಹಲವಂತೂ ಇದ್ದೇ ಇರುತ್ತೆ. ಕಷ್ಟಕ್ಕೆ ಸಿಲುಕಿದ ಹೆಣ್ಣು ಮಗಳೊಬ್ಬಳು ಅದ್ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ? ಅನ್ನೋದು ಈ ಸಿನಿಮಾದ ಕಥಾಹಂದರ. 'ಜೂಲಿಯೆಟ್ 2' ಸಿನಿಮಾದ ಹಾಡುಗಳು ಹಾಗೂ ಟ್ರೈಲರ್ ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ. ಅಲ್ಲದೆ ಅಪ್ಪ -ಮಗಳ ಬಾಂಧವ್ಯದ ಸನ್ನಿವೇಶಗಳು ಕೂಡ ಜನರಿಗೆ ಹಿಡಿಸುತ್ತಿದೆ. ಸಿನಿಮಾದ ಹಾಡೊಂದನ್ನು ಬೆಳ್ತಂಗಡಿ ಬಳಿಯ ಪಶ್ಚಿಮ ಘಟ್ಟದ ಕಾಡೊಂದರಲ್ಲೇ ಶೂಟಿಂಗ್ ಮಾಡಿದ್ದಾಗಿ ನಿರ್ದೇಶಕ ವಿರಾಟ್ ಬಿ ಗೌಡ ತಿಳಿಸಿದ್ದಾರೆ.

"ಕಾಡಿನಲ್ಲಿ ನಡೆದ ಚಿತ್ರೀಕರಣದ ಅನುಭವ‌ ಮರೆಯಲು ಅಸಾಧ್ಯ. ಎಲ್ಲರೂ ಬೆವರು ಸುರಿಸಿ ಚಿತ್ರ‌ ಮಾಡಿದ್ದೇವೆ ಎನ್ನುತ್ತಾರೆ. ನಾವು ರಕ್ತ ಸುರಿಸಿ ಸಿನಿಮಾ ಮಾಡಿದ್ದೇವೆ ಅಂತ ಹೇಳಬಹುದು. ಕಾರಣವೇನಂದ್ರೆ, ಕಾಡಿನಲ್ಲಿ ಜಿಗಣೆಗಳು ಅಷ್ಟಿದ್ದವು." ಎಂದು 'ಜೂಲಿಯಟ್ 2' ಸಿನಿಮಾದ ಅನುಭವವನ್ನು ನಾಯಕಿ ಬೃಂದಾ ಆಚಾರ್ಯ ಹಂಚಿಕೊಂಡಿದ್ದಾರೆ. 'ಜೂಲಿಯೆಟ್ 2' ಸಿನಿಮಾದಲ್ಲಿ ಶ್ರೀಕಾಂತ್ ಹಾಗೂ ರಾಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಬೃಂದಾ ಆಚಾರ್ಯ, ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ ನಟಿಸಿದ್ದಾರೆ. ಲಿಖಿತ್ ಆರ್ ಕೋಟ್ಯಾನ್ ಸಿನಿಮಾ ನಿರ್ಮಿಸಿದ್ದರೆ, ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಹಾಗೇ shanto v anto ಕ್ಯಾಮರಾ ಹಿಡಿದಿದ್ದಾರೆ.

ಇದನ್ನೂ ಓದಿ-Siddharth- Kiara: ಮಿಡ್‌ ನೈಟ್‌ ಪಾರ್ಟಿಯಲ್ಲಿ ಮಿಂಚಿದ ಸಿದ್ಧಾರ್ಥ್- ಕಿಯಾರಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News