Udupi Shocking News: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಹೌದು, ʼಕರಿಮಣಿ ಮಾಲೀಕ ನೀನಲ್ಲʼ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡಿದ್ದವಳೇ ತನ್ನ ಲವರ್‌ ಜೊತೆಗೆ ಸೇರಿ ತಾಳಿ ಕಟ್ಟಿದ್ದ ಗಂಡನ ಕಥೆ ಮುಗಿಸಿದ್ದಾಳೆ.  


COMMERCIAL BREAK
SCROLL TO CONTINUE READING

44 ವರ್ಷದ ಪತಿ ಬಾಲಕೃಷ್ಣ ಪೂಜಾರಿಗೆ ಪತ್ನಿ ಪ್ರತಿಮಾ ಊಟದಲ್ಲಿ ವಿಷ ಬೆರೆಸಿ ಬಳಿಕ ಬೆಡ್‌ಶೀಟ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಈ ಸಂಬಂಧ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್‌ ಹೆಗ್ಡೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.


ಇದನ್ನೂ ಓದಿ: ಕಿಕ್ಕೇರಿಸಿಕೊಳ್ಳುವ ಮುನ್ನ ಎಚ್ಚರ..!! ನಿಮಗಿಷ್ಟದ ಬಿಯರ್‌ನಲ್ಲಿ ಹಲ್ಲಿ ಪತ್ತೆ.. ವಿಡಿಯೋ ವೈರಲ್‌


ಕಳೆದ 25 ದಿನಗಳಿಂದ ಬಾಲಕೃಷ್ಣ ಪೂಜಾರಿ ಅನಾರೋಗ್ಯದಿಂದ ಬಳಲುತ್ತಿದ್ದರಂತೆ. ಹೀಗಾಗಿ ಅವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಬಳಿಕ ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಅ.20ರಂದು ಬಾಲಕೃಷ್ಣ ಮನೆಯಲ್ಲೇ ಹಠಾತ್‌ ಸಾವನ್ನಪ್ಪಿದ್ದರು. ಈ ಸಾವಿನ ಬಗ್ಗೆ ಪ್ರತಿಮಾಳ ಸಹೋದರ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.


ಈ ಸಂಬಂಧ ಅಜೆಕಾರು ಠಾಣೆ ಪೊಲೀಸರು ಪ್ರತಿಮಾ ಮತ್ತು ಆಕೆಯ ಪ್ರಿಯಕರನ ದಿಲೀಪ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದ್ದರು. ಈ ವೇಳೆ ಆರೋಪಿಗಳು ಕೊಲೆ ರಹಸ್ಯವನ್ನು ಬಾಯಿಬಿಟ್ಟಿದ್ದಾರೆ. ಅಂದಹಾಗೆ ಪ್ರತಿಮಾಗೆ ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್ ಮಾಡುವ ಗೀಳು ಹಿಡಿದಿತ್ತು. ಬಲವಂತವಾಗಿ ಪತಿ ಬಾಲಕೃಷ್ಣ ಪೂಜಾರಿ ಜೊತೆ ಪ್ರತಿಮಾ ಹಲವು ರೀಲ್ಸ್‌ಗಳನ್ನು ಮಾಡಿದ್ದಾಳೆ. ʼಕರಿಮಣಿ ಮಾಲೀಕ ನೀನಲ್ಲʼ ಎನ್ನುವ ರೀಲ್ಸ್‌ಅನ್ನು ಸಹ ಪತಿ ಜೊತೆಗೆ ಮಾಡಿದ್ದಳು. ಈ ರೀಲ್ಸ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದಳು. 


ಇದನ್ನೂ ಓದಿ: ಯುವರಾಜ್‌ ಕುಮಾರ್‌ ಬಂಧನ..! ದೊಡ್ಮನೆ ಕುಡಿಯನ್ನ ನಡುರಸ್ತೆಯಲ್ಲೇ ಎಳೆದೊಯ್ದ ಖಾಕಿ.. ವಿಡಿಯೋ ವೈರಲ್


ಈ ದಂಪತಿ ಬಾಳಲ್ಲಿ ದಿಲೀಪ್‌ ಎಂಟ್ರಿ!


ಪ್ರತಿಮಾಳ ಕೆಲವು ರೀಲ್ಸ್‌ಗಳು ವೈರಲ್‌ ಆಗಿದ್ದವು. ಇನ್‌ಸ್ಟಾಗ್ರಾಂನಲ್ಲಿಯೇ ಆಕೆಗೆ ದೀಲಿಪ್‌ ಹೆಗ್ಡೆಯ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಪ್ರೀತಿಯಾಗಿದೆ. ಇದೇ ಬಾಲಕೃಷ್ಣ ಪೂಜಾರಿ ಜೀವಕ್ಕೆ ಕುತ್ತು ತಂದಿದೆ. ಬಾಲಕೃಷ್ಣ ಪೂಜಾರಿ ಮತ್ತು ಪತ್ನಿ ಪ್ರತಿಮಾ 17 ವರ್ಷದ ಹಿಂದೆ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಪತಿ ಬಾಲಕೃಷ್ಣ ಕಾಲೇಜು ಕ್ಯಾಂಟೀನ್ ನಡೆಸುತ್ತಿದ್ದರು, ಪ್ರತಿಮಾ ಅಜೆಕಾರು ಜಂಕ್ಷನ್‌ನಲ್ಲಿ ಬ್ಯೂಟಿ ಪಾರ್ಲರ್ ಮಾಡಿಕೊಂಡಿದ್ದಳು. ಆದರೆ ಈ ದಂಪತಿ ಬಾಳಲ್ಲಿ ದಿಲೀಪ್ ಹೆಗ್ಡೆ ಎಂಟ್ರಿಯಾಗಿ ಬಿರುಗಾಳಿ ಎದ್ದಿತ್ತು. ಕೊನೆಗೆ ಅದು ಬಾಲಕೃಷ್ಣ ಅವರ ಜೀವವನ್ನೇ ತೆಗೆದಿದೆ. ಲವರ್‌ ಜೊತೆಗೆ ಸೇರಿಕೊಂಡು ಪ್ರತಿಮಾ ಬಾಲಕೃಷ್ಣರಿಗೆ ಊಟದಲ್ಲಿ ಸ್ಲೋಪಾಯಿಸನ್‌ ನೀಡಿ ನಂತರ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಇದೀಗ ಇಬ್ಬರೂ ಜೈಲು ಕಂಬಿ ಎಣಿಸುವಂತಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.