ಬೆಂಗಳೂರು:  ಹಾಡುಹಾಗಲೇ ಬೈಕ್ ಸವಾರನನ್ನ ಅಡ್ಡಗಟ್ಟಿ ದುಷ್ಕರ್ಮಿಯೊಬ್ಬ ಸುಲಿಗೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.‌ ಈ ಸಂಬಂಧ‌ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.


COMMERCIAL BREAK
SCROLL TO CONTINUE READING

ಇದೇ ತಿಂಗಳು 15ರಂದು ಮಾಗಡಿ ರಸ್ತೆಯ ಇಟಿಎಂ ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ  ಸೆರೆಯಾಗಿದೆ.  ಅಕ್ಟೋಬರ್ 15 ರಂದು ಮಹೇಂದ್ರ ಕುಮಾರ್ ಮೇಸ್ತಾ ಎಂಬುವರು ಇಟಿಎಂ ಅಪಾರ್ಟ್‌ಮೆಂಟ್  ಬಳಿ ಬೈಕ್‌ನಲ್ಲಿ ತೆರಳುವಾಗ ಈ ಘಟನೆ ನಡೆದಿದೆ.


ಇದನ್ನೂ ಓದಿ- ಯಾವ ರಾಬಿನ್ ಹುಡ್ ಕಥೆಗಿಂತ ಕಡಿಮೆಯಿಲ್ಲ ಈ ಕಳ್ಳನ ಕಥೆ!


ಅಕ್ಟೋಬರ್ 15ರಂದು ಮಹೇಂದ್ರ ಕುಮಾರ್ ಮೇಸ್ತಾ ಅವರು ಇಟಿಎಂ ಅಪಾರ್ಟ್‌ಮೆಂಟ್ ಬಳಿ ಬೈಕ್‌ನಲ್ಲಿ ಮನೆಗೆ  ತೆರಳುವಾಗ ಹೆಲ್ಮೆಟ್ ಧರಿಸಿ ಸೂಟ್ಕರ್ ನಲ್ಲಿ ಬಂದ ಅಗತುಂಕನೊಬ್ಬ ಬೈಕ್  ಅಡ್ಡಗಟ್ಟಿದ್ದಾನೆ. ನನ್ನ ಬಳಿ ಹಣ ಇಲ್ಲ ಎಂದು ಮಹೇಂದ್ರ ಹಣ ನೀಡಲು ನಿರಾಕರಿಸಿದಾಗ ಆತನಿಗೆ ಚಾಕು ತೋರಿಸಿ ಹಣ ನೀಡದಿದ್ದರೆ ತಿವಿಯುವುದಾಗಿ ಹೆದರಿಸಿದ್ದಾನೆ. 


ಖದೀಮನ ಕೈಯಲ್ಲಿ ಚಾಕು ಕಂಡು ಭಯಭೀತರಾದ ಮಹೇಂದ್ರ ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್ ಅನ್ನು ಸಹ ಕರೆದಿದ್ದಾರೆ. ಈ ವೇಳೆ ಯಾರೂ ಆತನ ಸಹಾಯಕ್ಕೆ ಬರಲಿಲ್ಲ. ಇದೇ ವೇಳೆ ಖದೀಮ ಮಹೇಂದ್ರನ ಜೇಬಿನಲ್ಲಿದ್ದ 13 ಸಾವಿರ ರೂ. ಹಣ ಹಾಗೂ ಆಧಾರ್ ಕಾರ್ಡ್ ಕಸಿದುಕೊಂಡು‌ ಪರಾರಿಯಾಗಿದ್ದಾನೆ‌. 


ಇದನ್ನೂ ಓದಿ- NSE Phone Tapping Case: ಫೋನ್ ಟ್ಯಾಪಿಂಗ್ ಪ್ರಕರಣ, ಮುಂಬೈ ಮಾಜಿ ಪೋಲೀಸ್ ಕಮಿಷನರ್ ಸಿಬಿಐ ವಶಕ್ಕೆ


ಘಟನೆ ನಂತರ ಕುಟುಂಬದವರಿಗೆ ಮಾಹಿತಿ ನೀಡಿದ ಮಹೇಂದ್ರ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.