NSE Phone Tapping Case: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಅವರನ್ನು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ವಶಕ್ಕೆ ತೆಗೆದುಕೊಂಡಿದೆ. ಪಾಂಡೆಯನ್ನು ಶನಿವಾರ ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರನ್ನು ನಾಲ್ಕು ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ಇದಕ್ಕೂ ಮುನ್ನ ಮುಂಬೈ ಪೊಲೀಸ್‌ನ ಮಾಜಿ ಪೊಲೀಸ್ ಆಯುಕ್ತರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.
ಎನ್‌ಎಸ್‌ಇ ಮಾಜಿ ಮುಖ್ಯಸ್ಥರಾದ ರವಿ ನಾರಾಯಣ್ ಮತ್ತು ಚಿತ್ರಾ ರಾಮಕೃಷ್ಣ ಅವರ ವಿರುದ್ಧ ಜಾರಿ ನಿರ್ದೇಶನಾಲಯವು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಎಕ್ಸ್‌ಚೇಂಜ್‌ನೊಂದಿಗೆ ಕೆಲಸ ಮಾಡುತ್ತಿರುವ ಕೆಲವರ ಮೇಲೆ ಗೂಢಚಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸಂಜಯ್ ಪಾಂಡೆ ವಿರುದ್ಧ ತನಿಖೆ ಆರಂಭಿಸಿತ್ತು.
ಇದನ್ನೂ ಓದಿ-Amit Shah: ಬಿಹಾರ-ಬಂಗಾಳದ ಕೆಲ ಜಿಲ್ಲೆಗಳು ಸೇರಿ ಕೇಂದ್ರಾಡಳಿತ ಪ್ರದೇಶವಾಗಲಿದೆಯೇ?
ಸಂಜಯ್ ಪಾಂಡೆ ಅವರು ಏಪ್ರಿಲ್ 2000 ರಲ್ಲಿ ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದಾರೆ ಎಂದು ಜುಲೈನಲ್ಲಿ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿತ್ತು. ಅವರ ಸೇವೆಗೆ ಸಂಬಂಧಿಸಿದಂತೆ 2001 ಮತ್ತು 2006 ರ ನಡುವೆ ವಿಚಾರಣೆ ನಡೆದಿತ್ತು. ನಂತರ, ಅವರು 2007 ರಲ್ಲಿ VRS (ಸ್ವಯಂ ಸೇವಾ ನಿವೃತ್ತಿ) ಗೆ ಅರ್ಜಿ ಸಲ್ಲಿಸಿದರು, ಅದನ್ನು ಅವರು ಅಕ್ಟೋಬರ್ 2008 ರಲ್ಲಿ ಹಿಂಪಡೆದುಕೊಂಡಿದ್ದರು.
ಇದನ್ನೂ ಓದಿ-ISISಗಾಗಿ ಯುವಕರನ್ನು ಸಿದ್ಧಗೊಳಿಸುತ್ತಿದೆ ಪಿಎಫ್ಐ, ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಹುನ್ನಾರದಲ್ಲಿದೆ: NIA
ಸಂಜಯ್ ಪಾಂಡೆ ತಮ್ಮ ವಿರುದ್ಧದ ಆರೋಪಗಳನ್ನು ಒಂದು ಪಿತೂರಿ ಎಂದು ಹೇಳಿದ್ದಾರೆ. ನಾನು ಹಲವು ಉನ್ನತ ಮತ್ತು ರಾಜಕೀಯವಾಗಿ ಸೂಕ್ಷ್ಮ ಪ್ರಕರಣಗಳ ತನಿಖೆ ನಡೆಸಿದ್ದೇನೆ. ಇದು ಪ್ರಾಮಾಣಿಕ ಸೇವೆಯ ಬದಲಾಗಿ ನನ್ನ ವಿರುದ್ಧ ಮಾಡಲಾಗಿರುವ ರಾಜಕೀಯ ಸಂಚು ಎಂಬುದು ನನಗೆ ತಿಳಿದಿದೆ ಎಂದಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.