ಪೊಲೀಸ್ ಸಮವಸ್ತ್ರ ಹಾಕ್ಕೊಂಡು ಚಿನ್ನದ ವ್ಯಾಪಾರಿಯ ದರೋಡೆ: ಮೂವರ ಆರೋಪಿಗಳ ಬಂಧನ
ಸಿನಿಮಾ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟ ನಕಲಿ ಪೊಲೀಸರಿಂದ ಚಿನ್ನದ ವ್ಯಾಪಾರಿಯಿಂದ 6 ಲಕ್ಷ ಕ್ಯಾಶ್, ಚಿನ್ನದ ಬಿಸ್ಕತ್ತು ದರೋಡೆ ಮಾಡಿದ್ದ ಖತರ್ನಾಕ್ ಕಳ್ಳರು.
ಬೆಂಗಳೂರು : ಪೊಲೀಸ್ ಸಮವಸ್ತ್ರ ಧರಿಸಿ ಚಿನ್ನದ ವ್ಯಾಪಾರಿನ್ನು ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ನಾಗರಾಜ್, ಅರುಣ್ ಹಾಗೂ ಮಂಜು ಬಂಧಿತರು. ಸದ್ಯ ಖತರ್ನಾಕ್ಗಳಿಂದ 6 ಲಕ್ಷ ನಗದು ಹಾಗೂ ಚಿನ್ನದ ಬಿಸ್ಕತ್ತು ಒಂದು ಕಾರು, ಆಟೋ ಸೀಜ್ ಮಾಡಲಾಗಿದೆ.
ಫೆಬ್ರವರಿ 7ನೇ ತಾರೀಖು ತಮಿಳುನಾಡಿನ ಸುಂದರಂ ಎಂಬುವವರು ತಮ್ಮ ಮಾಲೀಕನ ಸೂಚನೆಯಂತೆ ಶಿವಮೊಗ್ಗದಿಂದ 6 ಲಕ್ಷ ನಗದು ಹಾಗೂ ಚಿನ್ನದ ಬಿಸ್ಕೆಟ್ ಪಡೆದು ತಮಿಳುನಾಡಿಗೆ ಮರಳುತ್ತಿದ್ದರು. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮೈಸೂರು ರಸ್ತೆಯ ಸ್ಯಾಟ್ಲೈಟ್ ಬಸ್ ನಿಲ್ದಾಣಕ್ಕೆ ಬಂದು ತಮಿಳುನಾಡಿನ ಬಸ್‌ನಲ್ಲಿ ಕುಳಿತಿದ್ದರು.
ಇದನ್ನೂ ಓದಿ- ಫಾಸ್ಟ್ ಫುಡ್ ಸೆಂಟರ್ ಗೆ ನುಗ್ಗಿ ಊಟ ಕೊಡುವಂತೆ ಪುಡಿರೌಡಿ ಅವಾಜ್: ದೃಶ್ಯ ಸಿಸಿಟಿಯಲ್ಲಿ ಸೆರೆ
ಅಷ್ಟರಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಬಸ್ ಹತ್ತಿದ್ದ ಆರೋಪಿಗಳು, ಸುಂದರಂ ಕೈನಲ್ಲಿದ್ದ ಬ್ಯಾಗ್ ಪಡೆದು ಪರಿಶೀಲಿಸಬೇಕು ಎಂದಿದ್ದರು. ಬಳಿಕ ತಮ್ಮ ಕಾರಿನಲ್ಲಿ ಸ್ವಲ್ಪ ದೂರದವರೆಗೆ ಕರೆದೊಯ್ದು ಬ್ಯಾಗಿನಲ್ಲಿದ್ದ ಚಿನ್ನದ ಬಿಸ್ಕೆಟ್ ಹಾಗೂ 6 ಲಕ್ಷ ರೂ. ನಗದು ಕಿತ್ತುಕೊಂಡು ಪರಾರಿಯಾಗಿದ್ದರು. ಗಾಬರಿಗೊಂಡ ಸುಂದರಂ ತಮ್ಮ ಮಾಲೀಕನ ಸೂಚನೆಯಂತೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
OMG: ಫೇಸ್‍ಬುಕ್ ಸುಂದರಿಗಾಗಿ ಪತ್ನಿಗೆ ವಿಷವಿಟ್ಟ ಪತಿರಾಯ..!
ದೂರಿನನ್ವಯ ಕಾರ್ಯಾಚರಣೆ ನಡೆಸಿದ ಬ್ಯಾಟರಾಯನಪುರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಾಗರಾಜ್ ಕೆಎಸ್‌ಆರ್‌ಟಿಸಿಯಲ್ಲಿ ಹೋಂ ಗಾರ್ಡ್ ಆಗಿದ್ದು, ಆತನಿಗೆ ಸಾಥ್ ನೀಡಿದ್ದ ಆಟೋ ಚಾಲಕರಾದ ಅರುಣ್, ಮಂಜು ಎಂಬಾತನನ್ನ ಸಹ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.