ಫಾಸ್ಟ್ ಫುಡ್ ಸೆಂಟರ್ ಗೆ ನುಗ್ಗಿ ಊಟ ಕೊಡುವಂತೆ ಪುಡಿರೌಡಿ ಅವಾಜ್: ದೃಶ್ಯ ಸಿಸಿಟಿಯಲ್ಲಿ ಸೆರೆ

ಇದೇ ಭಾನುವಾರ ಸಂಜೆ 6-30ರ ಸುಮಾರಿಗೆ ಮಂಜ ಫುಡ್ ಸೆಂಟರ್ ಗೆ ನುಗ್ಗಿ ಉಚಿತವಾಗಿ ಊಟ ಕೊಡಲು ಡಿಮ್ಯಾಂಡ್ ಮಾಡಿದ್ದಾನೆ. ಅಂಗಡಿಯವರು ಕೊಡದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಭಯಭೀತರಾದ ಅಂಗಡಿ ಮಾಲೀಕ ಈ ಬಗ್ಗೆ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದ. ದೂರಿನನ್ವಯ ಇಂದು ಮಂಜನನ್ನ ಬಂಧಿಸಿದ್ದಾರೆ.

Written by - VISHWANATH HARIHARA | Edited by - Manjunath N | Last Updated : Jan 11, 2023, 07:56 PM IST
  • ಇದೇ ಭಾನುವಾರ ಸಂಜೆ 6-30ರ ಸುಮಾರಿಗೆ ಮಂಜ ಫುಡ್ ಸೆಂಟರ್ ಗೆ ನುಗ್ಗಿ ಉಚಿತವಾಗಿ ಊಟ ಕೊಡಲು ಡಿಮ್ಯಾಂಡ್ ಮಾಡಿದ್ದಾನೆ.
  • ಅಂಗಡಿಯವರು ಕೊಡದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
  • ಭಯಭೀತರಾದ ಅಂಗಡಿ ಮಾಲೀಕ ಈ ಬಗ್ಗೆ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದ
ಫಾಸ್ಟ್ ಫುಡ್ ಸೆಂಟರ್ ಗೆ ನುಗ್ಗಿ ಊಟ ಕೊಡುವಂತೆ ಪುಡಿರೌಡಿ ಅವಾಜ್: ದೃಶ್ಯ ಸಿಸಿಟಿಯಲ್ಲಿ ಸೆರೆ  title=
screengrab

ಬೆಂಗಳೂರು: ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜಕ್ಕೂರು ಗ್ರಾಮದ ಸರ್ಕಲ್ ಬಳಿ ನಾರ್ತ್ ಇಂಡಿಯನ್ ಫಾಸ್ಟ್ ಫುಡ್ ಸೆಂಟರ್ ನುಗ್ಗಿ ಫ್ರೀ ಫುಡ್ ಗಾಗಿ ಧಮ್ಕಿ ಹಾಕಿದ್ದ 
ರೌಡಿಶೀಟರ್ ಮಂಜುನಾಥ್ @ ತಿಕ್ಲು @ ತಿಕ್ಲಮಂಜನನ್ನು ಪೊಲೀಸರು ಬಂಧಿಸಿದ್ದಾರೆ.

ಇದೇ ಭಾನುವಾರ ಸಂಜೆ 6-30ರ ಸುಮಾರಿಗೆ ಮಂಜ ಫುಡ್ ಸೆಂಟರ್ ಗೆ ನುಗ್ಗಿ ಉಚಿತವಾಗಿ ಊಟ ಕೊಡಲು ಡಿಮ್ಯಾಂಡ್ ಮಾಡಿದ್ದಾನೆ. ಅಂಗಡಿಯವರು ಕೊಡದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಭಯಭೀತರಾದ ಅಂಗಡಿ ಮಾಲೀಕ ಈ ಬಗ್ಗೆ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದ. ದೂರಿನನ್ವಯ ಇಂದು ಮಂಜನನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: Golden Globe Awards: RRRಗೆ ಪ್ರತಿಷ್ಠಿತ ಪ್ರಶಸ್ತಿಯ ಗರಿ; ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್!

ಕುಡಿದ ಮತ್ತಿನಲ್ಲಿ ತಿಕ್ಲಮಂಜನ ಬೆದರಿಕೆ, ಅವಾಜ್ ಹಾಕಿರುವ CCTV ದೃಶ್ಯ ಸಹ ಲಭ್ಯವಾಗಿದ್ದು, ಉಚಿತ ಫುಡ್ ಗೆ ಮಂಜ ಆರ್ಡರ್ ಮಾಡಿದಾಗ ದೂರುದಾರ ವಿಕಾಸ್ ಕುಮಾರ್ ತಂಗಿ ಶೀತಲ್ ಮತ್ತು ಕೆಲಸಗಾರ ರಾಜು ಮಾತ್ರ ಫುಡ್ ಸೆಂಟರ್ ನಲ್ಲಿದ್ದರು‌. ಈ ವೇಳೆ ಬಂದ ಮಂಜ, ರಾಜು ಎಂಬ ಕೆಲಸಗಾರನಿಗೆ ನಿಂದಿಸಿ ಕತ್ತಿಗೆ ಗುದ್ದಿ, ಶೀತಲ್ ಎಂಬ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ವೇಳೆ ರಾಜು ಮತ್ತು ಯುವತಿ ಎಷ್ಟೆ ಕೇಳಿಕೊಂಡರು ಸಹ ಕುಡಿದ ಮತ್ತಿನಲ್ಲಿ ತನ್ನ ಆಟಾಟೋಪ ಮುಂದುವರೆಸಿದ್ದ. ಹೀಗಾಗಿ ಹೆದರಿದ್ಸ ನಾರ್ತ್ ಫಾಸ್ಟ್ ಫುಡ್ ಸೆಂಟರ್ ಮಾಲೀಕ‌ ವಿಕಾಸ್ ಕುಮಾರ್ ಎರಡು ದಿನ ಅಂಗಡಿ ಸಹ ಬಂದ್ ಮಾಡಿದ್ದರು. ಸದ್ಯ ದುಡಿದು ತಿನ್ನುವ ಬದಲು  ಅವಾಜ್ ಹಾಕಿ ತಿಂದು ತೇಗುತ್ತಿದ್ದ ತಿಕ್ಲ ಮಂಜ ಪೊಲೀಸರ ಅತಿಥಿಯಾಗಿದ್ದಾನೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News