ಹುಬ್ಬಳ್ಳಿ: ಅವರೆಲ್ಲರೂ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಮೂಲಕ ಭವ್ಯ ಭಾರತದ ಪ್ರಜೆಗಳನ್ನು ಹುಟ್ಟು ಹಾಕುವ ಶಿಕ್ಷಕರು. ಈಗ ಪೊಲೀಸ್ ಠಾಣೆ, ಪ್ರತಿಭಟನೆ ಮೂಲಕ ನ್ಯಾಯಕ್ಕಾಗಿ ಬೀದಿಗೆ ಇಳಿಯಲು ಮುಂದಾಗಿದ್ದಾರೆ‌. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದ ಶಿಕ್ಷಕ ಈಗ ಕಾನೂನು ರೀತಿಯಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ಮುಂದೆ ಓದಿ... 


COMMERCIAL BREAK
SCROLL TO CONTINUE READING

ಶಿಕ್ಷಕನ ಮೇಲೆ ಕಾರ್ಯದರ್ಶಿ ಹಲ್ಲೆ ಆರೋಪ!
ಹುಬ್ಬಳ್ಳಿಯ ದೇಶಪಾಂಡೆ ನಗರದ ಗರ್ಲ್ಸ್ ಸ್ಕೂಲ್‌ನ ಇಂಗ್ಲಿಷ್ ಶಿಕ್ಷಕ ಸಂಜೀವ ಶಿರಳ್ಳಿ ಮೇಲೆ ಹಲ್ಲೆ  ನಡೆಸಿದ ನ್ಯೂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಶ್ರೀಕಾಂತ ದೇಸಾಯಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ, ವಿವಿಧ ಸಂಘಟನೆ ನೇತೃತ್ವದಲ್ಲಿ ಬರುವ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಮಹಾಪ್ರಧಾನ ಕಾರ್ಯದರ್ಶಿ ಶ್ರೀಶೈಲ ಗಡದಿನ್ನಿ ಎಚ್ಚರಿಕೆ ನೀಡಿದ್ದಾರೆ.


ವಾಸ್ತವವಾಗಿ, 13 ವರ್ಷಗಳಿಂದ ಸಂಜೀವ ಶಿರಳ್ಳಿ ಗರ್ಲ್ಸ್ ಸ್ಕೂಲ್‌ನ ಇಂಗ್ಲಿಷ್ ಹಾಗೂ ಗಣಿತ ವಿಷಯದ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪ್ರಾಮಾಣಿಕತೆ ಹಾಗೂ ನೇರ ನಿಷ್ಠುರ ವ್ಯಕ್ತಿತ್ವ ಸಹಿಸದ ಕೆಲ ಪಟ್ಟಬದ್ಧ ಹಿತಾಶಕ್ತಿಗಳು, ಅವರಿಗೆ ಹಲ್ಲೆ ಹಾಗೂ ಕಿರುಕಿಳ ನೀಡುತ್ತಿವೆ ಎಂದು ಶ್ರೀಶೈಲ ಗಡದಿನ್ನಿ ಆರೋಪಿಸಿದರು.


ಇದನ್ನೂ ಓದಿ- ಹುಡುಗಿ ಪಕ್ಕ ಕೂತಿದ್ದೀಯಾ ಎಂದು ವ್ಯಕ್ತಿಗೆ ಯುವಕರ ಗುಂಪಿನಿಂದ ಮನಬಂದಂತೆ ಹಲ್ಲೆ..!


ಜೂ.11ರಂದು ಸಂಜೆ ನ್ಯೂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಶ್ರೀಕಾಂತ ದೇಸಾಯಿ ಅವರು ಶಿಕ್ಷಕ ಸಂಜೀವ ಶಿರಳ್ಳಿಗೆ ಕರೆಮಾಡಿ, ನಾಳೆಯಿಂದ ಹಳೆ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲ್‌ಗೆ ಹೋಗಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮೌಖಿಕ ಆದೇಶ ನೀಡಿದ್ದಾರೆ. ಅದರಂತೆ ಮರುದಿನ ಶಾಲೆಗೆ ಹೋಗಿ ತಮಗೆ ಬಿಡುಗಡೆ ಪತ್ರ ನೀಡುವಂತೆ ಮುಖ್ಯ ಶಿಕ್ಷಕರಿಗೆ ಕೇಳಿದಾಗ ಅವರು, ಕಾರ್ಯದರ್ಶಿಗಳ ಬಳಿ ಕಳುಹಿಸಿದ್ದಾರೆ. ಇದರಿಂದ ಗೊಂದಲಕ್ಕೆ ಒಳಗಾದ ಶಿಕ್ಷಕ ಸಂಜೀವ ಅವರು, ಲಿಖಿತ ಆದೇಶ ನೀಡುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ಅದರಿಂದ ಕೋಪಗೊಂಡ ಕಾರ್ಯದರ್ಶಿಗಳು ಸಂಜೀವ ಅವರನ್ನು ವಿನಾಃಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಯತ್ನ ನಡೆಸಿದ್ದಾರೆ ಎಂದು ದೂರಿದರು.


ಇಂಥಹ ಘಟನೆಗಳಿಂದ ಅನುದಾನಿತ ಶಾಲೆಯ ಶಿಕ್ಷಕರು ಅಸುರಕ್ಷಿತ ಭಾವ ಅನುಭವಿಸುತ್ತಿದ್ದಾರೆ. ಶಿಕ್ಷಕರು ಬಹಳಷ್ಟು ಸಮಸ್ಯೆ ಹಾಗೂ ತೊಂದರೆಯನ್ನು ಅನುಭವಿಸಿ ಕೆಲಸಮಾಡುವಂತಾಗಿದೆ. ಶಿಕ್ಷಕ ಶಿರಳ್ಳಿಗೆ ಆದ ಸಮಸ್ಯೆ ಕುರಿತು ಹುಬ್ಬಳ್ಳಿ ಉಪನಗರ ಠಾಣೆ ಹಾಗೂ ಶಹರ ಕ್ಷೇತ್ರ ಶಿಕ್ಷಣಾಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷಕರ ಸಮಸ್ಯೆಗೆ ಧ್ವನಿಯಾಗಿ ಅದನ್ನು ಪರಿಹರಿಸಬೇಕಾದ ಶಿಕ್ಷಣಾಕಾರಿಗಳು ಅಸಹಾಯಕ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೂಡಲೇ ಮೇಲಾಧಿಕಾರಿಗಳು ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ನ್ಯೂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಶ್ರೀಕಾಂತ ದೇಸಾಯಿ ಅವರನ್ನು ಬಂಧನ ಮಾಡಬೇಕು. ಮುಖ್ಯಶಿಕ್ಷಕ ಕೆ.ಟಿ.ದೇಶಪಾಂಡೆ ಸೇರಿದಂತೆ ಆರೋಪಿತ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು‌.


ಇದನ್ನೂ ಓದಿ- ವಿವಿಧ ಪ್ರಕರಣಗಳ ಅಕ್ರಮ ಮದ್ಯ ದಾಸ್ತಾನು ನಾಶ


ಒಟ್ಟಿನಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಹಾಗೂ ಶಿಕ್ಷಕರ ನಡುವಿನ ಜಗಳ ಈಗ ಬೀದಿಗೆ ಬಂದಿದ್ದು, ಸರ್ಕಾರ ಹಾಗೂ ಪೊಲೀಸ್ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸುವ ಕಾರ್ಯವನ್ನು ಮಾಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ