ಡ್ರೈವರ್ ಪಕ್ಕ ಕೂತು ದರೋಡೆ ಸ್ಕೇಚ್ ಹಾಕಿದ್ದ ಹಳೆ ಸ್ನೇಹಿತ...!

ಕಳೆದ 2 ವರ್ಷದಲ್ಲಿ ಹಾವೇರಿ ಜಿಲ್ಲೆಯಲ್ಲಿ ಸುಮಾರು ಹೈವೆ ದರೋಡೆ ಪ್ರಕರಣಗಳು ಕಂಡು ಬಂದಿವೆ. ಈ ಗ್ಯಾಂಗ್ ಆಟಕ್ಕೆ ಹಾವೇರಿ ಜಿಲ್ಲೆಯ ಖಾಕಿ ಪಡೆಯು ಸುಸ್ತಾಗಿತ್ತು‌. ಹೇಗಾದ್ರು ಈ ಗ್ಯಾಂಗ್ ಹಿಡಿಯಲೇ ಬೇಕು ಅಂತಾ ತನಿಖೆಗೆ ಇಳಿದ ಖಾಕಿ ಪಡೆಗೆ ಸುಳಿವು ಸಿಗ್ತಿರಲ್ಲಿಲ್ಲ. 

Written by - Yashaswini V | Last Updated : Jun 20, 2023, 05:49 PM IST
  • ಹೈವೆ ಕಳ್ಳತನ ಪ್ರಕರಣ ಭೇದಿಸಿದ ಹಾವೇರಿ ಜಿಲ್ಲೆ ಖಾಕಿ ಪಡೆ...!
  • ಸಿಪಿಐ ಸುರೇಶ ಸಗರಿ ನೇತೃತ್ವದ ತಂಡ ೪೮ ಗಂಟೆಯಲ್ಲಿ ಆರೋಪಿಗಳ ಬಂಧನ...
  • ಡ್ರೈವರ್ ಪಕ್ಕ ಕೂತು ದರೋಡೆ ಸ್ಕೇಚ್ ಹಾಕಿದ್ದ ಹಳೆ ಸ್ನೇಹಿತ...!
ಡ್ರೈವರ್ ಪಕ್ಕ ಕೂತು ದರೋಡೆ ಸ್ಕೇಚ್ ಹಾಕಿದ್ದ ಹಳೆ ಸ್ನೇಹಿತ...! title=

Crime News: ಹೈವೆಯಲ್ಲಿ ಪ್ರಯಾಣಿಸೊ ಕಾರ್ ಮತ್ತು ಬೈಕ್ ಚಾಲಕರಿಗೆ ಗದರಿಸಿ ಹಣ, ಬಂಗಾರಾ ಲೂಟಿ ಮಾಡೋದು ಕೇಳಿ ಜನ ಕಂಗಾಲ್ ಆಗಿದ್ದರು.‌ ಈ ಜಾಲ ಹಿಡಿಯಲು ಖಾಕಿ ಪಡೆ ಜಾಲ ಬಿಸಿದರು ವರ್ಕೌಟ್ ಆಗ್ತಿರಿಲ್ಲ. ಆದ್ರೆ, ಕಳೆದ ವಾರದ ಹೈವೆಯಲ್ಲಿ ತಾಮ್ರದ ಲಾರಿ ದರೋಡೆಕೋರ ಹೆಡೆಮುರಿ ಕಟ್ಟುವಲ್ಲಿ ಹಾವೇರಿ ಜಿಲ್ಲೆಯ ಖಾಕಿ ಪಡೆ ಕೇವಲ 48 ಗಂಟೆಯಲ್ಲಿ ಯಶಸ್ವಿಯಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ...

ಹೌದು, ಈ ಖತರ್ನಾಕ ಗ್ಯಾಂಗ್ ಹೈವೆಯಲ್ಲಿ ಪ್ರಯಾಣಿಸೋ ಬೈಕ್ ಕಾರ್ & ಲಾರಿಗಳೇ ಟಾರ್ಗೆಟ್ ಆಗಿದ್ದವು. ಕಳೆದ 2 ವರ್ಷದಲ್ಲಿ ಹಾವೇರಿ ಜಿಲ್ಲೆಯಲ್ಲಿ ಸುಮಾರು ಹೈವೆ ದರೋಡೆ ಪ್ರಕರಣಗಳು ಕಂಡು ಬಂದಿವೆ. ಈ ಗ್ಯಾಂಗ್ ಆಟಕ್ಕೆ ಹಾವೇರಿ ಜಿಲ್ಲೆಯ ಖಾಕಿ ಪಡೆಯು ಸುಸ್ತಾಗಿತ್ತು‌. ಹೇಗಾದ್ರು ಈ ಗ್ಯಾಂಗ್ ಹಿಡಿಯಲೇ ಬೇಕು ಅಂತಾ ತನಿಖೆಗೆ ಇಳಿದ ಖಾಕಿ ಪಡೆಗೆ ಸುಳಿವು ಸಿಗ್ತಿರಲ್ಲಿಲ್ಲ. ಈ ಬೆನ್ನಲ್ಲೇ 16-06-2023  ಶುಕ್ರವಾದಂದು ಮಹಾರಾಷ್ಟ್ರದ ಮೀರಜ್ ನಿಂದ ಚನೈಯತ್ತ ಹೊರಟಿದ್ದ 13 ಟನ್ ತಾಮ್ರ ತುಂಬಿ ಲಾರಿಯನ್ನ ಹೈವೆ ಕಳ್ಳರು ತಡೆದು ಕಳ್ಳತನ ಮಾಡಿದ್ದರು. ಇನ್ನು ತಾಮ್ರದ ಲಾರಿ ಚಾಲಕ ಮಹಾರಾಷ್ಟ್ರ ಮೂಲದ ಗೋವಿಂದ ನಾರಾಯಣ ಖಂಡೇಕರ 40 ವರ್ಷದ ವ್ಯಕ್ತಿ ಮೇಲೆ ಹಾವೇರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೈದಿದ್ದರು. ಈ ಹಿನ್ನಲೆ ಹಾವೇರಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಖಾಕಿ ಪಡೆ ತನಿಖೆಗೆ ಇಳಿದು. ಕೇವಲ 48 ಗಂಟೆಯಲ್ಲಿ ಆರೋಪಿಗಳನ್ನ ಹಿಡಿಯುವಲ್ಲಿ ಸಿಪಿಐ ಸುರೇಶ ಸಗರಿ ನೇತೃತ್ವದ ತಂಡ ಯಶಸ್ವಿಯಾಗಿದೆ.

ಹೌದು, ಮಹಾರಾಷ್ಟ್ರದ ಟ್ರಾನ್ಸ್ ಪೋರ್ಟ್ ಕಂಪನಿ ಸುಮಾರು 1.13 ಲಕ್ಷ ಮೌಲ್ಯದ ತಾಮ್ರವನ್ನ ಲಾರಿ ಮೂಲಕ ಮಹಾರಾಷ್ಟ್ರದ ಮೀರಜ್ ನಿಂದ ಚೆನೈಯತ್ತ ಟ್ರಾನ್ಸ್ ಪೋರ್ಟ್ ಮಾಡ್ತಿತ್ತು. ಇದೇ ಲಾರಿಯಲ್ಲಿ ಡ್ರೈವರ್ ಪಕ್ಕಾನೇ ಕೂತು ಅವರ ಹಳೆ ಪರಿಯಚದ ಸ್ನೇಹಿತನೆ ಸ್ಕೆಚ್ ಹಾಕಿದ್ದ. 

ಇದನ್ನೂ ಓದಿ- ಬೆಳ್ಳಂ ಬೆಳಗ್ಗೆ ರೌಡಿಗಳ ಮನೆ ಕದ ತಟ್ಟಿದ ಸಿಟಿ ಪೊಲೀಸ್..

ಹೌದು, ಆರೋಪಿ ಹನುಮಂತ ಕಾಳಗಿ ಮತ್ತು ಲಾರಿ ಚಾಲಕ ಗೋವಿಂದ ಖಂಡೇಕರ್‌ಗೆ ನಾಲ್ಕು ವರ್ಷಗಳ ಹಿಂದೆ ಹಾವೇರಿ ಬಳಿಯ ಡಾಬಾವೊಂದರಲ್ಲಿ ಪರಿಚಯವಾಗಿ ಇಬ್ಬರೂ ಸ್ನೇಹಿತರಾಗಿದ್ದರು. ಗೋವಿಂದ ಖಂಡೇಕರ್ ಪ್ರೆಷರ್ ವಾಲ್ಸ್ ತರುವ ಲಾರಿಯಲ್ಲೇ ಆರೋಪಿ ಹನುಮಂತನೂ ಮೀರಜ್‌ನಿಂದ ಹಾವೇರಿಗೆ ಬಂದಿದ್ದಾನೆ. ಹಾವೇರಿ ಬಳಿ ಬರುತ್ತಿದ್ದಂತೆ ಇತರ ಆರೋಪಿಗಳ ಜತೆ ಸೇರಿ ಹನುಮಂತ ಸಂಚು ರೂಪಿಸಿ ಲಾರಿ ಚಾಲನ ಹತ್ಯೆಗೈದು ದರೋಡೆ ಮಾಡಿದ್ದಾರೆ. ಆ ದರೋಢೆಕೋರ ಹೆಡೆಮುರಿ ಕಟ್ಟುವಲ್ಲಿ ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಇನ್ನು ಈ ಪ್ರಕರಣದಲ್ಲಿ ಆರೋಪಿತ ಬಂದಿತರು ಗದಗ ಜಿಲ್ಲೆಯ ಅಡವಿ ಸೋಮಾಪುರದ ಹನುಮಂತ (ಬಸವರಾಜು/ ನಜೀ‌) ಸಿದ್ದಪ್ಪ ಕಾಳಗಿ, ಹಿರೇಕೆರೂರ ತಾಲೂಕಿನ ಮದ್ದೂರು ಗ್ರಾಮದ ಶಿವರಾಜು ಸಾತೇನಹಳ್ಳಿ, ಬಸರಿಹಳ್ಳಿ ಗ್ರಾಮದ ಶಿವಕುಮಾರ ದೊಡ್ಡಗೌಡ್ರ, ಹೊಲಬಿಕೊಂಡ ಗ್ರಾಮದ ಚಂದ್ರು ಹುಡೇದ, ರಟ್ಟಿಹಳ್ಳಿ ತಾಲೂಕಿನ ಲಿಂಗದೇವರಕೊಪ್ಪದ ಸಂಜೀವ ಬಣಕಾರ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಪವನ ಎಂಬಾತ ತಲೆ ಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಇನ್ನು 1.33 ಕೋಟಿ ಮೌಲ್ಯದ 120 ಪ್ರೆಷರ್ ವಾಲ್ಟ್, 2 ಲಾರಿ ಮತ್ತು ಕೃತ್ಯಕ್ಕೆ ಬಳಸಿದ್ದ ಜೆಸಿಬಿ ಟಿಪ್ಪರ್, ಬೈಕ್, ಗೂಡ್ಸ್ ಲಾರಿ, ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಇದನ್ನೂ ಓದಿ- Crime News : ಪಾರ್ಟಿ ಕೊಡಿಸಿದವನಿಗೆ ಥ್ಯಾಂಕ್ಸ್‌ ಬದಲಾಗಿ, ತಲೆ ಬುರುಡೆಯನ್ನೇ ಬಿಚ್ಚಿದ್ದ ಸ್ನೇಹಿತರು!

ಒಟ್ಟಿನಲ್ಲಿ ಹೈವೆಯಲ್ಲಿ ರಾತ್ರಿ ವೇಳೆ ಸಂಚರಿಸೋ ವಾಹನಗಳೆ ಈ ಗ್ಯಾಂಗ್ ಗೆ ಟಾರ್ಗೆಟ್ ಆಗಿತ್ತು.‌ ಈ ಹಿನ್ನಲೆ ಹಾವೇರಿ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೈವೆ ದರೋಡೆಕೋರರ ಹೆಡೆಮುರಿ ಕಟ್ಟುವಲ್ಲಿ ಕೆಲವ ೪೮ ಗಂಟೆಯಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸೋ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News