Shakti Yojana: ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಯಾದ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಪೂರ್ವದಲ್ಲಿಯೇ ನೀಡಲಾದ ಪಂಚ ಗ್ಯಾರಂಟಿಗಳಲ್ಲಿ ಒಂದಾದ "ಶಕ್ತಿ ಯೋಜನೆ"ಯನ್ನು ಜಾರಿಗೆ ತರಲಾಗಿದೆ. ಶಕ್ತಿ ಯೋಜನೆಯಲ್ಲಿ ರಾಜ್ಯದ ಎಲ್ಲಾ ವನಿತೆಯರಿಗೆ ನಾನ್ ಎಸಿ ಕೆ‌ಎಸ್‌ಆರ್‌ಟಿ‌ಸಿ ಬಸ್‌ಗಳಲ್ಲಿ  ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಸರ್ಕಾರದ ಈ ಯೋಜನೆಗೆ ರಾಜ್ಯದ ಮಹಿಳಾ ಮಣಿಯರಿಂದ ಉತ್ತಮ ಪ್ರತಿಕ್ರಿಯೆಯೂ ಲಭ್ಯವಾಗುತ್ತಿದೆ. ಈ ಮಧ್ಯೆ,  ಶಕ್ತಿ ಯೋಜನೆಯ ಲಾಭ ಪಡೆಯುವ ಸಲುವಾಗಿ ವ್ಯಕ್ತಿಯೋರ್ವ ಬುರ್ಖಾ ಧರಿಸಿ ಬಸ್ ಏರಿದ ಪ್ರಸಂಗವೊಂದು ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಹೌದು, ಸರ್ಕಾರದಿಂದ ಜಾರಿಯಾಗಿರುವ "ಶಕ್ತಿ ಯೋಜನೆ"ಯ ಲಾಭ ಪಡೆಯುವ ಉದ್ದೇಶದಿಂದ ಹಿಂದೂ ವ್ಯಕ್ತಿಯೊರ್ವ ಬುರ್ಖಾ ಧರಿಸಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. 


ಇದರ ಬೆನ್ನಲ್ಲೇ, ಶಕ್ತಿ ಯೋಜನೆಯ ಲಾಭ ಪಡೆಯಲು ಇನ್ನೂ ಕೆಲವು ಪುರುಷರು ಕೂಡ ಇದೇ ಮಾರ್ಗವನ್ನು ಅನುಸರಿಸಿರಬಹುದು ಎಂಬ ಅನುಮಾನಗಳು ಕೂಡ ವ್ಯಕ್ತವಾಗುತ್ತಿದೆ. ಬುರ್ಖಾ ಧರಿಸಿ ಬಸ್ ನಿಲ್ದಾಣದಲ್ಲಿ ಒಬ್ಬರೇ ಕುಳಿತಿದ್ದನ್ನು ಕಂಡ ಸಾರ್ವಜನಿಕರು ಅನುಮಾನ ಬಂದು ಪ್ರಶ್ನಿಸಿದಾಗ "ಬುರ್ಖಾ ಧರಿಸಿರುವುದು ಅವಳಲ್ಲ ಅವನು" ಎಂಬುದು ಗೊತ್ತಾಗಿದೆ. ಆ ವ್ಯಕ್ತಿಯ ಹೆಸರು ವೀರಭದ್ರಯ್ಯ ಮಠಪತಿ ಎಂದು ಹೇಳಲಾಗಿದೆ. 


ಇದನ್ನೂ ಓದಿ- ಟೊಮ್ಯಾಟೊಗೆ ಬಂಗಾರದ ಬೆಲೆ: ಕಳ್ಳರಿಂದ ಟೊಮ್ಯಾಟೊ ತುಂಬಿದ ವಾಹನ ಹೈಜಾಕ್..!


ವೀರಭದ್ರಯ್ಯ ಮಠಪತಿ ಹಿನ್ನಲೆ:
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಗುರುವಾರ ಬುರ್ಖಾ ತೊಟ್ಟು ಕುಳಿತಿದ್ದು ಕಂಡು ಈತನ ಬಳಿ ಕೆಲ ಮಹಿಳಾ ಪ್ರಯಾಣಿಕರು ಚಾಲಕಬ್ಬಿ, ಯರಿನಾರಾಯಣಪುರ ಬಸ್ ಗಳು ಎಲ್ಲಿ ನಿಲ್ಲುತ್ತವೆ ಎಂದು ಉರ್ದು ಭಾಷೆಯಲ್ಲಿ ಪ್ರಶ್ನಿಸಿದ್ದಾರೆ. 


ವೀರಭದ್ರಯ್ಯಾ ಮಠಪತಿಗೆ ಸರಿಯಾಗಿ ಉರ್ದು ಬಾರದ ಕಾರಣ ಮಹಿಳೆಯರ ಪ್ರಶ್ನೆಗೆ ಆಟ ಉತ್ತರ ನೀಡಿಲ್ಲ. ನಂತರ ಈತ ಅನುಮಾಸ್ಪದವಾಗಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ತಿರುಗಾಟ ನಡೆಸಿದ್ದಾನೆ. ಸಂಶಯ ಬಂದ ಮೂವರು ಪ್ರಯಾಣಿಕರು ಸ್ಥಳೀಯರಿಗೆ ಮಾಹಿತಿ ಕೊಟ್ಟಿದ್ದಾರೆ. ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.


ಬಸ್‌ ನಿಲ್ದಾಣದಲ್ಲಿ ಅತ್ತಿಂದಿತ್ತ ತಿರುಗಾಡುತ್ತಿದ್ದ ವ್ಯಕ್ತಿಯ ಚಲನವಲನ ಗಮನಿಸಿದ ಗ್ರಾಮಸ್ಥರಿಗೆ, ಬುರ್ಖಾ ತೊಟ್ಟ ವ್ಯಕ್ತಿ ಅವಳಲ್ಲ ಅವನು ( ಮಹಿಳೆಯಲ್ಲ ಪುರುಷ) ಎಂಬುದು ಗೊತ್ತಾಗಿದೆ. ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಮಾಡಿರುವ ತಂತ್ರ ಎಂದು ಅನುಮಾನಿಸಿ ಆತನನ್ನು ಸೆರೆ ಹಿರಿಯಲಾಗಿದೆ.  ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. 


ಇದನ್ನೂ ಓದಿ- ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ: ಯತ್ನಾಳ್ ಆರೋಪ


ಬುರ್ಖಾ ತೊಟ್ಟಿದ್ದ ವ್ಯಕ್ತಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಡಗೇರಿಯವರು. ಆತನ ಹೆಸರು ವೀರಭದ್ರಯ್ಯ ನಿಂಗಯ್ಯ  ಮಠಪತಿ (58) ಎಂದು ಗುರುತಿಸಲಾಗಿದೆ.
ಈತ "ಬೆಂಗಳೂರಿನಿಂದ ರೈಲಿನಲ್ಲಿ ಬಂದು ಸಂಶಿಯಲ್ಲಿ ಇಳಿದಿದ್ದರು. ರೈಲು ನಿಲ್ದಾಣದಲ್ಲಿ ಒಂದು ಹಳೆಯ ಬ್ಯಾಗ್ ನಲ್ಲಿ ಸಿಕ್ಕ ಬುರ್ಖಾವನ್ನು ತೊಟ್ಟು ಬಸ್‌ ನಿಲ್ದಾಣಕ್ಕೆ ಬಂದಿದ್ದನು. ಹೊಟ್ಟೆಪಾಡಿಗೆ ಭಿಕ್ಷೆ ಬೇಡುತ್ತೇನೆ.  ತಾನು ಭಿಕ್ಷಾಟನೆಗಾಗಿ ಈ ರೀತಿ ವೇಷ ಧರಿಸಿರುವುದಾಗಿ ವೀರಭದ್ರಯ್ಯ ಮಠಪತಿ ವಿಚಾರಣೆ ವೇಳೆ ಬಾಯಿ ಬಿಟ್ಟಿರುವುದಾಗಿ ಎಂದು ಕುಂದಗೋಳ ಠಾಣೆ ಪೊಲೀಸರಿಂದ  ಮಾಹಿತಿ ಲಭ್ಯವಾಗಿದೆ. 


ಆದರೆ ಈತ ವಿಜಾಪುರದಿಂದ ಪ್ರಯಾಣ ಮಾಡುವಾಗ ಸಹ ಮಹಿಳೆಯೊಬ್ಬರ ಆಧಾರ್ ಕಾರ್ಡ್ ಸಹ ದುರ್ಬಳಕೆ ಮಾಡಿಕೊಂಡು ಬೆಂಗಳೂರು ತನಕ ಪ್ರಯಾಣ ಮಾಡಿದ್ದಾನೆ ಎಂದು ತಿಳಿದು ಬಂದಿದೆ.‌ ಇನ್ನು ಬೆಂಗಳೂರಿನಿಂದ ಸಂಶಿಗೆ ಟ್ರೇನ್ ನಲ್ಲಿ ಮಾತ್ರ ಬುರ್ಖಾ ಧರಿಸಿರಿಲಿಲ್ಲ ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ.  


ಗಮನಾರ್ಹವಾಗಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜೂನ್ 11, 2023ರಂದು ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆಯನ್ನು ಈಡೇರಿಸುವ "ಶಕ್ತಿ ಯೋಜನೆ"ಗೆ ಅಧಿಕೃತ ಚಾಲನೆ ನೀಡಿತ್ತು. ರಾಜ್ಯಾದ್ಯಂತ ಕಾಂಗ್ರೆಸ್‌ ಮೊದಲ ಗ್ಯಾರಂಟಿಯಾಗಿ ಶಕ್ತಿ ಯೋಜನೆ ಜಾರಿಗೊಂಡ ಬೆನ್ನಲ್ಲೇ ಕೆ‌ಎಸ್‌ಆರ್‌ಟಿ‌ಸಿ ಬಸ್‌ಗಳಲ್ಲಿ ಮಹಿಳೆಯರ ಸಂಚಾರ ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.