Skeleton found in Salman house: ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಹಳೆಯ ಕೊಲೆ ಪ್ರಕರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಹತ್ಯೆಯನ್ನು ಬಹಿರಂಗಪಡಿಸಿದ ಪೊಲೀಸರು ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರವನ್ನು ವಶಪಡಿಸಿಕೊಂಡಿದ್ದಾರೆ. ಅಸ್ಥಿಪಂಜರವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಆಘಾತಕಾರಿ ವಿಷಯವೆಂದರೆ ಇಡೀ ಘಟನೆಯನ್ನು ನಡೆಸಿದ ವ್ಯಕ್ತಿಯೇ ನಾಲ್ಕು ವರ್ಷಗಳ ನಂತರ ನಾಟಕೀಯವಾಗಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Video : ಹಳಿ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ಬಂತು ರೈಲು! ಮುಂದೇನಾಯ್ತು?


ಕೊಲೆಯ ತಪ್ಪೊಪ್ಪಿಗೆ ವಿಡಿಯೋ ವೈರಲ್:


ಕೊಲೆ ಮಾಡಿರುವುದಾಗಿ ವ್ಯಕ್ತಿಯೊಬ್ಬತಪ್ಪೊಪ್ಪಿಕೊಂಡ ವಿಡಿಯೋ ವೈರಲ್ ಆದ ಒಂದು ದಿನದ ನಂತರ, ಮನ್ಸೂರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾ ಗ್ರಾಮದ ಆತನ ಮನೆಯ ನೆಲದಲ್ಲಿ ಹೂತಿಟ್ಟಿದ್ದ ಅಸ್ಥಿಪಂಜರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಅಸ್ಥಿಪಂಜರವು ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮೊಹಮ್ಮದ್ ಹಸನ್ ಎಂಬ ವ್ಯಕ್ತಿಯದ್ದು ಎಂದು ಶಂಕಿಸಲಾಗಿದೆ. ಪೊಲೀಸರು ಈ ಅಸ್ಥಿಪಂಜರವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.


ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ:


ಮನ್ಸೂರ್‌ಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಬ್ರಿಜೇಂದ್ರ ಸಿಂಗ್ ರಾವತ್, “ನಾವು ಸಲ್ಮಾನ್ ಎಂಬ ವ್ಯಕ್ತಿಯ ಮನೆಯ ಜಮೀನಿನಿಂದ ಅಸ್ಥಿಪಂಜರವನ್ನು ವಶಪಡಿಸಿಕೊಂಡಿದ್ದೇವೆ. ಅದೇ ಗ್ರಾಮದ ನಿವಾಸಿ ಮೊಹಮ್ಮದ್ ಹಸನ್ ಎಂಬ ವ್ಯಕ್ತಿ ನಾಪತ್ತೆಯಾದ ಪ್ರಕರಣದಲ್ಲಿ ಮನೆಯ ಜಮೀನನ್ನು ಅಗೆಯಲಾಗಿತ್ತು. ನವೆಂಬರ್ 12, 2018 ರಿಂದ ಹಸನ್ ನಾಪತ್ತೆಯಾಗಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡು ಸಲ್ಮಾನ್‌ನನ್ನು ಬಂಧಿಸಿದ್ದೇವೆ” ಎಂದು ಹೇಳಿದರು. ವಶಪಡಿಸಿಕೊಂಡ ಅಸ್ಥಿಪಂಜರವು ಮೊಹಮ್ಮದ್ ಹಸನ್ ಅವರದ್ದೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.


ಇದನ್ನೂ ಓದಿ: Earthquake : ದೇಶದ ಹಲವು ರಾಜ್ಯಗಳಲ್ಲಿ ನಡುಗಿದ ಭೂಮಿ, 4 ದಿನಗಳಲ್ಲಿ ಎರಡನೇ ಬಾರಿಗೆ ಭೂಕಂಪನ!


ಸಲ್ಮಾನ್‌ನ ತಪ್ಪೊಪ್ಪಿಗೆ:


ಕೆಲ ದಿನಗಳ ಹಿಂದೆ ಸಲ್ಮಾನ್ ಒಬ್ಬ ವ್ಯಕ್ತಿಯನ್ನು ಕೊಂದು ಶವವನ್ನು ತನ್ನ ಮನೆಯಲ್ಲಿ ಹೂತು ಹಾಕಿರುವುದಾಗಿ ಕೆಲವರ ಮುಂದೆ ತಪ್ಪೊಪ್ಪಿಕೊಂಡಿದ್ದ. ಅಪರಾಧದ ತಪ್ಪೊಪ್ಪಿಗೆಯನ್ನು ಯಾರೋ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ವೈರಲ್ ಮಾಡಿದ್ದಾರೆ. ಹಸನ್ ಸಂಬಂಧಿಕರಿಗೆ ಈ ವಿಡಿಯೋ ತಿಳಿದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.