ಬಿಜೆಪಿ ಸೇರಲು ಮುಂದಾದ್ರಾ ಎಂ.ಎಸ್.ಧೋನಿ...?

ಭಾರತದ ತಂಡದ  ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರು ಭಾರತದ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇರುವ ಫೋಟೋ ಶನಿವಾರ ಅಂತರ್ಜಾಲದಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಈಗ ನೆಟಿಜನ್ ಗಳ ಧೋನಿ ರಾಜಕೀಯಕ್ಕೆ ಧುಮುಕುತ್ತಾರೆಯೇ? ಎನ್ನುವ ಸಂದೇಹ ವ್ಯಕ್ತಪಡಿಸಿದ್ದಾರೆ.

Written by - Zee Kannada News Desk | Last Updated : Nov 12, 2022, 06:20 PM IST
  • ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ಧೋನಿ ಮತ್ತು ಶಾ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
  • ಸಮಾರಂಭದಲ್ಲಿ ಪಾಲ್ಗೊಳ್ಳಲು ಷಾ ನವದೆಹಲಿಯಿಂದ ಚೆನ್ನೈಗೆ ಖಾಸಗಿಯಾಗಿ ವಿಮಾನದಲ್ಲಿ ತೆರಳಿದರು.
  • ಬಿಜೆಪಿಯ ರಾಜ್ಯಾಧ್ಯಕ್ಷ ಎಲ್.ಮುರುಗನ್ ಮತ್ತು ಬಿಜೆಪಿಯ ಇತರ ಪ್ರಮುಖ ನಾಯಕರು ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಬಿಜೆಪಿ ಸೇರಲು ಮುಂದಾದ್ರಾ ಎಂ.ಎಸ್.ಧೋನಿ...? title=
Photo Courtsey: Twitter

ಚೆನ್ನೈ: ಭಾರತದ ತಂಡದ  ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರು ಭಾರತದ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇರುವ ಫೋಟೋ ಶನಿವಾರ ಅಂತರ್ಜಾಲದಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಈಗ ನೆಟಿಜನ್ ಗಳ ಧೋನಿ ರಾಜಕೀಯಕ್ಕೆ ಧುಮುಕುತ್ತಾರೆಯೇ? ಎನ್ನುವ ಸಂದೇಹ ವ್ಯಕ್ತಪಡಿಸಿದ್ದಾರೆ.

ಈಗ ವೈರಲ್ ಆಗಿರುವ ಈ ಫೋಟೋದಲ್ಲಿ ಧೋನಿ ಅಮಿತ್ ಶಾ ಜೊತೆ ಕೈಕುಲುಕುತ್ತಿರುವುದನ್ನು ಕಾಣಬಹುದು.ಆದರೆ ವಾಸ್ತವದ ಸಂಗತಿ ಏನೆಂದರೆ ಇದು ಇಂಡಿಯಾ ಸಿಮೆಂಟ್ಸ್‌ನ 75 ನೇ ವಾರ್ಷಿಕೋತ್ಸವದ ಕಾರ್ಯಕ್ರಮವಾಗಿದ್ದು,ಇದರಲ್ಲಿ ಇಬ್ಬರು ಅತಿಥಿಯಾಗಿ ಭಾಗವಹಿಸಿದ್ದಾರೆ. ಇದು ಮಾಜಿ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಒಡೆತನದ ಕಂಪನಿಯಾಗಿದೆ, ಅವರು ಐಪಿಎಲ್‌ನ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸಹ ಹೊಂದಿದ್ದಾರೆ.

ಇದನ್ನೂ ಓದಿ: I am a CEO : ಕೆಜಿಎಫ್‌ ಸ್ಟೈಲ್‌ನಲ್ಲಿ ಹೊಸ ಕಂಪನಿ ಹೆಸರೇಳಿದ ಡ್ರೋನ್‌ ಪ್ರತಾಪ್‌

ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ಧೋನಿ ಮತ್ತು ಶಾ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಪಾಲ್ಗೊಳ್ಳಲು ಷಾ ನವದೆಹಲಿಯಿಂದ ಚೆನ್ನೈಗೆ ಖಾಸಗಿಯಾಗಿ ವಿಮಾನದಲ್ಲಿ ತೆರಳಿದರು.ಬಿಜೆಪಿಯ ರಾಜ್ಯಾಧ್ಯಕ್ಷ ಎಲ್.ಮುರುಗನ್ ಮತ್ತು ಬಿಜೆಪಿಯ ಇತರ ಪ್ರಮುಖ ನಾಯಕರು ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News