ಬೆಂಗಳೂರು: ಪರೀಕ್ಷೆಯಲ್ಲಿ ನಕಲು ಮಾಡಿದಕ್ಕೆ ಶಿಕ್ಷಕರು ಬೈದಿದ್ದರಿಂದ ಮನನೊಂದು ಶಾಲಾ ವಿದ್ಯಾರ್ಥಿ ಅಪಾರ್ಟ್ ಮೆಂಟ್ ನ 14ನೇ‌ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಸಂಪಿಗೆಹಳ್ಳಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ‌.


COMMERCIAL BREAK
SCROLL TO CONTINUE READING

ನೂರ್ ನಗರದ ನಿವಾಸಿಯಾಗಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿ ಮೋಹಿನ್ ಖಾನ್ ನಿನ್ನೆ ಶಾಲೆಯಲ್ಲಿ ನಡೆದ ಇಂಗ್ಲೀಷ್ ಪರೀಕ್ಷೆಯಲ್ಲಿ ಕಾಪಿ ಹೊಡೆದಿದ್ದ. ಇದನ್ನ ಗಮನಿಸಿದ್ದ ಶಿಕ್ಷಕರು ಆತನನ್ನ ಬೈದು ಹೊರ ಕಳುಹಿಸಿದ್ದರು‌.‌ ಕೊಂಚ ಸಮಯದ ಬಳಿಕ ಹೊರಗಡೆ ಬಂದು ನೋಡಿದಾಗ ಮೋಹಿನ್ ಖಾನ್ ನಾಪತ್ತೆಯಾಗಿದ್ದ‌.‌ ಶಾಲಾ ಆವರಣದ ಸುತ್ತಮುತ್ತಾ ಹುಡುಕಾಡಿದರೂ ಮೋಹಿನ್ ಪತ್ತೆಯೇ ಇರಲಿಲ್ಲ. ಸಂಜೆ ವೇಳೆಗೆ ಶಾಲಾ ಸಮೀಪದ ಅಪಾರ್ಟ್ ಮೆಂಟ್ ನ 14 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.


ಇದನ್ನೂ ಓದಿ- Bangalore Crime : ಮತ್ತೊಂದು ಸೌಹಾರ್ದ ಬ್ಯಾಂಕ್‌ನ ಕರ್ಮಕಾಂಡ ಬಯಲು, 78 ಕೋಟಿ ವಂಚನೆ
 
ಶಾಲಾ ಶಿಕ್ಷಕರ ನಿರ್ಲಕ್ಷ್ಯದಿಂದ ಮಗನ ಸಾವಾಗಿದೆ‌ ಶಾಲೆಯವರು ಆತ ಕಾಪಿ ಹೊಡೆದು ಸಿಕ್ಕಾಕಿಕೊಂಡ ತಕ್ಷಣ ಪೋಷಕರಿಗೆ ಹೇಳಬಹುದಿತ್ತು. ‌ಸೆಕ್ಯೂರಿಟಿ ಗಾರ್ಡ್ ಹೊರಬಿಡಬಾರದಿತ್ತು. ತಡವಾಗಿ ಕರೆ ಮಾಡಿ ಮಾಹಿತಿ ನೀಡಿದ್ದರು. ನಾವು ಬೆಳಗ್ಗೆಯಿಂದ ಹುಡುಕಿದೆವು. ಮಗ ಪತ್ತೆಯಾಗಿರಲಿಲ್ಲ. ಠಾಣೆಗೆ ದೂರು ಕೊಡಲು ಹೋಗಿದ್ದೇವು. ಸಂಜೆ ಹೊತ್ತಿಗೆ ಅಪಾರ್ಟ್ ಮೆಂಟ್ ಮೇಲಿಂದ ಬಿದ್ದಿರುವ ವಿಚಾರ ಗೊತ್ತಾಗಿದೆ. ಶಾಲೆ‌ ಬೇಜವಾಬ್ದಾರಿ ಎದ್ದು ಕಾಣ್ತಿದೆ. 


ಇದನ್ನೂ ಓದಿ- 4 ನಿಮಿಷದಲ್ಲಿ 1.80 ಲಕ್ಷ ಖೋತಾ... ಒಟಿಪಿ ಕೊಟ್ಟು ಲಕ್ಷಾಂತರ ರೂ. ಪಂಗನಾಮ


ನಮ್ಮ ಮಗನಿಗೆ ಆಗಿದ್ದು ಬೇರೆಯವರಿಗೆ ಆಗಬಾರದು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಘಟನೆ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ಅಡಿಯಲ್ಲಿ ಶಿಕ್ಷಕರ ವಿರುದ್ಧ ಕೇಸ್ ದಾಖಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.