4 ನಿಮಿಷದಲ್ಲಿ 1.80 ಲಕ್ಷ ಖೋತಾ... ಒಟಿಪಿ ಕೊಟ್ಟು ಲಕ್ಷಾಂತರ ರೂ. ಪಂಗನಾಮ

ಬ್ಯಾಂಕ್ ಖಾತೆ ರದ್ದಾಗಲಿದೆ, ಅಪ್ ಡೇಟ್ ಮಾಡಿ ಎಂದು ಬಂದ ಮೆಸೆಜ್ ಕ್ಲಿಕ್ ಮಾಡಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಘಟನೆ ಹನೂರು ತಾಲೂಕಿನ ಗೋಪಿಶೆಟ್ಟಿಯೂರು ಗ್ರಾಮದಲ್ಲಿ ನಡೆದಿದೆ. 

Written by - Chetana Devarmani | Last Updated : Nov 6, 2022, 12:55 PM IST
  • ಬ್ಯಾಂಕ್ ಖಾತೆ ರದ್ದಾಗಲಿದೆ, ಅಪ್ ಡೇಟ್ ಮಾಡಿ ಎಂದು ಬಂದ ಮೆಸೆಜ್
  • ಮೆಸೆಜ್ ಕ್ಲಿಕ್ ಮಾಡಿ ಲಕ್ಷಾಂತರ ರೂ. ಹಣ ಕಳೆದುಕೊಂಡ ವ್ಯಕ್ತಿ
  • ಹನೂರು ತಾಲೂಕಿನ ಗೋಪಿಶೆಟ್ಟಿಯೂರು ಗ್ರಾಮದಲ್ಲಿ ಘಟನೆ
4 ನಿಮಿಷದಲ್ಲಿ 1.80 ಲಕ್ಷ ಖೋತಾ... ಒಟಿಪಿ ಕೊಟ್ಟು ಲಕ್ಷಾಂತರ ರೂ. ಪಂಗನಾಮ title=
ಹನೂರು

ಚಾಮರಾಜನಗರ: ಬ್ಯಾಂಕ್ ಖಾತೆ ರದ್ದಾಗಲಿದೆ, ಅಪ್ ಡೇಟ್ ಮಾಡಿ ಎಂದು ಬಂದ ಮೆಸೆಜ್ ಕ್ಲಿಕ್ ಮಾಡಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಘಟನೆ ಹನೂರು ತಾಲೂಕಿನ ಗೋಪಿಶೆಟ್ಟಿಯೂರು ಗ್ರಾಮದಲ್ಲಿ ನಡೆದಿದೆ. 

ಇದನ್ನೂ ಓದಿ : ಮನೆಯಲ್ಲಿ ಸೋಫಾ ಇಡಲು ಸರಿಯಾದ ದಿಕ್ಕು ಯಾವುದು ಗೊತ್ತಾ?

ಮೊಬೈಲ್ ಗೆ ಬಂದ ಮೆಸೇಜ್ ನ ಲಿಂಕ್ ಒತ್ತಿದ್ದೇ ತಡ ಒಟಿಪಿ ಬಂದಿದ್ದು ಬ್ಯಾಂಕಿನವರು ಎಂದು ಕರೆ ಮಾಡಿದ ವ್ಯಕ್ತಿಗೆ ಒಟಿಪಿ ಕೊಟ್ಟಿದ್ದಾರೆ.‌‌ ಬಳಿಕ, ಕೇವಲ 4 ನಿಮಿಷದ ಅವಧಿಯಲ್ಲಿ 24 ಸಾವಿರ, 50 ಸಾವಿರ, 99 ಸಾವಿರ, 10 ಸಾವಿರ ಹೀಗೆ ಬ್ಯಾಂಕ್ ಖಾತೆಯಲ್ಲಿ ಹಣ ಕಡಿತಗೊಂಡಿದ್ದು ಒಟ್ಟು 1.83 ಸಾವಿರ ರೂ. ಹಣ ಖಾತೆಯಲ್ಲಿ ಮಂಗಮಾಯವಾಗಿದೆ.

ಹಣ ಕಳೆದುಕೊಂಡು ಮಕ್ಮಲ್ ಟೋಪಿ ಹಾಕಿಸಿಕೊಂಡಿದ್ದು ಖಾತ್ರಿಯಾದ ಬಳಿಕ ಚಾಮರಾಜನಗರ ಸಿಇಎನ್ ಠಾಣೆಗೆ ದೂರು ಕೊಟ್ಟಿದ್ದಾರೆ. 
ಈ ಸಂಬಂಧ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : Chanakya Niti: ಹಣ ಸಂಪಾದಿಸಿದ ಬಳಿಕ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News