ಹೆಂಡತಿಯ ಪೋರ್ನ್ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆ ಇಟ್ಟ ಪತಿ..!
ಪತ್ನಿಯ ನಗ್ನ ವಿಡಿಯೋ ಚಿತ್ರೀಕರಿಸಿ ಪತಿಯೇ ಹಣಕ್ಕಾಗಿ ಪತ್ನಿಗೆ ಬೇಡಿಕೆ ಇಟ್ಟಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬೆಂಗಳೂರು : ಪತ್ನಿಯ ನಗ್ನ ವಿಡಿಯೋ ಚಿತ್ರೀಕರಿಸಿ ಪತಿಯೇ ಹಣಕ್ಕಾಗಿ ಪತ್ನಿಗೆ ಬೇಡಿಕೆ ಇಟ್ಟಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಸಾಗರ್ ಅರುಣ್ ಎಂಬಾತ ಹೆಂಡತಿಯ ನಗ್ನ ವಿಡಿಯೋ ಸೆರೆಹಿಡಿದು ಪೋರ್ನ್ ವೆಬ್ಸೈಟ್ ನಡೆಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಗೃಹ ಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ: ಭದ್ರತಾ ವೈಫಲ್ಯ ಕಾರಣವೆಂದು ಡಿಸಿಪಿ ವರದಿ
ಸಂತ್ರಸ್ಥೆ ಮದುವೆ ಬಳಿಕ ಪತಿ ಜೊತೆ ಮುಂಬೈನಲ್ಲಿ ವಾಸವಾಗಿದ್ದರು.ಈ ವೇಳೆ ಗಂಡ ಸಾಗರ್, ಗೆಳೆಯ ಸುಲೇಶ್ ಕಾರ್ನಕ್ ಎಂಬಾತನ ಜೊತೆ ಸೇರಿ ಪತ್ನಿಯ ಪೋರ್ನ್ ವಿಡಿಯೋ ಚಿತ್ರೀಕರಿಸಿದ್ದ. ಇದರಿಂದ ಮಾನಸಿಕ ಹಿಂಸೆ ಅನುಭವಿಸಿದ್ದ ಸಂತ್ರಸ್ಥೆ ಸಾಗರ್ ನನ್ನು ಬಿಟ್ಟು ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು.
ಇದನ್ನೂ ಓದಿ: Monkeypox: ಕರ್ನಾಟಕದ ಗಡಿ ರಾಜ್ಯದಲ್ಲಿ ಮಂಕಿಪಾಕ್ಸ್‌ಗೆ ಓರ್ವ ಬಲಿ?
ಆದರೆ ಸಾಗರ್ ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ.ಸಾಗರ್ ಮತ್ತವನ ಗೆಳೆಯ ಸೇರಿ ಸಂತ್ರಸ್ಥೆಯ ಪೋರ್ನ್ ವಿಡಿಯೋ ಇಟ್ಟುಕೊಂಡು ಐದು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ವರದಕ್ಷಿಣೆ ಕಿರುಕುಳ ಸಹ ಕೊಟ್ಟಿದ್ದಾರೆ ಎಂದು ಆರೋಪಿಸಿ ನೊಂದ ಪತ್ನಿ ಪತಿಯ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಕೊಂಡಿರುವ ಬಸವೇಶ್ವರ ಪೊಲೀಸರು ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.