Monkeypox: ಕರ್ನಾಟಕದ ಗಡಿ ರಾಜ್ಯದಲ್ಲಿ ಮಂಕಿಪಾಕ್ಸ್‌ಗೆ ಓರ್ವ ಬಲಿ?

ಚಾವಕ್ಕಾಡ್ ಕುರಂಜಿಯೂರಿನಲ್ಲಿ ಮಂಕಿಪಾಕ್ಸ್‌ ಲಕ್ಷಣಗಳಿರುವ ವ್ಯಕ್ತಿಯ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ವಿದೇಶದಲ್ಲಿ ನಡೆಸಿದ ಪರೀಕ್ಷೆಯ ಫಲಿತಾಂಶ ಪಾಸಿಟಿವ್‌ ಬಂದಿತ್ತು ಎಂದು ಈ ವೇಳೆ ಅವರು ತಿಳಿಸಿದ್ದಾರೆ.   

Written by - Bhavishya Shetty | Last Updated : Aug 1, 2022, 11:42 AM IST
  • ಮಂಕಿಪಾಕ್ಸ್‌ ಗುಣಲಕ್ಷಣಗಳಿಂದ ಬಳಲುತ್ತಿದ್ದ ಕೇರಳದ ವ್ಯಕ್ತಿ ಸಾವು
  • ಕೇರಳದ ತ್ರಿಶೂರ್‌ನ ಚಾವಕ್ಕಾಡ್ ಕುರಂಜಿಯೂರಿನ ಯುವಕ
  • ಇತ್ತೀಚಿಗೆ ಮಧ್ಯಪ್ರಾಚ್ಯ ದೇಶದಿಂದ ಬಂದಿದ್ದ 22 ವರ್ಷದ ಯುವಕ
Monkeypox: ಕರ್ನಾಟಕದ ಗಡಿ ರಾಜ್ಯದಲ್ಲಿ ಮಂಕಿಪಾಕ್ಸ್‌ಗೆ ಓರ್ವ ಬಲಿ? title=
monkeypox

ಇತ್ತೀಚಿನ ದಿನಗಳಲ್ಲಿ ಮಂಕಿಪಾಕ್ಸ್‌ ಭೀತಿ ದೇಶದಲ್ಲಿ ಹೆಚ್ಚಾಗುತ್ತಿದೆ. ಕೇರಳ ಮತ್ತು ನವದೆಹಲಿಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಇನ್ನು ಈ ಕಾಯಿಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿದೆ. ಈ ಮಧ್ಯೆ ಕೇರಳದಲ್ಲಿ ಮಂಕಿಪಾಕ್ಸ್‌ ಲಕ್ಷಣಗಳಿರುವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸುದ್ದಿ ಎಲ್ಲೆಡೆ ಭಯವನ್ನು ಮೂಡಿಸಿದೆ. 

ಇದನ್ನೂ ಓದಿ: ಮಲಬದ್ದತೆಯಿಂದ ತಕ್ಷಣ ಪರಿಹಾರ ನೀಡುತ್ತದೆ ಈ ನಾಲ್ಕು ವಸ್ತುಗಳು

ಕೇರಳದ ತ್ರಿಶೂರ್‌ನಲ್ಲಿ ಮಂಕಿಪಾಕ್ಸ್‌ ಗುಣಲಕ್ಷಣಗಳಿಂದ ಬಳಲುತ್ತಿದ್ದ ಕೇರಳದ ವ್ಯಕ್ತಿಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 22 ವರ್ಷದ ಯುವಕ ಕಳೆದ ತಿಂಗಳು ಮಧ್ಯಪ್ರಾಚ್ಯ ದೇಶದಿಂದ ಬಂದಿದ್ದ. ಆ ಬಳಿಕ ಆತನ ಪ್ರಯಾಣದ ದಾಖಲೆಗಳನ್ನು ಕಲೆ ಹಾಕುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ. 

ಚಾವಕ್ಕಾಡ್ ಕುರಂಜಿಯೂರಿನಲ್ಲಿ ಮಂಕಿಪಾಕ್ಸ್‌ ಲಕ್ಷಣಗಳಿರುವ ವ್ಯಕ್ತಿಯ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ವಿದೇಶದಲ್ಲಿ ನಡೆಸಿದ ಪರೀಕ್ಷೆಯ ಫಲಿತಾಂಶ ಪಾಸಿಟಿವ್‌ ಬಂದಿತ್ತು ಎಂದು ಈ ವೇಳೆ ಅವರು ತಿಳಿಸಿದ್ದಾರೆ. 

ಚಿಕಿತ್ಸೆ ಪಡೆಯಲು ವಿಳಂಬವಾದ ಬಗ್ಗೆ ತನಿಖೆ ನಡೆಸಲಾಗುವುದು ಎಂದ ಅವರು, ಮಂಕಿಪಾಕ್ಸ್‌ನಿಂದ ಯುವಕ ಸಾವನ್ನಪ್ಪಿರುವ ಕುರಿತು ಆರೋಗ್ಯ ಇಲಾಖೆ ಪುನ್ನಯೂರಿನಲ್ಲಿ ಸಭೆ ಕರೆದಿದೆ. 

ಸುದ್ದಿ ಸಂಸ್ಥೆ ಐಎಎನ್‌ಎಸ್ ಪ್ರಕಾರ, ಮಂಕಿಪಾಕ್ಸ್‌ ಪ್ರಕರಣ ನಿಜವೇ ಎಂದು ದೃಢೀಕರಿಸಲು ಅಲಪ್ಪುಳದ ವೈರಾಲಜಿ ಲ್ಯಾಬ್‌ನಿಂದ ವರದಿಗಾಗಿ ಕಾಯುತ್ತಿದ್ದೇವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪಾಸಿಟಿವ್ ಕಂಡುಬಂದಲ್ಲಿ, ಸ್ವ್ಯಾಬ್ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪುಣೆಯ ರಾಷ್ಟ್ರೀಯ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ವರದಿಯು ಸಕಾರಾತ್ಮಕವಾಗಿದ್ದರೆ, ಇದು ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಸಾವು ಎಂದು ದಾಖಲಾಗುತ್ತದೆ ಎಂದರು. 

ಇದನ್ನೂ ಓದಿ: August Bank Holidays: ಆಗಸ್ಟ್‌ನಲ್ಲಿ18 ದಿನ ಬ್ಯಾಂಕ್ ಬಂದ್, ಇಲ್ಲಿದೆ ರಜಾ ಪಟ್ಟಿ

ಮಧ್ಯಪ್ರಾಚ್ಯ ದೇಶದಿಂದ ಭಾರತಕ್ಕೆ ಬಂದ ನಂತರ ಅವರು ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಮತ್ತು ಮೇಲ್ವಿಚಾರಣೆ ಮಾಡಲು ಆರೋಗ್ಯ ಇಲಾಖೆ ಕರೆ ನೀಡಿದೆ. ಇನ್ನು ಮೃತ ವ್ಯಕ್ತಿ ಜುಲೈ 22 ರಂದು ಮನೆಗೆ ತಲುಪಿದ ನಂತರ ತನ್ನ ಸ್ನೇಹಿತರೊಂದಿಗೆ ಫುಟ್ಬಾಲ್ ಆಡಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಈತನಿಗೆ ಮಂಕಿಪಾಕ್ಸ್‌ ಇದೆ ಎಂದು ತಿಳಿದ ಬಳಿಕ ದೂರವಿರಲು ತಿಳಿಸಲಾಗಿತ್ತು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News