Crime : ತನಿಖೆ ವೇಳೆ ಕೆಲ ಸ್ಪೋಟಕ ಸತ್ಯಗಳು ಬಯಲಾಗಿದ್ದು, ಮೃತ ಅಕಾಂಕ್ಷ ನಿನ್ನಿಂದ ನಾನು ಸಂತೋಷವಾಗಿಲ್ಲ. ನಾನು ಬ್ರೇಕಪ್‌ ಮಾಡಿಕೊಳ್ಳುತ್ತೇನೆ ಎಂದು ಅರ್ಪಿತ್‌ಗೆ ಹೇಳಿದ್ದಳಂತೆ. ಇದರಿಂದ ಅರ್ಪಿತ್‌ ರೋಸಿಹೋಗಿ ಅಕಾಂಕ್ಷಗೆ ಒಂದು ಗತಿ ಕಾಣಿಸಬೇಕು ಎಂದು ಪ್ಲಾನ್‌ ಮಾಡಿಕೊಂಡಿದ್ದ. ಹೀಗಾಗಿ ಹೈದರಾಬಾದ್ ನಿಂದ ಆಕಾಂಕ್ಷಳನ್ನ ಕೊಲೆ ಮಾಡಲೆಂದೇ ಅರ್ಪಿತ್‌ ಬಂದಿದ್ದ. 


COMMERCIAL BREAK
SCROLL TO CONTINUE READING

ಫ್ಲಾಟ್ಗೆ ಬಂದವನೇ ಲವ್‌ ವಿಷಯಕ್ಕೆ ಅಕಾಂಕ್ಷ ಜೊತೆ ಜಗಳ ತೆಗೆದು ಆಕೆಯನ್ನು ಕತ್ತುಹಿಸುಕಿ ಕೊಲೆ ಮಾಡಿದ್ದ. ನಂತರ ಆತ್ಮಹತ್ಯೆ ಎಂಬಂತೆ ಬಿಂಬಿಸಲು ಮೃತದೇಹವನ್ನು ನೇತು ಹಾಕಲು ಯತ್ನಿಸಿದ್ದ. ಇನ್ನೂ ನೆಟ್‌ವರ್ಕ್‌ ಆಧಾರದಲ್ಲಿ ಪೊಲೀಸರ ಕೈಗೆ ಲಾಕ್‌ ಆಗಬಹುದು ಎಂದು ಆರೋಪಿ ಅರ್ಪಿತ್ ಪ್ರೇಯಸಿ ಫ್ಲಾಟ್ ನಲ್ಲೇ ಮೊಬೈಲ್ ಬಿಟ್ಟು ಹೋಗಿದ್ದಾನೆ. 


ಇದನ್ನೂ ಓದಿ-KCET ಪರೀಕ್ಷಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಶುರು: ಈ ದಿನದಂದು ಹೊರಬೀಳಲಿದೆ ರಿಸಲ್ಟ್!


ಬಳಿಕ ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣದ ಕಡೆ  ಪ್ರಯಾಣ ಬೆಳೆಸಿ,ಸ್ವಲ್ಪ ದೂರ ಆಟೋ, ಸ್ವಲ್ಪ ದೂರ ಕಾಲ್ನಡಿಗೆ ಮೂಲಕ ಕೆ.ಆರ್. ಪುರ ಸಮೀಪದ ಬಿ.ನಾರಾಯಣಪುರದಿಂದ ನಾಪತ್ತೆಯಾಗಿದ್ದಾನೆ. ಇಲ್ಲಿಯವರೆಗೂ ನೂರಕ್ಕು ಹೆಚ್ಚು ಸಿಸಿಟಿವಿ ಸರ್ಚ್ ಜೀವನ್ ಭೀಮಾನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ ಬಿ.ನಾರಾಯಪುರದಿಂದ ಯಾವ ಮಾರ್ಗದಲ್ಲಿ ಅರ್ಪಿತ್‌ ಹೋಗಿದ್ದಾನೆ ಎಂಬ ಸುಳಿವೇ ಇಲ್ಲ.


 ಆರೋಪಿ ಮೊಬೈಲ್ ನಲ್ಲಿ ಕೊನೆ ಕರೆಗಳು, ಮೆಸೇಜ್, ಚಾಟಿಂಗ್, ಇಮೇಲ್ ಗಳ ಪರಿಶೀಲನೆ ಸಹ ನಡೆಸಲಾಗಿದೆ. ಏರ್ಪೋರ್ಟ್, ರೈಲು ನಿಲ್ದಾಣಗಳಲ್ಲಿ ಪೊಲೀಸರು ಅಲರ್ಟ್ ಆಗಿ ಪಾಸ್ ಪೋರ್ಟ್ ಸೇರಿ ಆರೋಪಿ ಮಾಹಿತಿಯನ್ನ ಎಲ್ಲೆಡೆ ಪೊಲೀಸರು ಎಲ್ಲೆಡೆ ತಲುಪಿಸಿದ್ದಾರೆ. ಇನ್ನೂ ಆರೋಪಿ ಅರ್ಪಿತ್ ಪತ್ತೆಗೆ ನಾಲ್ಕು ವಿಶೇಷ ತಂಡಗಳಿಂದ ಕಾರ್ಯಾಚರಣೆ ಮುಂದುವರೆದಿದೆ.


ಇದನ್ನೂ ಓದಿ-ಒಟ್ಟಿಗೆ ಸ್ನಾನಕ್ಕೆ ಹೋಗಿದ್ದ ಜೋಡಿ ಸಾವು: ಗ್ಯಾಸ್ ಗೀಸರ್ ಲೀಕ್ ಆಗಿ ದುರಂತ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ