ಬೆಂಗಳೂರು : ನಿನ್ನೆ  ಕುಂಬಳಗೋಡು ರಾಮಸಂದ್ರದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕಥೆ ಕೇಳಿದ್ರೆ ಕಣ್ಣಲ್ಲಿ ನೀರು ಜಿನುಗುತ್ತದೆ.ಅಗ್ನಿ ಅವಘಡದಲ್ಲಿ ಮೃತಪಟ್ಟ ಸಲೀಮ್, ಮೆಹಬೂಬ್ ಪಾಷಾ ಮತ್ತೊಬ್ಬ ವ್ಯಕ್ತಿ ಇತ್ತೀಚೆಗೆ ಸುಗಂಧದ್ರವ್ಯ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಅದು  600 ರೂಪಾಯಿ ದಿನಗೂಲಿಯಂತೆ. ಮೃತರಲ್ಲಿ ಮೆಹಬೂಬ್ ಪಾಷಾಗೆ 37 ವರ್ಷ ವಯಸ್ಸಾಗಿತ್ತು. ಇಬ್ಬರು ಹೆಣ್ಣುಮಕ್ಕಳು ಬೇರೆ. ಜೀವನದಲ್ಲಿ‌ ಕಷ್ಟಪಟ್ಟು ದುಡಿದು  ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಮದುವೆ ಮಾಡಬೇಕು ಎಂದಿಕೊಂಡಿದ್ದ.ಆದರೆ ವಿಧಿಯ ಆಟವೇ ಬೇರೆಯಾಗಿದೆ.ಕೇವಲ ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿ ಇಂದು ಶವವಾಗಿದ್ದಾನೆ


COMMERCIAL BREAK
SCROLL TO CONTINUE READING

ಇನ್ನೂ ಸಲೀಂ ಸಹ ಕಷ್ಟಪಟ್ಟು ದುಡಿದು ಜೀವನ ನಡೆಸುತ್ತಿದ್ದು ಬೆಂಕಿ ಅವಘಡಕ್ಕೆ ಸುಟ್ಟು ಕರಕಲಾಗಿದ್ದಾನೆ. ಮೂವರು ಮೃತರ ಕುಟುಂಬಸ್ಥರ ಪಾಡು ಹೇಳತೀರದಾಗಿದ್ದು, ಗೋಳಾಟ ಮುಗಿಲುಮುಟ್ಟಿದೆ. ಮುಂದಿನ ಜೀವನ ಏನೂ ಎಂದು ಚಿಂತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.


ಇದನ್ನೂ ಓದಿ :ಯಾಮಾರಿ ಅಂಗಡಿಯಲ್ಲಿ ಬ್ಯಾಗ್ ಇಟ್ಟುಕೊಂಡ ವರ್ತಕ ಆಸ್ಪತ್ರೆಗೆ ದಾಖಲು


ಇನ್ನೂ ಅಗ್ನಿ ಅವಘಡದಲ್ಲಿ ಗಾಯಗೊಂಡ ಐವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಗಾಯಾಳುಗಳಾದ ಅಲ್ಲಾಭಕ್ಷ, ಅಫ್ರೋಜ್, ರಿಯಾಜ್, ಸಾಧಿಕ್, ಇಮ್ರಾನ್​ರಿಗೆ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇಮ್ರಾನ್'ಗೆ 27% ರಷ್ಟು ಸುಟ್ಟ ಗಾಯಗಳಾಗಿವೆ.


ಅಪ್ರೋಜ್ ಪಾಷನಿಗೆ ಕೈ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಅಲ್ಲಾಭಕ್ಷನಿಗೆ ಶೇಕಡ 7% ಗಾಯಗಳಾಗಿದ್ದು, ರಿಯಾಜ್ ಹಾಗೂ ಸಾಧಿಕ್ ಎಂಬುವವರಿಗೂ ಗಂಭೀರ ಗಾಯಗಳಾಗಿವೆ. ಇನ್ನೂ ಅಗ್ನಿ ಅವಘಡದ ವಿಷಯ ಸದನದಲ್ಲೂ ಸಹ ಚರ್ಚೆಯಾಗಿದ್ದು, ಮೃತರು ಹಾಗೂ ಗಾಯಾಳುಗಳಿಗೆ ಪರಿಹಾರ ಕೊಡಬೇಕು ಎಂಬ ಕೂಗು ಕೇಳಿ ಬಂದಿದೆ. ಸರ್ಕಾರ ಈ ಬಡ ಕುಟುಂಬಗಳಿಗೆ ಯಾವ ರೀತಿ ನೆರವು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ :ರಶ್‌ ಬಸ್‌ನಲ್ಲಿ ಪ್ರಯಾಣಿಸುತ್ತೀರಾ..? ಎಚ್ಚರಿಕೆ..! ಇಂತಹ ಕಿಲಾಡಿ ಲೇಡಿ ಗ್ಯಾಂಗ್‌ ಇರುತ್ತೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.