ಟಾಪ್ ಫ್ಯಾಷನ್ ಡಿಸೈನರ್ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ!
ಟಾಪ್ ಸೆಲೆಬ್ರಿಟಿ ಫ್ಯಾಶನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಹೈದರಾಬಾದ್: ಟಾಪ್ ಸೆಲೆಬ್ರಿಟಿ ಫ್ಯಾಶನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
35 ವರ್ಷದ ಪ್ರತ್ಯೂಷಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬಂಜಾರಾ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಫಿಲಂ ನಗರದ ಮನೆಯೊಂದರಲ್ಲಿ ಅವರು ತಂಗಿದ್ದರು. ಶನಿವಾರ ಮಧ್ಯಾಹ್ನ ಭದ್ರತಾ ತಪಾಸಣೆಗೆ ವೇಳೆ ಪ್ರತಿಕ್ರಿಯಿಸದ ಕಾರಣ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಆಗ್ರಾ ಕೋರ್ಟ್ ಅಲಹಾಬಾದ್ ಹೈಕೋರ್ಟ್ ಆಗಿದ್ಹೇಗೆ? ಇದರ ಹಿಂದಿದೆ ರೋಚಕ ಕಥೆ
ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯ ಬಾಗಿಲು ಒಡೆದು ಪರಿಶೀಲಿಸಿದಾಗ ಪ್ರತ್ಯೂಷಾ ಸ್ನಾನದ ಕೋಣೆಯಲ್ಲಿ ಶವ ಪತ್ತೆಯಾಗಿದ್ದಾರೆ. ಅವರ ಮಲಗುವ ಕೋಣೆಯಿಂದ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ ಮತ್ತು ವಾಶ್‌ರೂಮ್‌ನಿಂದ ರಾಸಾಯನಿಕಗಳ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಬಿಗ್ ಟ್ವಿಸ್ಟ್: ಮಾಸ್ಟರ್‌ಮೈಂಡ್ ಹೆಸರು ಬೆಳಕಿಗೆ!
ಪ್ರತ್ಯೂಷಾ ತನ್ನದೇ ಹೆಸರಿನ ಫ್ಯಾಷನ್ ಲೇಬಲ್‌ನ ಸಂಸ್ಥಾಪಕಿಯಾಗಿದ್ದರು. ಬಂಜಾರಾ ಹಿಲ್ಸ್‌ನಲ್ಲಿ ಫ್ಯಾಶನ್ ಸ್ಟುಡಿಯೋ ನಡೆಸುತ್ತಿದ್ದ ಅವರು ಟಾಲಿವುಡ್, ಬಾಲಿವುಡ್ ಮತ್ತು ಇತರ ಕ್ಷೇತ್ರಗಳ ಟಾಪ್ ಕ್ಲೈಂಟ್‌ಗಳನ್ನು ಹೊಂದಿದ್ದರು.
ಕಳೆದ ವರ್ಷ ಫೆಮಿನಾಗೆ ನೀಡಿದ ಸಂದರ್ಶನದಲ್ಲಿ ಪ್ರತ್ಯೂಷಾ ತನ್ನ ವೃತ್ತಿಜೀವನದ ಬಗ್ಗೆ ಮಾಹಿತಿ ನೀಡಿದ್ದರು. ಫ್ಯಾಶನ್ ವೃತ್ತಿಜೀವನ ಪ್ರಾರಂಭಿಸುವ ಮೊದಲು ಅವರು ಇಂಗ್ಲೆಂಡಿನಲ್ಲಿ ಸ್ನಾತಕೋತ್ತರ ಪದವಿ ಅಧ‍್ಯಯನ ಮಾಡಿದ್ದರು. ಬಳಿಕ ಅವರು ತಮ್ಮ ತಂದೆ ವ್ಯವಹಾರ ನಡೆಸುತ್ತಿದ್ದ ಎಲ್ಇಡಿ ಉತ್ಪಾದನಾ ಕಂಪನಿಗೆ ಸೇರಿಕೊಂಡಿದ್ದರು. ಆದಾಗ್ಯೂ, ಪ್ರತ್ಯೂಷಾ ತನ್ನ ಆಸಕ್ತಿಯ ಕ್ಷೇತ್ರ ಫ್ಯಾಶನ್ ಜಗತ್ತಿಗೆ ಎಂಟ್ರಿ ಕೊಡುವ ಮೂಲಕ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಹೆಸರು ಮಾಡಿದ್ದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.