ಆಗ್ರಾ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ ಆಗಿದ್ಹೇಗೆ? ಇದರ ಹಿಂದಿದೆ ರೋಚಕ ಕಥೆ

1862 ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರವು ಕೊಲ್ಕತ್ತಾ, ಬಾಂಬೆ ಮತ್ತು ಮದ್ರಾಸ್‌ನಲ್ಲಿ ಹೈಕೋರ್ಟ್‌ಗಳನ್ನು ಸ್ಥಾಪಿಸಿತು. ಹಲವು ವರ್ಷಗಳ ನಂತರ, ಬ್ರಿಟಿಷ್ ಇಂಡಿಯಾ ಅಂದರೆ ಭಾರತದ ಪ್ರತಿಯೊಂದು ಪ್ರಾಂತ್ಯವೂ ತನ್ನದೇ ಆದ ಹೈಕೋರ್ಟ್‌ಗಳನ್ನು ಒಳಗೊಂಡಿತ್ತು. ಆದರೆ 1950 ರ ನಂತರ, ಪ್ರಾಂತ್ಯದ ಹೈಕೋರ್ಟ್ ಆಯಾ ರಾಜ್ಯದ ಉಚ್ಚ ನ್ಯಾಯಾಲಯವಾಯಿತು.

Written by - Bhavishya Shetty | Last Updated : Jun 11, 2022, 12:26 PM IST
  • ವಿಶ್ವದ ಅತಿದೊಡ್ಡ ಹೈಕೋರ್ಟ್ ಅಲಹಾಬಾದ್‌ನಲ್ಲಿದೆ
  • ಆಗ್ರಾದಲ್ಲಿದ್ದ ಕೋರ್ಟ್‌ ಅಲಹಾಬಾದ್‌ ವರ್ಗಾವಣೆಯಾಗಲು ಕಾರಣ
  • ಇತಿಹಾಸದಲ್ಲಿ ನಾಲ್ಕನೇ ಅತ್ಯಂತ ಹಳೆಯ ಹೈಕೋರ್ಟ್
ಆಗ್ರಾ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ ಆಗಿದ್ಹೇಗೆ? ಇದರ ಹಿಂದಿದೆ ರೋಚಕ ಕಥೆ title=
Allahabad Highcourt

ಅಲಹಾಬಾದ್ ಹೈಕೋರ್ಟ್ ವಿಶ್ವದ ಅತಿದೊಡ್ಡ ಹೈಕೋರ್ಟ್ ಎಂಬ ಸ್ಥಾನಮಾನ ಪಡೆದುಕೊಂಡಿದೆ. ಅಲಹಾಬಾದ್ ಹೈಕೋರ್ಟ್ ಭಾರತದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲಿ ನಾಲ್ಕನೇ ಅತ್ಯಂತ ಹಳೆಯ ಹೈಕೋರ್ಟ್ ಎಂದೂ ಕರೆಯಲಾಗುತ್ತದೆ. ಇದನ್ನು 1886 ರಲ್ಲಿ ಬ್ರಿಟಿಷರು ಸ್ಥಾಪಿಸಿದ್ದಾರೆ. 

1862 ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರವು ಕೊಲ್ಕತ್ತಾ, ಬಾಂಬೆ ಮತ್ತು ಮದ್ರಾಸ್‌ನಲ್ಲಿ ಹೈಕೋರ್ಟ್‌ಗಳನ್ನು ಸ್ಥಾಪಿಸಿತು. ಹಲವು ವರ್ಷಗಳ ನಂತರ, ಬ್ರಿಟಿಷ್ ಇಂಡಿಯಾ ಅಂದರೆ ಭಾರತದ ಪ್ರತಿಯೊಂದು ಪ್ರಾಂತ್ಯವೂ ತನ್ನದೇ ಆದ ಹೈಕೋರ್ಟ್‌ಗಳನ್ನು ಒಳಗೊಂಡಿತ್ತು. ಆದರೆ 1950 ರ ನಂತರ, ಪ್ರಾಂತ್ಯದ ಹೈಕೋರ್ಟ್ ಆಯಾ ರಾಜ್ಯದ ಉಚ್ಚ ನ್ಯಾಯಾಲಯವಾಯಿತು. 1911 ರ ಹೈಕೋರ್ಟ್ ಕಾಯಿದೆಯಡಿ, ಮುಖ್ಯ ನ್ಯಾಯಮೂರ್ತಿ ಹುದ್ದೆ ಸೇರಿದಂತೆ ಪ್ರತಿ ಹೈಕೋರ್ಟ್‌ನಲ್ಲಿ ಗರಿಷ್ಠ ಸಂಖ್ಯೆಯ ನ್ಯಾಯಾಧೀಶರನ್ನು 16 ರಿಂದ 20 ಕ್ಕೆ ಹೆಚ್ಚಿಸಲಾಯಿತು.

ಇದನ್ನೂ ಓದಿ: ಶುಭಾಶಯಗಳ ನಡುವೆ ನೋಟೀಸ್‌: ನಟಿ ನಯನತಾರಾಗೆ ಮದುವೆ ಮರುದಿನವೇ ಶಾಕ್‌!

ಆಗ್ರಾ ಹೈಕೋರ್ಟ್ ಅಲಹಾಬಾದ್ ಹೈಕೋರ್ಟ್ ಆಗಿದ್ದು ಹೇಗೆ?
ಅಲಹಾಬಾದ್ ಹೈಕೋರ್ಟ್ ಅನ್ನು 1866ರ ಮಾರ್ಚ್ 17 ರಂದು ಆಗ್ರಾದಲ್ಲಿ ಭಾರತೀಯ ಹೈಕೋರ್ಟ್ ಕಾಯಿದೆ 1861ರ ಅಡಿಯಲ್ಲಿ ಸ್ಥಾಪಿಸಲಾಯಿತು. ಬ್ರಿಟಿಷ್ ಭಾರತದ ಎಲ್ಲಾ ಉತ್ತರ ಮತ್ತು ಪಶ್ಚಿಮ ಪ್ರಾಂತ್ಯಗಳು ಅದರ ಕಾರ್ಯಕ್ಷೇತ್ರದ ಅಡಿಯಲ್ಲಿ ಬಂದವು. ಸರ್ ವಾಲ್ಟರ್ ಮೋರ್ಗನ್ ಈ ನ್ಯಾಯಾಲಯದ ಮೊದಲ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರೆ, ಸಿಂಪ್ಸನ್ ಅದರ ಮೊದಲ ರಿಜಿಸ್ಟ್ರಾರ್ ಆಗಿ ನೇಮಕಗೊಂಡರು. ಆದರೆ ಅವರನ್ನು 3 ವರ್ಷಗಳ ನಂತರ 1869 ರಲ್ಲಿ ಆಗ್ರಾದಿಂದ ಅಲಹಾಬಾದ್‌ಗೆ ವರ್ಗಾಯಿಸಲಾಯಿತು. ಹೀಗಾಗಿ 11 ಮಾರ್ಚ್ 1919 ರಿಂದ ಆಗ್ರಾ ಹೈಕೋರ್ಟ್‌ ಎಂಬ ಹೆಸರನ್ನು ಮಾರ್ಪಾಡು ಮಾಡಿ, ಅಲಹಾಬಾದ್‌ ಹೈಕೋರ್ಟ್ ಎಂದು ಬದಲಾಯಿಸಲಾಯಿತು. ಆ ಸಮಯದಲ್ಲಿ ಅದರ ಪದನಾಮವನ್ನು ಪೂರಕ ಪತ್ರಗಳ ಪೇಟೆಂಟ್ ಮೂಲಕ ಅಲಹಾಬಾದ್ ಹೈಕೋರ್ಟ್ಎಂದು ಬದಲಾಯಿಸಲಾಯಿತು. ಈ ಪದನಾಮವನ್ನು ಇಲ್ಲಿಯವರೆಗೆ ದಾಖಲೆಗಳಲ್ಲಿ ಬಳಸಲಾಗುತ್ತಿದೆ.

25 ಫೆಬ್ರವರಿ 1948 ರಂದು, ಔದ್ ಮುಖ್ಯ ನ್ಯಾಯಾಲಯವನ್ನು ಅಲಹಾಬಾದ್ ಹೈಕೋರ್ಟ್‌ನೊಂದಿಗೆ ವಿಲೀನಗೊಳಿಸಲಾಯಿತು. ಪ್ರಸ್ತುತ ಅಲಹಾಬಾದ್ ಹೈಕೋರ್ಟ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮುಖ್ಯ ನ್ಯಾಯಾಲಯದ ಕಟ್ಟಡವು ಅಲಹಾಬಾದ್ ಅಂದರೆ ಇಂದಿನ ಪ್ರಯಾಗ್ರಾಜ್ ಜಿಲ್ಲೆಯಲ್ಲಿದೆ. ಇನ್ನೊಂದು ಭಾಗ ಅಂದರೆ ಅದರ ಎರಡನೇ ಪೀಠ ಲಕ್ನೋದಲ್ಲಿದೆ.

ಇದನ್ನೂ ಓದಿ: ಸಿನಿಮಾ ಹೊರತಾಗಿ ಬಾಲಿವುಡ್‌ ಬ್ಯೂಟಿ ಐಶ್ವರ್ಯಾ ರೈ ಸಂಪಾದನೆ ಮೂಲ ಇದುವೇ!

ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಅಡಿಪಾಯ: 
1834 ಮತ್ತು 1861ರ ನಡುವೆ ಭಾರತೀಯ ಹೈಕೋರ್ಟ್ ಕಾಯಿದೆಯ ಅನುಷ್ಠಾನದ ಮೊದಲು, ಭಾರತದಲ್ಲಿ ಎರಡು ರೀತಿಯ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದವು. ಚಕ್ರವರ್ತಿಯ ನ್ಯಾಯಾಲಯ ಮತ್ತು ಈಸ್ಟ್ ಇಂಡಿಯಾ ಕಂಪನಿಯ ನ್ಯಾಯಾಲಯವು ವಿಭಿನ್ನ ನ್ಯಾಯವ್ಯಾಪ್ತಿಯನ್ನು ಹೊಂದಿತ್ತು. ಅಂದರೆ, ಆಗ ದ್ವಂದ್ವ ಮತ್ತು ಸಂಕೀರ್ಣ ನ್ಯಾಯ ವ್ಯವಸ್ಥೆಯು ದೇಶದಲ್ಲಿ ಆಚರಣೆಯಲ್ಲಿತ್ತು. ಬ್ರಿಟಿಷ್ ರಾಣಿಯು ಭಾರತದ ಆಡಳಿತವನ್ನು ನೇರವಾಗಿ ನಿರ್ವಹಿಸುವ ನೀತಿಯು ಎರಡು ರೀತಿಯ ನ್ಯಾಯಾಲಯಗಳ ಏಕೀಕರಣದ ಸಮಸ್ಯೆಯನ್ನು ಪರಿಹರಿಸಿತು. ಈ ರೀತಿಯಲ್ಲಿ ಭಾರತೀಯ ದಂಡ ಸಂಹಿತೆ ಅಂದರೆ ಐಪಿಸಿ ಮತ್ತು ಸಿವಿಲ್, ಕ್ರಿಮಿನಲ್ ಪ್ರೊಸೀಜರ್ ಕೋಡ್‌ಗಳನ್ನು ಎಲ್ಲಾ ಜನರಿಗೆ ಅನ್ವಯಿಸಲಾಗುತ್ತದೆ. 1861ರಲ್ಲಿ ಬ್ರಿಟಿಷ್ ಸಂಸತ್ತು ಅಂಗೀಕರಿಸಿದ ಭಾರತೀಯ ಹೈಕೋರ್ಟ್ ಕಾಯ್ದೆ ಮಸೂದೆಯನ್ನು ಪರಿಚಯಿಸುವ ಸಮಯದಲ್ಲಿ, ಸರ್ ಚಾರ್ಲ್ಸ್ ವುಡ್ ಅವರು ಬ್ರಿಟಿಷ್ ಸಂಸತ್ತಿನಲ್ಲಿ ಇಡೀ ದೇಶದಲ್ಲಿ ಒಂದೇ ಸುಪ್ರೀಂ ಕೋರ್ಟ್ ಇರುತ್ತದೆ ಎಂದು ಹೇಳಿದ್ದರು. ಈ ಮೂಲಕ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಒಂದು ಭದ್ರ ಅಡಿಪಾಯ ಬಿದ್ದಂತಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News