ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಬಿಗ್‌ ಟ್ವಿಸ್ಟ್‌: ಮಾಸ್ಟರ್‌ಮೈಂಡ್‌ ಹೆಸರು ಬೆಳಕಿಗೆ!

ಹಿಂಸಾಚಾರದ ಮೊದಲ ಮಾಸ್ಟರ್ ಮೈಂಡ್ ಆರೋಪಿ ತಬ್ರೇಜ್ ಅನ್ಸಾರಿ ಮುಖವಾಡ ಹಾಕಿಕೊಂಡು ಈ ಕೃತ್ಯಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಪೊಲೀಸರ ಮುಂದೆ ಶಾಂತಿಯ ಬಗ್ಗೆ ಮಾತನಾಡುತ್ತಾ, ಇನ್ನೊಂದು ಕಡೆಯಿಂದ ಜನರನ್ನು ಹಿಂಸಾಚಾರಕ್ಕೆ ಪ್ರಚೋದಿಸುವ ಕುತಂತ್ರ ಎಸಗುತ್ತಿದ್ದ ಎಂದು ತಿಳಿದುಬಂದಿದೆ. 

Written by - Bhavishya Shetty | Last Updated : Jun 10, 2022, 12:44 PM IST
  • ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಬಿಗ್‌ ಟ್ವಿಸ್ಟ್‌
  • ಹಿಂಸಾಚಾರದ ಮಾಸ್ಟರ್‌ಮೈಂಡ್‌ಗಳ ಹೆಸರು ಬೆಳಕಿಗೆ
  • ಹಿಂಸಾಚಾರಕ್ಕೆ 6 ದಿನಗಳ ಮೊದಲೇ ಪ್ಲ್ಯಾನ್‌ ಮಾಡಲಾಗಿತ್ತು
ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಬಿಗ್‌ ಟ್ವಿಸ್ಟ್‌: ಮಾಸ್ಟರ್‌ಮೈಂಡ್‌ ಹೆಸರು ಬೆಳಕಿಗೆ! title=
Jahangirpuri Violence

ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಪೊಲೀಸರ ವಿಚಾರಣೆ ವೇಳೆ ಹಿಂಸಾಚಾರದ ಮೂವರು ಮಾಸ್ಟರ್‌ಮೈಂಡ್‌ಗಳ ಹೆಸರು ಬೆಳಕಿಗೆ ಬಂದಿದೆ. ಈ ಪಿತೂರಿಗೆ ಸುಮಾರು 6 ದಿನಗಳ ಮೊದಲೇ ಪ್ಲ್ಯಾನ್‌ ಮಾಡಲಾಗಿತ್ತು ಎಂದು ತಿಳಿದುಬಂದಿದೆ.  ಇನ್ನು ವಿಚಾರಣೆ ವೇಳೆ ಹಿಂಸಾಚಾರದ ಪ್ರಮುಖ ಆರೋಪಿಗಳಾದ  ತಬ್ರೇಜ್ ಅನ್ಸಾರಿ, ಮೊಹಮ್ಮದ್ ಅನ್ಸಾರ್ ಮತ್ತು ಇಶಾರ್ಫಿಲ್ ಹೆಸರು ಕೇಳಿಬಂದಿದೆ. ಆರೋಪಿ ಇಶಾರ್ಫಿಲ್‌ಗಾಗಿ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕ್ರೈಂ ಬ್ರಾಂಚ್ ಪಶ್ಚಿಮ ಬಂಗಾಳದಿಂದ ದೆಹಲಿಯವರೆಗೆ ಶೋಧ ನಡೆಸುತ್ತಿದೆ.

ಹಿಂಸಾಚಾರದ ಮೊದಲ ಮಾಸ್ಟರ್ ಮೈಂಡ್ ಆರೋಪಿ ತಬ್ರೇಜ್ ಅನ್ಸಾರಿ ಮುಖವಾಡ ಹಾಕಿಕೊಂಡು ಈ ಕೃತ್ಯಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಪೊಲೀಸರ ಮುಂದೆ ಶಾಂತಿಯ ಬಗ್ಗೆ ಮಾತನಾಡುತ್ತಾ, ಇನ್ನೊಂದು ಕಡೆಯಿಂದ ಜನರನ್ನು ಹಿಂಸಾಚಾರಕ್ಕೆ ಪ್ರಚೋದಿಸುವ ಕುತಂತ್ರ ಎಸಗುತ್ತಿದ್ದ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಪ್ರಾಣಿಗಳಿಗೂ ಬಂತು ಲಸಿಕೆ: ನಿಮ್ಮ ಮನೆ ಜೀವಿಗಳನ್ನೂ ಕೊರೊನಾದಿಂದ ಕಾಪಾಡಿ

CAA-NRC ವಿವಾದದ ಸಂದರ್ಭದಲ್ಲಿ ತಬ್ರೇಜ್ ಜನರನ್ನು ಹಿಂಸಾಚಾರಕ್ಕೆ ಪ್ರಚೋದಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಿಎಎ-ಎನ್‌ಆರ್‌ಸಿ ವಿರುದ್ಧ ಜಹಾಂಗೀರ್‌ಪುರಿಯಲ್ಲಿರುವ ಕುಶಾಲ್ ಚೌಕ್‌ನಲ್ಲಿ ಪ್ರತಿಭಟನೆ ನಡೆಸುವಾಗ ಈತ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ. ಅಂದಿನಿಂದ ತನ್ನ ಪ್ರದೇಶದಲ್ಲಿ ಮುಸ್ಲಿಮರನ್ನು ಕೆರಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಸುತ್ತಿದ್ದ ಎಂಬ ಭಯಾನಕ ಸತ್ಯ ಹೊರಬಿದ್ದಿದೆ. 

ಹಿಂಸಾಚಾರದ ಎರಡನೇ ಮಾಸ್ಟರ್ ಮೈಂಡ್ ಆರೋಪಿ ಶೇಖ್ ಇಶಾರ್ಫಿಲ್, ಎಫ್‌ಎಸ್‌ಎಲ್ ತನಿಖೆಗೆ ಆಗಮಿಸುವಾಗ ತನ್ನ ಮನೆಯ ಮೇಲ್ಛಾವಣಿಯಿಂದ ಕಲ್ಲು-ಗಾಜಿನ ಬಾಟಲಿಗಳನ್ನು ಎಸೆದು ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಈತನ ಮಕ್ಕಳಾದ ಅಶ್ನೂರ್ ಮತ್ತು ಮೊಹಮ್ಮದ್ ಅಲಿ ಅವರ ಅಪರಾಧ ಹಿನ್ನೆಲೆಯೂ ಪೊಲೀಸರಿಗೆ ತನಿಖೆ ವೇಳೆ ಪತ್ತೆಯಾಗಿದೆ. ಸಿಎಎ-ಎನ್‌ಆರ್‌ಸಿ ಸಮಯದಲ್ಲಿ ಇಶಾರ್ಫಿಲ್, ಇಲ್ಲಿನ ಜನರನ್ನು ಬಸ್‌ಗಳ ಮೂಲಕ ಪ್ರತಿಭಟನೆಗೆ ಕರೆದೊಯ್ಯುತ್ತಿದ್ದ ಎಂಬುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ. ಇದರೊಂದಿಗೆ ಇಶಾರ್ಫಿಲ್ ಪಾರ್ಕಿಂಗ್ ಮಾಫಿಯಾ ಕೂಡ ನಡೆಸುತ್ತಿದ್ದನಂತೆ. 

ಮೂರನೇ ಮಾಸ್ಟರ್ ಮೈಂಡ್ ಎಂದು ಆರೋಪಿ ಮೊಹಮ್ಮದ್ ಅನ್ಸಾರ್‌ನನ್ನು ಗುರುತಿಸಲಾಗಿದೆ.ತಬ್ರೇಜ್ ಅನ್ಸಾರಿಯೊಂದಿಗೆ ಹಿಂಸಾಚಾರದ ಸಂಚಿನಲ್ಲಿ ಭಾಗಿಯಾಗಿದ್ದ ಈತ ಹಿಂಸಾಚಾರದ ದಿನ ಜನರನ್ನು ಪ್ರಚೋದಿಸುವ ಕೆಲಸವನ್ನು ಮಾಡುತ್ತಿದ್ದನು. ಈ ಹಿಂಸಾಚಾರದಲ್ಲಿ 3 ಅಪ್ರಾಪ್ತರು ಸೇರಿದಂತೆ 38 ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹಿಂಸಾಚಾರದ ಆರೋಪಿಗಳು ಏಪ್ರಿಲ್ 10ರ ರಾಮ ನವಮಿಯಿಂದ ಮತ್ತು ಏಪ್ರಿಲ್ 16 ಹನುಮ ಜಯಂತಿಯಂದು ಹಿಂಸಾಚಾರ ನಡೆಸಲು ಯೋಜನೆ ಸಿದ್ಧಪಡಿಸಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಯೋಜನೆಯ ಭಾಗವಾಗಿ ಆರೋಪಿಗಳು ಹನುಮ ಜಯಂತಿ ಶೋಭಾ ಯಾತ್ರೆ ವೇಳೆ ಕಲ್ಲು ತೂರಾಟ ನಡೆಸುವಂತೆ ಮನೆಗಳ ಮೇಲ್ಛಾವಣಿಯ ಮೇಲೆ ಕಲ್ಲು ಮತ್ತು ಗಾಜಿನ ಬಾಟಲಿಗಳನ್ನು ಸಂಗ್ರಹಿಸಿಟ್ಟಿದ್ದರು. 

ಇದನ್ನು ಓದಿ: Heart Attack Risk: ಈ ಸೊಪ್ಪಿನ ಸೇವನೆಯಿಂದ ಕಡಿಮೆ ಆಗುತ್ತೆ ಹೃದಯಾಘಾತದ ಅಪಾಯ

ಏಪ್ರಿಲ್ 16 ರಂದು ಹನುಮ ಜಯಂತಿಯಂದು ಸಿ ಬ್ಲಾಕ್ ಮಸೀದಿ ಬಳಿ ಮೆರವಣಿಗೆ ಬಂದಾಗ, ಆರೋಪಿಗಳು ಮೆರವಣಿಗೆಯನ್ನು  ತಡೆದಿದ್ದಾರೆ. ಅಷ್ಟೇ ಅಲ್ಲದೆ, ಅದೇ ವೇಳೆ ಕಲ್ಲು ತೂರಾಟ ಮತ್ತು ಗಾಜಿನ ಬಾಟಲಿಗಳನ್ನು ಎಸೆಯಲು ಪ್ರಾರಂಭಿಸಿದ್ದಾರೆ. ಪರಿಣಾಮ ಜಹಾಂಗೀರ್ಪುರಿ ರಣರಂಗವಾಗಿ ಮಾರ್ಪಾಡಾಗಿತ್ತು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News