Drink and drive ವಿರುದ್ಧ ಸಂಚಾರ ಪೊಲೀಸರ ಸಮರ: ಒಂದೇ ರಾತ್ರಿ 146 ಪ್ರಕರಣ ದಾಖಲು
Drunk Driving Cases : ನಗರದಲ್ಲಿ ದಿನೇ ದಿನೇ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಸದ್ಯ ಪೊಲೀಸರು ಇದಕ್ಕೆ ಕಾರಣವನ್ನು ಸಹ ಹುಡುಕಿದ್ದಾರೆ. ಎಣ್ಣೆ ಏಟಲ್ಲಿ ವಾಹನ ಚಲಾಯಿಸುವುದು ಅಪಘಾತಗಳಿಗೆ ಕಾರಣ ಎಂಬ ಅಂಶ ಬಯಲಾಗಿದೆ.
ಬೆಂಗಳೂರು : ಸಂಚಾರ ಪೊಲೀಸರು ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಎಷ್ಟೇ ಅರಿವು ಮೂಡಿಸಿದರು ಪ್ರಯೋಜನವಾಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ನಿನ್ನೆ ರಾತ್ರಿ ಸಂಚಾರ ಪೊಲೀಸರು ನಡೆಸಿರುವ ಸ್ಪೇಷಲ್ ಡ್ರೈವ್. ನಗರದಲ್ಲಿ ದಿನೇ ದಿನೇ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಸದ್ಯ ಪೊಲೀಸರು ಇದಕ್ಕೆ ಕಾರಣವನ್ನು ಸಹ ಹುಡುಕಿದ್ದಾರೆ. ಎಣ್ಣೆ ಏಟಲ್ಲಿ ವಾಹನ ಚಲಾಯಿಸುವುದು ಅಪಘಾತಗಳಿಗೆ ಕಾರಣ ಎಂಬ ಅಂಶ ಬಯಲಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ ಇಷ್ಟು ವರ್ಷ ಗೆದ್ದಿದ್ದೇ ಕೋಮುವಾದ & ಬಡತನದ ಕಾರಣದಿಂದ: ಬಿಜೆಪಿ ಟೀಕೆ
ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನ ನಿಯಂತ್ರಿಸಲು ವಿಶೇಷ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಸಂಚಾರ ಪೊಲೀಸರು ಕಳೆದ ಒಂದೇ ರಾತ್ರಿಯಲ್ಲಿ 146 ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಂದ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅಂತವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಹೊಸ ವರ್ಷಾಚರಣೆ ಸಮೀಪಿಸುತ್ತಿರುವುದರಿಂದ ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕಲು ಜನವರಿ 1ರವರೆಗೂ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : BMTC ಪ್ರಯಾಣಿಕರ ಗಮನಕ್ಕೆ : ಬಸ್ನಲ್ಲಿ ಪ್ರಯಾಣಿಸಲು ಮಾಸ್ಕ್ ಕಡ್ಡಾಯ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.