ಕಾಂಗ್ರೆಸ್ ಇಷ್ಟು ವರ್ಷ ಗೆದ್ದಿದ್ದೇ ಕೋಮುವಾದ & ಬಡತನದ ಕಾರಣದಿಂದ: ಬಿಜೆಪಿ ಟೀಕೆ

Congress V/S BJP: ಈ ಸಿದ್ದರಾಮಯ್ಯ ಅಬ್ಬರಿಸಿ ಬೊಬ್ಬಿರಿಯುವುದಕ್ಕೆ ಮತ್ತೊಂದು ಗುಪ್ತ ಕಾರಣವೇ ಹುಬ್ಬಳ್ಳಿ-ಧಾರವಾಡದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬಾರದು ಎಂಬ ದುರುದ್ದೇಶವೆಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Written by - Puttaraj K Alur | Last Updated : Dec 23, 2022, 08:35 PM IST
  • ದರ್ಗಾ ಸ್ಥಳಾಂತರದ ಬಗ್ಗೆ ಸಿದ್ದರಾಮಯ್ಯ ಅಬ್ಬರಿಸಿ ಬೊಬ್ಬಿರಿದಿದ್ದು ಜನರನ್ನು ನಂಬಿಸಲು ಆಡುವ “ಪ್ರಜಾಪ್ರಭುತ್ವದ ನಾಟಕ’’
  • ದೇವಸ್ಥಾನಗಳ ತೆರವಾದಾಗ ಬಾಯಿಗೆ ಬೀಗ ಹಾಕಿಕೊಂಡಿದ್ದ ಸಿದ್ದರಾಮಯ್ಯ ದರ್ಗಾ‌ ತೆರವಿನ ಬಗ್ಗೆ ಎಗರಿ‌ ಬೀಳುತ್ತಿರುವುದೇಕೆ?
  • ಮಾತೆತ್ತಿದರೆ ಸಂವಿಧಾನದ ಪ್ರವಚನ ಕೊಡುವ ಸಿದ್ದರಾಮಯ್ಯ ನ್ಯಾಯಾಲಯದ ಅದೇಶ ಪಾಲಿಸಲು ಜನರಿಗೇಕೆ ಹೇಳುತ್ತಿಲ್ಲ?
ಕಾಂಗ್ರೆಸ್ ಇಷ್ಟು ವರ್ಷ ಗೆದ್ದಿದ್ದೇ ಕೋಮುವಾದ & ಬಡತನದ ಕಾರಣದಿಂದ: ಬಿಜೆಪಿ ಟೀಕೆ  title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕೆ

ಬೆಂಗಳೂರು: ಕಾಂಗ್ರೆಸ್‌ ಇಷ್ಟು ವರ್ಷ ದೇಶದಲ್ಲಿ ಗೆದ್ದಿದ್ದೇ ಕೋಮುವಾದ & ಬಡತನದ ಕಾರಣದಿಂದ ಅಂತಾ ಬಿಜೆಪಿ ಟೀಕಿಸಿದೆ. ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿನ ದರ್ಗಾ ಸ್ಥಳಾಂತರದ ಬಗ್ಗೆ ಸಿದ್ದರಾಮಯ್ಯನವರು ಅಬ್ಬರಿಸಿ ಬೊಬ್ಬಿರಿದಿದ್ದೆಲ್ಲವೂ ಜನರನ್ನು ನಂಬಿಸಲು ಆಡುವ “ಪ್ರಜಾಪ್ರಭುತ್ವದ ನಾಟಕ’’. ಏಕೆಂದರೆ ಅದೇ 13 ದೇವಸ್ಥಾನಗಳು ಮತ್ತು 1 ಚರ್ಚ್ ಹಾಗೂ 1 ದರ್ಗಾವನ್ನು ತೆರವುಗೊಳಿಸಲು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗುರುತಿಸಿದ್ದರು’ ಎಂದು ಹೇಳಿದೆ.

‘ಈ ದರ್ಗಾ ಹುಬ್ಬಳ್ಳಿ–ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲಿತ್ತು. ರಸ್ತೆ ಅಗಲೀಕರಣಕ್ಕೆ ಭೈರಿದೇವರಕೊಪ್ಪದ ದರ್ಗಾ ತೆರವಿಗೆ ಹೈಕೋರ್ಟ್ ಆದೇಶ ನೀಡಿತ್ತು. ಇದಕ್ಕನುಸಾರವಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆಯಾಗಿದ್ದೇ ವಿನಾ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ಆದೇಶದಿಂದಲ್ಲ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: BMTC ಪ್ರಯಾಣಿಕರ ಗಮನಕ್ಕೆ : ಬಸ್​ನಲ್ಲಿ ಪ್ರಯಾಣಿಸಲು ಮಾಸ್ಕ್ ಕಡ್ಡಾಯ!

‘ದೇವಸ್ಥಾನಗಳ ತೆರವಾದಾಗ ಬಾಯಿಗೆ ಬೀಗ ಹಾಕಿಕೊಂಡಿದ್ದ ಸಿದ್ದರಾಮಯ್ಯ, ದರ್ಗಾ‌ ತೆರವಿನ ಬಗ್ಗೆ ಎಗರಿ‌ ಬೀಳುತ್ತಿರುವುದೇಕೆ? ಮಾತೆತ್ತಿದರೆ ಸಂವಿಧಾನದ ಬಗ್ಗೆ ಪ್ರವಚನ ಕೊಡುವ ಸಿದ್ದರಾಮಯ್ಯನವರು ಈಗ ನ್ಯಾಯಾಲಯದ ಅದೇಶವನ್ನೇಕೆ ಪಾಲಿಸಲು ಜನರಿಗೆ ಹೇಳುತ್ತಿಲ್ಲ? ಇದೇನಾ ಇವರ ಜಾತ್ಯಾತೀತತೆ? ಸಂವಿಧಾನ ಪ್ರೇಮ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಈ ಸಿದ್ದರಾಮಯ್ಯ ಅಬ್ಬರಿಸಿ ಬೊಬ್ಬಿರಿಯುವುದಕ್ಕೆ ಮತ್ತೊಂದು ಗುಪ್ತ ಕಾರಣವೇ ಹುಬ್ಬಳ್ಳಿ-ಧಾರವಾಡದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬಾರದು ಎಂಬ ದುರುದ್ದೇಶ. ಏಕೆಂದರೆ ಬೊಮ್ಮಾಯಿ ಸರ್ಕಾರ #BeyondBengaluru ಉಪಕ್ರಮದ #GlobalInvestorsMeet ವೇಳೆ ಹುಬ್ಬಳ್ಳಿ ಧಾರವಾಡಕ್ಕೆ ಭರಪೂರ ಹೂಡಿಕೆಗಳನ್ನು ತಂದಿದೆ. ಅದಷ್ಟೇ ಅಲ್ಲದೇ ಇನ್ನೇನು ಬರುವ ಮಾರ್ಚಿನಲ್ಲಿ ಬೆಂಗಳೂರು-ಹುಬ್ಬಳ್ಳಿ ನಡುವೆ #VandeBharatExpress ರೈಲು ಸಂಚರಿಸಲಿದೆ. ಇಷ್ಟೆಲ್ಲ ಅಭಿವೃದ್ಧಿ ಒಂದೇ ಸಲ ಬಿಜೆಪಿ ಸರ್ಕಾರದಿಂದಲೇ ಆಗಿಬಿಟ್ಟರೆ ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿಗಳು ಮತಭಿಕ್ಷೆ ಕೇಳಲು ಹೋಗುವುದು ಹೇಳಿ?’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ʼನಿತ್ಯ ದುಡಿ ಸತ್ಯ ನುಡಿ ಸ್ವಲ್ಪ ಕುಡಿ ಮನೆಗೆ ನಡೆʼ : ಮದ್ಯ ಪ್ರಿಯರ ಸಂಘ ಉದ್ಘಾಟನೆಗೆ ಸಜ್ಜು..!

‘ಕಾಂಗ್ರೆಸ್‌ ಇಷ್ಟು ವರ್ಷ ದೇಶದಲ್ಲಿ ಗೆದ್ದಿದ್ದೇ ಕೋಮುವಾದ ಮತ್ತು ಬಡತನದ ಕಾರಣದಿಂದ. ಈಗ ಬಿಜೆಪಿ ಸರ್ಕಾರದಲ್ಲಿ ಕೋಮುವಾದಕ್ಕೂ ಆಸ್ಪದವಿಲ್ಲ. ಬಡತನ ನಿವಾರಣೆ ಕ್ರಮದ ಜೊತೆಗೆ ಅಭಿವೃದ್ಧಿಯನ್ನೂ ನಮ್ಮ ರಾಜ್ಯ ಕಾಣುತ್ತಿದೆ. ರಾಜ್ಯವೇ ರಾಮರಾಜ್ಯವಾದರೆ, ಕಾಂಗ್ರೆಸ್ ಎಂಬ ರಾವಣರಿಗೆ ಜನಮನ್ನಣೆ ಸಿಗುವುದೇ? ಸಮಸ್ಯೆಯನ್ನು ಜೀವಂತವಾಗಿಡಬೇಕು ಹಾಗೂ ಅದನ್ನು ನಿವಾರಿಸುವುದು ಕಾಂಗ್ರಸ್ಸೇ ಎಂಬ ಭ್ರಮೆ ಹುಟ್ಟಿಸಬೇಕು ಎಂಬುದು ಕಾಂಗ್ರೆಸ್‍ನ ಮೂಲಮಂತ್ರ. ಇದಕ್ಕೆ ಸಂವಿಧಾನ, ನ್ಯಾಯಾಲಯವೇ ಅಡ್ಡಬಂದರೂ ಅದನ್ನು ದಾಟಿ ಹೋಗುತ್ತೇವೆಂಬುದು ಮಾಜಿ ಲಾಯರ್‌ ಸಿದ್ದರಾಮಯ್ಯನವರ ಮಾತಿನಲ್ಲಿ ಗೋಚರಿಸುತ್ತಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News