ಚಾಮರಾಜನಗರ: ಕೃಷಿ ಪಂಪ್ ಸೆಟ್ಟಿನ ಕೇಬಲ್ ಕಳವಿಗೆ ಬಂದು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಘಟನೆ ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಗ್ರಾಮದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಕೊಡಗು ಜಿಲ್ಲೆಯ ಶನಿವಾರ ಸಂತೆಯ ಪ್ರದೀಪ ಮತ್ತು ಸಂದೀಪ ಎಂಬುವರನ್ನು  ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ್ದು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


ಇದನ್ನೂ ಓದಿ- ಹಾಡುಹಾಗಲೇ ವ್ಯಕ್ತಿಗೆ ಚಾಕು ತೋರಿಸಿ 13 ಸಾವಿರ ದೋಚಿದ ಖದೀಮ


ಮುಕ್ಕಡಹಳ್ಳಿ ಗ್ರಾಮದ ನಾಗಣ್ಣ ಎಂಬವರ ಜಮೀನಿನ ಹತ್ತಿರ  ರಾತ್ರಿ 11ಘಂಟೆ ಸುಮಾರಿನಲ್ಲಿ ಕಾರಿನಲ್ಲಿ ಬಂದಿದ್ದ ಖದೀಮರು ಕಾರು ನಿಲ್ಲಿಸಿ ಕೇಬಲ್ ಜಾಗದ ಹತ್ತಿರ ನಿಂತಿದ್ದರು ಎನ್ನಲಾಗಿದೆ. ಅನುಮಾನದಿಂದ ಊರವರು ಗುಂಪು ಗೂಡಿದಾಗ ಇಬ್ಬರೂ ಕಳ್ಳರು ಕಾರನ್ನು ಅಲ್ಲಿಯೇ ಬಿಟ್ಟು ಪೇರಿಕಿತ್ತಿದ್ದರು. ನಡೆದ ವಿಚಾರ ತಿಳಿಸಿ ಕಾರನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದರು. 


ಇದನ್ನೂ ಓದಿ- ಯಾವ ರಾಬಿನ್ ಹುಡ್ ಕಥೆಗಿಂತ ಕಡಿಮೆಯಿಲ್ಲ ಈ ಕಳ್ಳನ ಕಥೆ!


ಇಂದು ಕಾರು ತೆಗೆದು ಕೊಂಡು ಹೋಗಲು ಇಬ್ಬರೂ ಬಂದಾಗ ಇಬ್ಬರನ್ನು ಗ್ರಾಮಸ್ಥರು ಅಟ್ಟಾಡಿಸಿ ಹಿಡಿದು ಮರಕ್ಕೆ ಕಟ್ಟಿ ಬಳಿಕ ಪೊಲೀಸರ ವಶಕ್ಕೆ ನೀಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.