ನವದೆಹಲಿ: ನ್ಯಾಯದೇವ ಎಂದೇ ಖ್ಯಾತ ಶನಿದೇವ (SHANIDEV) ಸೆಪ್ಟೆಂಬರ್ 29.2020 ಕ್ಕೆ ತನ್ನ ನಡೆ ಬದಲಾಯಿಸಲಿದ್ದಾನೆ. ಇದಕ್ಕೂ ಮೊದಲು ಸೆಪ್ಟೆಂಬರ್ 23ರಂದು ರಾಹು-ಕೇತುಗಳು ತನ್ನ ನಡೆಯನ್ನು ಬದಲಾಯಿಸಿದ್ದವು. ಇದೀಗ ಶನಿಯ ಮಾರ್ಗ ಬದಲಾವಣೆಯ ಕಾರಣ ಮತ್ತು ಜೋತಿಷ್ಯಶಾಸ್ತ್ರದ ಪ್ರಕಾರ ಈ ತಿಂಗಳು ಹಲವು ಏರಿಳಿತಗಳು ಸಂಭವಿಸಲಿವೆ. ಇದಾದ ಬಳಿಕ ಮುಂದಿನ ಕೆಲ ತಿಂಗಳು ವಿಭಿನ್ನ ರಾಶಿಗಳ ಜಾತಕಗಳ ಮೇಲೆ ಶನಿಯ ಪ್ರಭಾವ ಇರಲಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಶನಿವಾರ ಶನಿದೇವನನ್ನು ಒಲಿಸಿ ಯಶಸ್ಸು ನಿಮ್ಮದಾಗಿಸಲು ಹೀಗೆ ಪೂಜಿಸಿ


29 ಸೆಪ್ಟೆಂಬರ್ 2020 ರಿಂದ ಶನಿಯ ಚಲನೆ ನೇರವಾಗಿರುತ್ತದೆ. ಇದಕ್ಕೂ ಮೊದಲು, ಮೇ 11 ರಂದು ಶನಿ ವಕ್ರ ನಡೆ ಅನುಸರಿಸಿದ್ದ.  ಶನಿ ಗತಿಯಲ್ಲಿನ ಉಂಟಾಗುತ್ತಿರುವ ಈ ಬದಲಾವಣೆಯು ಅನೇಕ ರಾಶಿಚಕ್ರ ಚಿಹ್ನೆಗಳ ವ್ಯಕ್ತಿಗಳಿಗೆ  ಮುಖ್ಯವೆಂದು ಪರಿಗಣಿಸಲಾಗಿದೆ. ಅಂದರೆ, ಈ ಕ್ರಮ ಬದಲಾವಣೆಯು ವೃತ್ತಿ, ಹಣ ಮತ್ತು ಕುಟುಂಬದ ಸ್ಥಾನಮಾನಕ್ಕೆ ಬಹಳ ಮುಖ್ಯವಾಗಿರುತ್ತದೆ. ಜ್ಯೋತಿಷ್ಯ ತಜ್ಞರ ಪ್ರಕಾರ, ಶನಿಯ ಚಲನೆಯ ಬದಲಾವಣೆಯು ಐದು ರಾಶಿಯ ಜಾತಕಗಳಿಗೆ ಸಮಸ್ಯೆಗಳನ್ನು ತರಲಿದೆ ಎನ್ನಲಾಗಿದೆ.  ಹಾಗಾದರೆ ಬನ್ನಿ ಯಾವ ರಾಶಿಗಳ ಮೇಲೆ ಶನಿಯ ಪ್ರಭಾವವಿರಲಿದೆ ಎಂಬುದನ್ನು ತಿಳಿಯೋಣ.


ಇದನ್ನು ಓದಿ- Navratri 2020: ಈ ಬಾರಿಯ ನವರಾತ್ರಿಯಲ್ಲಿ ನಿರ್ಮಾಣಗೊಳ್ಳಲಿದೆ ಈ ವಿಶಿಷ್ಠ ಸಂಯೋಗ


1- ಸಿಂಹ ರಾಶಿ: ಶನಿಯ ನೇರ ಚಲನೆಯಿಂದಾಗಿ, ಈ ರಾಶಿಚಕ್ರದ ಜನರು ಸಹ ಸಾಕಷ್ಟು ಏರಿಳಿತಗಳನ್ನು ನೋಡಬಹುದು. ಕೆಲವರು ಆರ್ಥಿಕ ಸಮಸ್ಯೆಗಳಿಂದ ಬಳಲಿದರೆ, ಇನ್ನುಳಿದವರು ಶೀತ ಮತ್ತು ಜ್ವರದಂತಹ ಆರೋಗ್ಯ ಸಂಬಂಧಿತ ಸಮಸ್ಯಗಳು ಎದುರಾಗುವ ಸಾಧ್ಯತೆ ಇದೆ. ಪರಸ್ಪರ ಮತಭೇದ ಕೂಡ ಸಂಭವಿಸುವ ಸಾಧ್ಯತೆಗಳಿವೆ.


2- ತುಲಾ ರಾಶಿ: ಶನಿಯ ನೇರ ನಡೆಯ ಕಾರಣ ತುಲಾ ರಾಶಿಯ ಜನರು ಹೆಚ್ಚಿನ ಮುಂಜಾಗ್ರತೆ ವಹಿಸುವ ಅವಶ್ಯಕತೆ ಇದೆ. ಏಕೆಂದರೆ, ಈ ರಾಶಿಯ ಜಾತಕಗಳಲ್ಲಿ ಶನಿ ಎರಡೂವರೆ ಮನೆ ನೇರವಾಗಿ ಚಲಿಸಲಿದ್ದಾನೆ. ಖರ್ಚು ಹೆಚ್ಚಾಗುವ ಸಂಕೇತ ಗೋಚರಿಸುತ್ತಿವೆ. ಕೌಟುಂಬಿಕ ಕಲಹ ಉಂಟಾಗುವ ಸಾಧ್ಯತೆ ಇದೆ.


ಇದನ್ನು ಓದಿ- ಕೇತುವಿನ ರಾಶಿ ಪರಿವರ್ತನೆಯಿಂದ ಕಿರಿಕಿರಿಗೋಳ್ಳಬೇಡಿ, ಈ ಉಪಾಯ ಅನುಸರಿಸಿ


3- ಮಿಥುನ ರಾಶಿ: ಶನಿಯ ಮಾರ್ಗ ಬದಲಾವಣೆ ಈ ರಾಶಿ ಜಾತಕದ ಜನರಿಗೆ ತುಂಬಾ ಚಾಲೆಂಜಿಂಗ್ ಆಗಿರಲಿದೆ. ಇವರು ಈಗಾಗಲೇ ಸಾಡೆಸಾತಿ ಎದುರಿಸುತ್ತಿದ್ದಾರೆ. ಖರ್ಚು ಮತ್ತು ಓಡಾಟ ಹೆಚ್ಚಾಗಲಿದೆ. ಕೌಟುಂಬಿಕ ವಿಷಯಗಳಲ್ಲಿ ಕಲಹ, ವಾದ-ವಿವಾದ, ಕೆಲಸ ಕಾರ್ಯಗಳಲ್ಲಿ ಏರಿಳಿತ ಉಂಟಾಗಲಿವೆ.


4- ಧನು ರಾಶಿ: ಈ ರಾಶಿಯ ಜನರಿಗೂ ಕೂಡ ಸಂಕಷ್ಟದ ಕಾಲ ಎದುರಾಗಲಿದೆ. ಖರ್ಚು ಹೆಚ್ಚಾಗುವ ಕಾರಣ ಮನೆಯಲ್ಲಿ ಒತ್ತಡದಿಂದ ಕೂಡಿದ ವಾತಾವರಣ ಇರಲಿದೆ. ಸೆಪ್ಟೆಂಬರ್ 29ರ ಬಳಿಕ ಒಂದು ವೇಳೆ ನೀವು ಪ್ರವಾಸ ಕೈಗೊಳ್ಳಲು ಬಯಸುತ್ತಿದ್ದರೆ, ಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಹದಗೆಡುವ ಸಾಧ್ಯತೆಯೂ ಕೂಡ ವರ್ತಿಸಲಾಗುತ್ತಿದೆ.


ಇದನ್ನು ಓದಿ-Temple At Home: ಮನೆಯಲ್ಲಿ ದೇವರ ಕೋಣೆಯ ಕುರಿತಾದ ಈ ಸಂಗತಿಗಳ ವಿಶೇಷ ಕಾಳಜಿ ವಹಿಸಿ


5- ಕುಂಭ ರಾಶಿ: ಈ ರಾಶಿಯ ಮೇಲೂ ಕೂಡ ಋಣಾತ್ಮಕ ಪ್ರಭಾವ ಗೋಚರಿಸಲಿದೆ. ವೈವಾಹಿಕ ಜೀವನದಲ್ಲಿ ಒತ್ತಡ, ಕಾಯಿಲೆ ಹಾಗೂ ಖರ್ಚು ಹೆಚ್ಚಾಗಲಿದೆ. ಆರ್ಥಿಕ ಸಂಕಷ್ಟ ಎದುರಾಗಲಿದೆ. ನಿಮ್ಮ ಸುರಕ್ಷತೆಯ ಮೇಲೆ ಹೆಚ್ಚಿನ ಗಮನಹರಿಸಿ.