ಶನಿವಾರ ಶನಿದೇವನನ್ನು ಒಲಿಸಿ ಯಶಸ್ಸು ನಿಮ್ಮದಾಗಿಸಲು ಹೀಗೆ ಪೂಜಿಸಿ

ಶನಿದೇವ ಶೀಘ್ರವೆ ಕೋಪಿಸಿಕೊಳ್ಳುವ ಹಾಗೂ ದಂಡ ನೀಡುವ ದೇವನಾಗಿದ್ದಾನೆ ಎಂಬುದು ಬಹುತೇಕ ಜನರ ನಂಬಿಕೆಯಾಗಿದೆ. ಆದರೆ, ಇದು ಸತ್ಯವಲ್ಲ. ಮಂದಗತಿಯಲ್ಲಿ ಸಾಗುವ ಶನಿದೇವ ನಿಮ್ಮ ಇಷ್ಟಾರ್ಥಗಳನ್ನು ಪೂರ್ಣಗೊಳಿಸುತ್ತಾರೆ. ಆದರೆ, ಅದನ್ನು ಕೂಡ ಅಷ್ಟೇ ಉತ್ತಮ ರೀತಿಯಲ್ಲಿ ಪೂರ್ಣಗೊಳಿಸುತ್ತಾರೆ.

Last Updated : Sep 26, 2020, 12:24 PM IST
  • ಶನಿದೆವನ ಹೊಡೆತ ಬಹುತೇಕರಿಗೆ ತಿಳಿದೇ ಇದೆ.
  • ಮಂದಗತಿಯಲ್ಲಿ ಸಾಗುವ ಕಾರಣ ತಡವಾದರೂ ಕೂಡ ಶನಿದೇವ ಉತ್ತಮ ಫಲಗಳನ್ನು ನೀಡುತ್ತಾನೆ.
  • ಶನಿ ನ್ಯಾಯ ದಯಪಾಲಿಸುವ ಹಾಗೂ ಅದಕ್ಕಾಗಿ ದಂಡ ನೀಡುವ ದೇವನಾಗಿದ್ದಾನೆ.
ಶನಿವಾರ ಶನಿದೇವನನ್ನು ಒಲಿಸಿ ಯಶಸ್ಸು ನಿಮ್ಮದಾಗಿಸಲು ಹೀಗೆ ಪೂಜಿಸಿ title=

ನವದೆಹಲಿ: ಶನಿದೇವನ (SHANIDEV) ಹೊಡೆತ ಬಹುತೇಕರಿಗೆ ತಿಳಿದೇ ಇದೆ. ಇದು ಶನಿದೆವನ ಹೆಸರಿನಿಂದಲೂ ಕೂಡ ಸ್ಪಷ್ಟವಾಗುತ್ತದೆ. ಶನಿದೆವನ ಭಕ್ತಿ ಹಾಗೂ ಪೂಜೆಗಾಗಿ ವಿಶೇಷ ವಾರ ಶನಿವಾರ. ಶನಿದೇವನ ಪ್ರಕೋಪಕ್ಕೆ ಬಹುತೇಕರು ಹೆದರುತ್ತಾರೆ. ಶನಿದೇವ ಶೀಘ್ರವೆ ಕೋಪಿಸಿಕೊಳ್ಳುವ ಹಾಗೂ ದಂಡ ನೀಡುವ ದೇವನಾಗಿದ್ದಾನೆ ಎಂಬುದು ಹಲವು ಜನರ ನಂಬಿಕೆಯಾಗಿದೆ. ಆದರೆ, ಇದು ಸತ್ಯವಲ್ಲ. ಮಂದಗತಿಯಲ್ಲಿ ಸಾಗುವ ಶನಿದೇವ ನಿಮ್ಮ ಇಷ್ಟಾರ್ಥಗಳನ್ನು ಪೂರ್ಣಗೊಳಿಸುತ್ತಾರೆ. ಆದರೆ, ಅದನ್ನು ಕೂಡ ಅಷ್ಟೇ ಉತ್ತಮ ರೀತಿಯಲ್ಲಿ ಪೂರ್ಣಗೊಳಿಸುತ್ತಾರೆ. ಸಾಮಾನ್ಯವಾಗಿ ಶನಿದೆವನನ್ನು ದುಃಖ ನೀಡುವ ದೇವ ಎಂದು ಕರೆಯಲಾಗುತ್ತದೆ. ಆದರೆ, ಶನಿದೇವ ನಿಜಾರ್ಥದಲ್ಲಿ ನ್ಯಾಯ ನೀಡುವ ದೇವನಾಗಿದ್ದಾನೆ. ಅಷ್ಟೇ ಅಲ್ಲ ಇದಕ್ಕಾಗಿ ದಂಡ ವಿಧಾನನ ಪಾಲನೆ ಕೂಡ ಮಾಡುತ್ತಾರೆ ಹಾಗೂ ಇದು ಶನಿದೆವನ ಕರ್ತವ್ಯ ಕೂಡ ಹೌದು.

ಇದನ್ನು ಓದಿ - Navratri 2020: ಈ ಬಾರಿಯ ನವರಾತ್ರಿಯಲ್ಲಿ ನಿರ್ಮಾಣಗೊಳ್ಳಲಿದೆ ಈ ವಿಶಿಷ್ಠ ಸಂಯೋಗ

ಸನಿಯನ್ನು ನೋವು ನೀಡುವ ದೇವ ಎಂದು ಪರಿಗನಿಸಲಾದರೂ ಕೂಡ ನಿಜಾರ್ಥದಲ್ಲಿ ಶನಿ ದೇವ ಕಷ್ಟಗಳನ್ನು ನೀಡುವುದರ ಜೊತೆಗೆ ಆಶೀರ್ವಾದ ಕೂಡ ಮಾಡುತ್ತಾರೆ. ಎಲ್ಲಿ ಯಶಸ್ಸು ನಿಮಗೆ ಮರಿಚಿಕೆಯಾಗಿದೆಯೋ ಅಲ್ಲಿಯೂ ಕೂಡ ನೀವು ಊಹಿಸಿರದ ರೀತಿಯಲ್ಲಿ ಶನಿ ದೇವ ನಿಮಗೆ ಯಶಸ್ಸನ್ನು ದಯಪಾಲಿಸುತ್ತಾರೆ.  

ಇದನ್ನು ಓದಿ- ಕೇತುವಿನ ರಾಶಿ ಪರಿವರ್ತನೆಯಿಂದ ಕಿರಿಕಿರಿಗೋಳ್ಳಬೇಡಿ, ಈ ಉಪಾಯ ಅನುಸರಿಸಿ

ಶನಿದೇವನ ಪೂಜೆ ಹಾಗೂ ವೃತ ಮತ್ತು ವಿಧಿ-ವಿಧಾನ
ಪ್ರತಿ ಶನಿವಾರ ಶ್ರದ್ಧೆಯಿಂದ ಶನಿದೇವನ ಪೂಜೆ ಮಾಡುವುದರಿಂದ ನೀವು ಶನಿದೆವನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬಹುದು.

1. ಸೂರ್ಯ ಉದಯಿಸುವ ಮೊದಲು ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.
2. ಅಷ್ವಸ್ಥ ಮರದ ಬುಡದಲ್ಲಿ ಶುದ್ಧ ನೀರನ್ನು ಅರ್ಪಿಸಿ.
3. ಅಷ್ವಸ್ಥ ಮರದ ಮುಂದೆ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸಿ.
4. ಮೊದಲನೆಯದಾಗಿ ದೇವಾಧಿದೇವ ಶಿವ ಹಾಗೂ ಕೃಷ್ಣನನ್ನು ಪೂಜಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಉಭಯ ದೇವರನ್ನು ಶನಿ ಆರಾಧಿಸುತ್ತಾರೆ.
5. ಈಗ ಶನಿಯ ಈ ಹತ್ತು ಹೆಸರುಗಳನ್ನು ಉಚ್ಛರಿಸಿ- ಕೊಣಾಸ್ಥ, ಕೃಷ್ಣ, ಸೌರಿ, ಯಮ,ಪಿಂಗಲೋ, ರೌದ್ರೋತಕೋ, ಬಭ್ರು, ಮಂದ, ಶನೈಶ್ವರ.
6. ಪೂಜೆಯ ನಂತರ, ಅಷ್ವಸ್ಥ ಮರದ ಕಾಂಡದ ಮೇಲೆ ಹತ್ತಿಯ ದಾರದಿಂದ ಏಳು ಬಾರಿ ಸುತ್ತುತ್ತಾರೆ.
7. ಈಗ ಶನಿ ದೇವ್ ಅವರ ಮಂತ್ರಗಳನ್ನು ಪಠಿಸಿ ಮತ್ತು ದಶರಥ ನಿರ್ಮಿತ ಶನಿ ಸ್ತೋತ್ರವನ್ನು ಓದಿ.
8. ಈ ವೇಳೆ  ಶಮಿ ಮರದ ಪೂಜೆಯನ್ನೂ ಕೂಡ ಶುಭವೆಂದು ಪರಿಗಣಿಸಲಾಗುತ್ತದೆ.
9. ಶನಿ ಮಂತ್ರಗಳ ಸಂಜೆ ಪಠಿಸಬೇಕು.
10. ಶನಿದೇವ್ ಕಪ್ಪು ಬಣ್ಣವನ್ನು ಪ್ರೀತಿಸುತ್ತಾನೆ, ಆದ್ದರಿಂದ ಸಾಸಿವೆ ಎಣ್ಣೆ ಮತ್ತು ಕಪ್ಪು ಎಳ್ಳು ಇತ್ಯಾದಿಗಳನ್ನು ಈ ದಿನ ಅರ್ಪಿಸಬೇಕು.

ಇದನ್ನು ಓದಿ- Success Mantra: ಪರೀಕ್ಷೆ ಹಾಗೂ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸಲು ಇಲ್ಲಿವೆ ಕೆಲ ಅದ್ಭುತ ಉಪಾಯಗಳು

ಪೂಜೆ ಸಲ್ಲಿಸುವಾಗ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ
ಪ್ರತಿಯೊಂದು ದೇವರ ಪೂಜೆ ಸಲ್ಲಿಸುವಾಗ ಕೆಲ ನೀತಿ ನಿಯಮಗಳಿವೆ. ಶನಿದೇವರ ಪೂಜೆ ಸಲ್ಲಿಸುವಾಗಲೂ ಕೂಡ ಕೆಲ ವಿಶೇಷ ಸಂಗತಿಗಳನ್ನು ನೆನಪಿನಲ್ಲಿಡಬೇಕು 

1. ಶನಿದೇವನ ಪೂಜೆಯನ್ನು ಅವರ ವಿಗ್ರಹದ ಮುಂದೆ ಮಾಡಬಾರದು. ಶಿಲಾ ರೂಪದಲ್ಲಿ ಶನಿಯನ್ನು ಪ್ರತಿಷ್ಟಾಪಿಸಿದ ಜಾಗದಲ್ಲಿ ಶನಿದೆವನನ್ನು ಆರಾಧಿಸಬೇಕು.
2. ಶನಿದೇವ್ ಹೆಸರಿನಲ್ಲಿ ದೀಪವನ್ನು ಬೆಳಗಿಸುವುದು ಉತ್ತಮ ಆದರೆ ಎಣ್ಣೆಯನ್ನು ಸುರಿಯುವುದರ ಮೂಲಕ ಅದನ್ನು ವ್ಯರ್ಥ ಮಾಡಬೇಡಿ.
3. ಈ ದಿನ, ಬಡವನಿಗೆ ಒಂದು ಹೊತ್ತಿನ ಊಟ ಹಾಕಿ.
4. ಈ ದಿನ ಯಾವುದೇ ರೀತಿಯ ತಾಮಸಿಕ ಆಹಾರ ಸೇವನೆ ಬೇಡ
5. ನಿಮ್ಮ ನಡವಳಿಕೆಯನ್ನು ಶುದ್ಧೀಕರಿಸಿ ಮತ್ತು ಎಲ್ಲರ ಜೊತೆಗೆ ಚೆನ್ನಾಗಿ ವರ್ತಿಸಿ.

ಇದನ್ನು ಓದಿ - ಕಾಯಿಲೆಗಳ ಜೊತೆಗೆ ವಾಸ್ತುದೋಷದಿಂದಲೂ ಕೂಡ ಮುಕ್ತಿ ನೀಡುತ್ತವೆ ಈ ಸಸ್ಯಗಳು

ಶನಿದೆವನ ಮಂತ್ರ
ಶನಿದೇವನಿಗೆ ಪೂಜೆ ಸಲ್ಲಿಸುವಾಗ ಯಾವ ಮಂತ್ರಗಳನ್ನು ಪಠಿಸಬೇಕು ಮತ್ತು ಯಾವ ಮಂತ್ರದ ಪಠನೆ ಶುಭಕರ ಎಂದು ಪರಿಗಣಿಸಲಾಗುತ್ತದೆ?

ಶನಿ ಗಾಯತ್ರಿ ಮಂತ್ರ 
ॐ  ಶನೈಶ್ವರಾಯ್ ವಿದ್ಮಹೇ ಛಾಯಾಪುತ್ರಾಯ ಧೀಮಹಿ.

ಶನಿ ಬೀಜ ಮಂತ್ರ 
ॐ ಪ್ರಾಂ ಪ್ರಿಂ ಪ್ರಾಮ್ ಸಃ ಶನಿಶ್ವರಾಯ್ ನಮಃ

Trending News