ವರ್ಷದ ಮೊದಲ ಚಂದ್ರಗ್ರಹಣ, ಈ ರಾಶಿಯ ಜನರು ಎಚ್ಚರಿಕೆ ವಹಿಸಿ
ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಚಂದ್ರಗ್ರಹಣವನ್ನು ಸೂತಕ ಎಂದು ಹೇಳಲಾಗಿಲ್ಲ. ಇದಕ್ಕೂ ಮೊದಲು ಫೆಬ್ರುವರಿ 11, 2017ಕ್ಕೆ ಇಂತಹ ಚಂದ್ರಗ್ರಹಣ ಸಂಭವಿಸಿತ್ತು.
ನವದೆಹಲಿ: ಇಂದು ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10.37ಕ್ಕೆ ಪ್ರಾರಂಭವಾಗುವ ಈ ಗ್ರಹಣ ನಾಳೆ ಬೆಳಗಿನ ಜಾವ 2.42ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗೆ ಒಟ್ಟು 4 ಗಂಟೆಗೂ ಅಧಿಕ ಸಮಯ ಈ ಗ್ರಹಣದ ಕಾಲಾವಧಿ ಇದೆ.
ಭಾರತದ ಜೊತೆಗೆ ಅಮೇರಿಕಾ ಕೆನಡಾ, ಬ್ರೆಜಿಲ್, ಅರ್ಜೆಂಟೀನಗಳಂತಹ ದೇಶಗಳಲ್ಲಿ ಈ ಗ್ರಹಣ ಗೋಚರಿಸಲಿದೆ. 2020ರಲ್ಲಿ ಒಟ್ಟು ನಾಲ್ಕು ಚಂದ್ರಗ್ರಹಣಗಳು ಹಾಗೂ ಎರಡು ಸೂರ್ಯಗ್ರಹಣಗಳು ಸಂಭವಿಸಲಿವೆ. ಅರೆನೆರಳಿನ ಈ ಚಂದ್ರಗ್ರಹಣದಲ್ಲಿ ಸೂರ್ಯ, ಚಂದ್ರ ಹಾಗೂ ಭೂಮಿ ಒಂದೇ ರೇಖೆಯಲ್ಲಿ ಬರುವುದಿಲ್ಲ. ಆದರೂ ಕೂಡ ಭೂಮಿಯ ಸ್ವಲ್ಪ ಪ್ರಮಾಣದ ನೆರಳು ಚಂದ್ರನ ಮೇಲೆ ಬೀಳಲಿದ್ದು, ಚಂದ್ರ ಸ್ವಲ್ಪ ಮಸುಕಾಗಿ ಕಾಣಿಸಿಕೊಳ್ಳಲಿದ್ದಾನೆ. ಈ ವೇಳೆ ಚಂದ್ರನ ಆಕಾರ ಮತ್ತು ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಗೋಚರಿಸುವುದಿಲ್ಲ. ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣ ಸೂತಕದ ಛಾಯೆ ಹೊಂದಿಲ್ಲ. ಇದಕ್ಕೂ ಮೊದಲು ಫೆಬ್ರುವರಿ 11, 2017ಕ್ಕೆ ಇಂತಹ ಚಂದ್ರಗ್ರಹಣ ಸಂಭವಿಸಿತ್ತು.
ಈ ವರ್ಷದ ಉಳಿದ ಚಂದ್ರಗ್ರಹಣಗಳು ಜೂನ್ 5, ಜುಲೈ 5 ಹಾಗೂ ನವೆಂಬರ್ 30ರಂದು ಸಂಭವಿಸಲಿವೆ. ಈ ಗ್ರಹಣದ ವೇಳೆ ಚಂದ್ರ ಮಿಥುನರಾಶಿಯಲ್ಲಿ ಇರಲಿದ್ದಾನೆ. ಹೀಗಾಗಿ ಮಿಥುನ ರಾಶಿಯ ಜಾತಕ ಹೊಂದಿದವರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯತೆ ಇದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣ ಯಾವ ರಾಶಿಯಲ್ಲಿ ಚಂದ್ರವಿರುತ್ತಾನೋ ಆ ರಾಶಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎನ್ನಲಾಗಿದೆ.
ವೈಜ್ಞಾನಿಕವಾಗಿ ವಿಶ್ಲೇಷಿಸುವುದಾದರೆ ಈ ಗ್ರಹಣವನ್ನು ಸಂಪೂರ್ಣವಾಗಿ ಚಂದ್ರಗ್ರಹಣವೆಂದು ಹೇಳಲಾಗುವುದಿಲ್ಲ. ಯಾಕೆಂದರೆ ಇದು ಒಂದು ಅರೆನೆರಳಿನ ಚಂದ್ರಗ್ರಹಣವಾಗಿದೆ. ಇಂತಹ ಗ್ರಹಣಗಳಲ್ಲಿ ಚಂದ್ರನ ಸ್ಥಿತಿಯಲ್ಲಿ ಯಾವುದೇ ವಿಶೇಷ ಬದಲಾವಣೆ ಆಗುವುದಿಲ್ಲ. ಆದರೂ ಸಹಿತ ಚಂದ್ರನ ಒಂದು ವಿಶಿಷ್ಟ ಸ್ಥಿತಿ ಗೋಚರಿಸಲಿದೆ. ವರ್ಷ 2020ರಲ್ಲಿ ನಡೆಯುವ ಮೊದಲ ಚಂದ್ರಗ್ರಹಣ ಎನ್ನುವುದೇ ಈ ಚಂದ್ರಗ್ರಹಣದ ವಿಶೇಷತೆ.
ಯಾವ ರಾಶಿಯ ಮೇಲೆ ಏನು ಪ್ರಭಾವ
ಮೇಷ ರಾಶಿ: ಆಪ್ತರು, ನೆರೆಹೊರೆಯ ಜನರ ಜೊತೆ ಮಾತನಾಡುವಾಗ ತಾಳ್ಮೆ ಮತ್ತು ಎಚ್ಚರಿಕೆ ವಹಿಸಿ
ವೃಷಭ ರಾಶಿ: ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಸಾಧ್ಯತೆ, ಸಂಬಂಧ ನಿಭಾಯಿಸುವಲ್ಲಿ ತಾಳ್ಮೆ ವಹಿಸಿ, ಕೋಪದಿಂದ ದೂರ ಇರಿ.
ಮಿಥುನ ರಾಶಿ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಗುರಿ ಸಾಧಿಸಲು ಯೋಜನೆಗಳನ್ನು ರೂಪಿಸಿ, ನಿಮಗೆ ಈ ಗ್ರಹಣ ಸಕಾರಾತ್ಮಕವಾಗಿದೆ.
ಕರ್ಕ ರಾಶಿ: ಆಧ್ಯಾತ್ಮದತ್ತ ನಿಮ್ಮ ಒಲುವು ಹೆಚ್ಚಾಗುವುದು, ಉತ್ತಮ ಭವಿಷ್ಯ ರೂಪಿಸಲು ಯೋಜನೆಯಲ್ಲಿ ತೊಡಗಿ.
ಸಿಂಹ ರಾಶಿ: ಆಪ್ತರು, ಬಂಧು ಮಿತ್ರರ ಜೊತೆ ವಾದ-ವಿವಾದದಿಂದ ದೂರ ಇರಿ. ಹೆಚ್ಚಿನ ಜ್ಞಾನ ಸಂಪಾದನೆಯತ್ತ ಒಲವು ತೋರಿ.
ಕನ್ಯಾ ರಾಶಿ: ಕಚೇರಿಯ ಕೆಲಸಗಳಲ್ಲಿ ವೃತ್ತಿಪರರಾಗಿ ವರ್ತಿಸಿ, ವರಿಷ್ಠ ಅಧಿಕಾರಿಗಳ ಜೊತೆ ವಾದ-ವಿವಾದ ಬೇಡ, ಮಾತನಾಡುವಾಗ ದುಡುಕಬೇಡಿ. ತಾಳ್ಮೆ ಅಗತ್ಯ.
ತುಲಾ ರಾಶಿ: ಆಧ್ಯಾತ್ಮದ ಬಗ್ಗೆ ನಿಮ್ಮ ನಿಲುವಿನಲ್ಲಿ ಬದಲಾವಣೆ, ಪ್ರಯತ್ನದಿಂದ ಕೆಲಸ ಕಾರ್ಯಗಳಲ್ಲಿ ಸಿದ್ಧಿ ಲಭಿಸಲಿದೆ.
ವೃಶ್ಚಿಕ ರಾಶಿ: ಆತ್ಮವಿಶ್ವಾಸದಿಂದ ಸಕಲ ಕಾರ್ಯಸಿದ್ಧಿಯಾಗಲಿದೆ. ಭಾವನೆಗಳ ಮೇಲೆ ನಿಯಂತ್ರಣ ಅಗತ್ಯ.
ಧನು ರಾಶಿ: ಸಂಗಾತಿಯ ಜೊತೆ ತಾಳ್ಮೆಯಿಂದ ವರ್ತಿಸಿ. ಉತ್ತಮ ಭವಿಷ್ಯಕ್ಕಾಗಿ ಆಪ್ತರು ಮತ್ತು ಗುರುಹಿರಿಯರಿಂದ ಸಲಹೆ ಪಡೆಯಿರಿ.
ಮಕರ ರಾಶಿ: ಹಳೆ ಸಮಸ್ಯೆಗಳು ನಿವಾರಣೆಯಾಗಲಿದೆ. ವೈವಾಹಿಕ ಜೀವನದ ಬಗ್ಗೆ ಕಾಳಜಿ ವಹಿಸಿ, ಎಂತಹ ಸಂದರ್ಭ ಬಂದರು ಮೌನದಿಂದ ಅವುಗಳನ್ನು ನಿಭಾಯಿಸಿ.
ಕುಂಭ ರಾಶಿ: ಏನಾದರೂ ಕ್ರಿಯೇಟಿವ್ ಮಾಡಲು ಯೋಚಿಸಿ. ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಬೇಡ.
ಮೀನ ರಾಶಿ: ಮಾನಸಿಕ ಆರೋಗ್ಯದಲ್ಲಿ ಸುಧಾರಣೆ, ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನೂರು ಬಾರಿ ಯೋಚಿಸಿ.