ನವದೆಹಲಿ: ತಿರುಪತಿ ತಿಮ್ಮಪ್ಪ (Tirupati Timmappa)ನ ಪ್ರಸಾದ ಲಡ್ಡು ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ COVID-19  ಲಾಕ್‌ಡೌನ್‌ (Lockdown) ಕಾರಣದಿಂದಾಗಿ ಸದ್ಯಕ್ಕೆ ತಿರುಪತಿಗೆ ಹೋಗಲು ಸಾಧ್ಯವಾಗುವುದಿಲ್ಲ. ಹೋದರೂ ಮೊದಲೇ ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಕಾಯಬೇಕಿತ್ತು. ಈಗ ಸಾಮಾಜಿಕ ಅಂತರ ಕಾಯ್ದುಕೊಂಡು ತಿಮ್ಮಪ್ಪನ ದರ್ಶನ ಮಾಡುವುದು ಇನ್ನೂ ಕಷ್ಟ. ಅದಕ್ಕಾಗಿ ಟಿಟಿಡಿ ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಆಂಧ್ರಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೇ ಸಬ್ಸಿಡಿ ದರದಲ್ಲಿ ತಿಮ್ಮಪ್ಪನ ಪ್ರಸಾದ ಲಡ್ಡು ನೀಡಲು ಮುಂದಾಗಿದೆ‌.


COMMERCIAL BREAK
SCROLL TO CONTINUE READING

ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಆಂಧ್ರಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೇ ಸಬ್ಸಿಡಿ ದರದಲ್ಲಿ ತಿಮ್ಮಪ್ಪನ ಪ್ರಸಾದ ಲಡ್ಡು ನೀಡಲು ಕ್ರಮ ಕೈಗೊಳ್ಳುವುದಾಗಿ ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.


ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 20ರಿಂದ ತಿಮ್ಮಪ್ಪನ ಬೆಟ್ಟ ಏರುವುದನ್ನು ಮತ್ತು ವೆಂಕಟೇಶ್ವರ ದರ್ಶನ ಮಾಡುವುದನ್ನು ನಿರ್ಬಂಧಿಸಲಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಆಂಧ್ರಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಲಡ್ಡು ನೀಡಲು ಕ್ರಮ ಕೈಗೊಳ್ಳಲಾಗಿದೆ. ಆಯಾ ಸ್ಥಳಗಳಿಗೆ ತಿರುಪತಿ ಲಡ್ಡು (Tirupati Laddu) ಆಗಮಿಸುವ ದಿನಾಂಕವನ್ನು ಮೂರು ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.


ಉಚಿತ ವಿತರಣೆಗಾಗಿ ಹೆಚ್ಚಿನ ಲಾಡುಗಳನ್ನು ಖರೀದಿಸಲು ಇಚ್ಛಿಸಜವ ಭಕ್ತರು 9849575952 ದೂರವಾಣಿ ಸಂಖ್ಯೆ ಮೂಲಕ ಉಪ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.


ಕೋವಿಡ್ -19 (Covid-19)  ಲಾಕ್‌ಡೌನ್ ಅವಧಿಯಲ್ಲಿ ಭಕ್ತರಿಗೆ ಉಡುಗೊರೆಯಾಗಿ ಟೋಕನ್ ರೂಪದಲ್ಲಿ ತಲಾ 50 ರೂ.ಗಳ ಬೆಲೆಯ ಲಾಡುವನ್ನು 25 ರೂ.ಗಳ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.


ಕುತೂಹಲಕಾರಿ ಸಂಗತಿಯೆಂದರೆ, ಭಕ್ತರ ಇ-ಹುಂಡಿ ನಗದು ಕೊಡುಗೆಗಳು ಈ ವರ್ಷದ ಏಪ್ರಿಲ್‌ನಲ್ಲಿ ದಾಖಲೆಯ ಆದಾಯ 1.97 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ತಿಂಗಳಲ್ಲಿ 1.79 ಕೋಟಿ ರೂ.ಗಳಾಗಿದ್ದು, 18 ಲಕ್ಷ ರೂ.ಗಳ ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.


ಟಿಟಿಡಿ (TTD) ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಟಿಟಿಡಿ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ರೆಡ್ಡಿ ನಿರಾಕರಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸಂಬಳ ನೀಡಲಾಗುತ್ತಿದೆ ಮೇ ಮತ್ತು ಜೂನ್‌ಗೂ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.