ಭಕ್ತರಿಗಾಗಿ ಮುಂದಿನ ವಾರದಿಂದ ತೆರೆಯಲಿವೆ ಶಬರಿಮಲೆ ಮತ್ತು ತಿರುಮಲ ದೇವಾಲಯಗಳು
ಈ ಸಂದರ್ಭದಲ್ಲಿ ದೇವಾಲಯಕ್ಕೆ ವೃದ್ಧರು ಮತ್ತು ಮಕ್ಕಳನ್ನು ಪ್ರವೇಶಿಸಲು ಅನುಮತಿಸುವುದಿಲ್ಲ ಮತ್ತು ದೇವಾಲಯಗಳಿಗೆ ಭೇಟಿ ನೀಡಲು ಭಕ್ತರ ಮಿತಿಯನ್ನು ನಿಗದಿಪಡಿಸಲಾಗುತ್ತದೆ.
ತಿರುಪತಿ / ತಿರುವನಂತಪುರಂ: ಕೇರಳದ ಶಬರಿಮಲೈ (Sabarimala) ಅಯ್ಯಪ್ಪ ದೇವಸ್ಥಾನ ಮತ್ತು ಭಾರತದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ತಿರುಪತಿ (Tirupati) ತಿರುಮಲ ವೆಂಕಟೇಶ್ವರ ದೇವಸ್ಥಾನದ ದ್ವಾರಗಳನ್ನು ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಮುಂದಿನ ವಾರ ಭಕ್ತರಿಗಾಗಿ ತೆರೆಯಲಾಗುವುದು. ಆದಾಗ್ಯೂ ಈ ಸಮಯದಲ್ಲಿ ಕೆಲವು ನಿರ್ಬಂಧಗಳು ಜಾರಿಯಲ್ಲಿರುತ್ತವೆ.
ಇನ್ನು ಮುಂದೆ ಬೆಂಗಳೂರು, ಚೆನ್ನೈ, ಹೈದರಾಬಾದಿನಲ್ಲೇ ಸಿಗುತ್ತೆ ತಿರುಪತಿ ಲಡ್ಡು, ಅದೂ ಸಬ್ಸಿಡಿ ದರದಲ್ಲಿ...
ಈ ಸಂದರ್ಭದಲ್ಲಿ ದೇವಾಲಯಕ್ಕೆ ವೃದ್ಧರು ಮತ್ತು ಮಕ್ಕಳನ್ನು ಪ್ರವೇಶಿಸಲು ಅನುಮತಿಸುವುದಿಲ್ಲ ಮತ್ತು ದೇವಾಲಯಗಳಿಗೆ ಭೇಟಿ ನೀಡಲು ಭಕ್ತರ ಮಿತಿಯನ್ನು ನಿಗದಿಪಡಿಸಲಾಗುತ್ತದೆ.
ತಿರುಪತಿ ತಿರುಮಲ ದೇವಾಲಯದ ಆಡಳಿತ ಮಂಡಳಿ ಟಿಟಿಡಿ (TTD) 80 ದಿನಗಳ ಅಂತರದ ನಂತರ ಜೂನ್ 11 ರಂದು ದೇವಾಲಯವು ಭಕ್ತರಿಗೆ ಬಾಗಿಲು ತೆರೆಯಲಿದೆ ಎಂದು ಮಾಹಿತಿ ನೀಡಿದ್ದು ತಿದಿನ 6,000 ಭಕ್ತರಿಗೆ ಮಾತ್ರ ಭೇಟಿ ನೀಡಲು ಅವಕಾಶವಿರುತ್ತದೆ. ಈ ಸಮಯದಲ್ಲಿ, ಆರು ಅಡಿಗಳಷ್ಟು ದೂರವನ್ನು ಅನುಸರಿಸಲಾಗುವುದು ಮತ್ತು ಭಕ್ತರಿಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದೆ.
ವೆಂಕಟೇಶ್ವರ ದೇವಾಲಯದ ಆಸ್ತಿ ಹರಾಜಿಗೆ ತಡೆಒಡ್ಡಿದ ಆಂಧ್ರ ಸರ್ಕಾರ
ಇನ್ನು ಕೇರಳ (Kerala)ದಲ್ಲಿ ಶಬರಿಮಲೈ ಅಯ್ಯಪ್ಪನ ದೇವಾಲಯವನ್ನು ಇದೇ ತಿಂಗಳ 9 ರಿಂದ ತೆರೆಯಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತಿಳಿಸಿದ್ದಾರೆ.