Teacher`s Day Special: Success Mantra: ಇಡೀ ವಿಶ್ವವೇ ಒಂದು ಶಾಲೆ` ಇಲ್ಲಿವೆ ಕೆಲ ಪ್ರೇರಣೆ ನೀಡುವ Quotes
ಈ ಮಾಜಿ ರಾಷ್ಟ್ರಪತಿ ಇಡೀ ವಿಶ್ವವೇ ಒಂದು ಶಾಲೆ, ಇಲ್ಲಿ ನಿತ್ಯ ಏನನ್ನಾದರೂ ಕಲಿಯುವ ಅವಕಾಶ ಸಿಗುತ್ತದೆ` ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಶಿಕ್ಷಣ ತಜ್ಞ.
ನವದೆಹಲಿ: ಸೆಪ್ಟೆಂಬರ್ 5 ರಂದು ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞ ಡಾ.ಸರ್ವಪಲ್ಲಿ ರಾಧಾ ಕೃಷ್ಣನ್ ಅವರ ಜಯಂತಿ . ಅವರ ಜನ್ಮದಿನವನ್ನು 'ಶಿಕ್ಷಕರ ದಿನ' (Teacher's Day) ಎಂದು ಆಚರಿಸಲಾಗುತ್ತದೆ. ಈ ಮಾಜಿ ರಾಷ್ಟ್ರಪತಿ ಇಡೀ ವಿಶ್ವವೇ ಒಂದು ಶಾಲೆ, ಇಲ್ಲಿ ನಿತ್ಯ ಏನನ್ನಾದರೂ ಕಲಿಯುವ ಅವಕಾಶ ಸಿಗುತ್ತದೆ' ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಶಿಕ್ಷಣ ತಜ್ಞ.
- ಕಲಿಯಲು ಪ್ರೇರೇಪಣೆ ನೀಡದೆ ತನ್ನ ಶಿಷ್ಯರಿಗೆ ಪಾಠ ಹೇಳಿ ಕೊಡುವ ಶಿಕ್ಷಕನ ಕೆಲಸ ಅಂದರೆ ತಣ್ಣನೆಯ ಕಬ್ಬಿಣದ ಮೇಲೆ ಏಟು ಕೊಟ್ಟಂತೆ- ಹೆರೆಸ್ ಮೆನ್
- ಓರ್ವ ವಿದ್ಯಾರ್ಥಿಯಲ್ಲಿನ ಸೃಜನಶೀಲ ಮನೋಭಾವ ಹಾಗೂ ಜ್ಞಾನವನ್ನು ಬೆಳೆಸುವುದು ಶಿಕ್ಷಕನ ಪ್ರಮುಖ ಗುಣವಾಗಿದೆ-ಅಲ್ಬರ್ಟ್ ಐನ್ಸ್ಟೀನ್
- ತಂತ್ರಜ್ಞಾನ ಕೇವಲ ಒಂದು ಸಾಧನ. ಆದರೆ, ಮಕ್ಕಳನ್ನು ಪ್ರೇರೇಪಿಸುವುದು ಓರ್ವ ಶಿಕ್ಷಕನ ಪ್ರಮುಖ ಕರ್ತವ್ಯ- ಬಿಲ್ ಗೇಟ್ಸ್
- ಶುದ್ಧ ಮನಸ್ಸುಳ್ಳ ವ್ಯಕ್ತಿ ಮಾತ್ರ ಜಾವನದ ಆಧ್ಯಾತ್ಮಿಕ ಅರ್ಥವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ತನ್ನೊಂದಿಗೆ ತಾನು ಪ್ರಾಮಾಣಿಕತೆಯಿಂದ ಇರುವುದು ಆಧ್ಯಾತ್ಮಿಕ ಸಮಗ್ರತೆಗೆ ಕಡ್ಡಾಯವಾಗಿದೆ- ಸವಪಲ್ಲಿ ರಾಧಾಕೃಷ್ಣನ್ .
- ಬಲವಂತವಾಗಿ ವಿಧ್ಯಾರ್ಥಿಗಳಲ್ಲಿ ಜ್ಞಾನ ತುಮ್ಬುವವ ನಿಜವಾದ ಶಿಕ್ಷಕನಲ್ಲ. ಜೀವನದಲ್ಲಿ ಎದುರಾಗುವ ಕಠಿಣ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವವನು ನಿಜವಾದ ಶಿಕ್ಷಕ - ಸರ್ವಪಲ್ಲಿ ರಾಧಾಕೃಷ್ಣನ್.
- ವೈಚಾರಿಕ ಸ್ವಾತಂತ್ರ್ಯ ಸಿಗದ ಹೊರತು ಯಾವುದೇ ಸ್ವಾತಂತ್ರ್ಯ ಸತ್ಯ ಅಥವಾ ಪರಿಪೂರ್ಣ ಅಲ್ಲ. ಯಾವುದೇ ಧಾರ್ಮಿಕ ನಂಬಿಕೆ ಅಥವಾ ರಾಜನೈತಿಕ ಸಿದ್ಧಾಂತ ಸತ್ಯ ಅನ್ವೇಷಣೆಯಲ್ಲಿ ಅಡೆತಡೆ ಉಂಟುಮಾಡಬಾರದು-ಸರ್ವಪಲ್ಲಿ ರಾಧಾಕೃಷ್ಣನ್