ನವದೆಹಲಿ: ಆಧುನಿಕ ಜೀವನಶೈಲಿಯಲ್ಲಿ, ನಾವು ತಿನ್ನುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದಿನ ಜನರು ಸುಖಾಸನದಲ್ಲಿ ನೆಲದ ಮೇಲೆ ಕುಳಿತು ಆಹಾರವನ್ನು ತಿನ್ನುತ್ತಿದ್ದರು. ಆಹಾರವನ್ನು ತಿನ್ನುವಾಗ ಅವರು ಯಾರೊಂದಿಗೂ ಮಾತನಾಡಲಿಲ್ಲ. ಜ್ಯೋತಿಷ್ಯ (Astrology)ದೃಷ್ಟಿಕೋನದಿಂದ, ನಮ್ಮ ಆಹಾರ ಪದ್ಧತಿ ನಮ್ಮ ಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಪಂಡೀತರಿಂದ ನಮ್ಮ ದೈನಂದಿನ ಅಭ್ಯಾಸ ಮತ್ತು ಅವುಗಳ ಪರಿಣಾಮಗಳನ್ನು ತಿಳಿಯೋಣ ಬನ್ನಿ,


COMMERCIAL BREAK
SCROLL TO CONTINUE READING

Also Read- ರಾಶಿಗಳ ಅನುಸಾರ ನಿಮ್ಮ ದುರ್ಬಲತೆ ಏನು? ತಿಳಿದುಕೊಳ್ಳಿ... ಲಾಭ ನಿಮ್ಮದಾಗಲಿದೆ


- ನಿಮ್ಮ ಹಾಸಿಗೆಯ ಮೇಲೆ ಕುಳಿತು ಎಂದಿಗೂ ಕೂಡ ಊಟ ಅಥವಾ ಆಹಾರ ಸೇವಿಸಬೇಡಿ. ಇದರಿಂದ ಅನ್ನಕ್ಕೆ ಅವಮಾನ ಎಸಗಿದಂತಾಗುತ್ತದೆ ಮತ್ತು ಇದು ರಾಹುವಿನ ಅಸಮಾಧಾನಕ್ಕೆ ಕಾರಣವಾಗುತ್ತದೆ.
- ತಿನ್ನುವಾಗ ಟಿವಿ ನೋಡುವುದು, ಪುಸ್ತಕಗಳನ್ನು ಓದುವುದು ಒಳ್ಳೆಯದಲ್ಲ. ಈ ಕಾರಣದಿಂದಾಗಿ, ಆಹಾರ ಕಣಗಳು ನಮ್ಮ ಉಸಿರಾಟದ ಪ್ರದೇಶದಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.
- ಆಹಾರವನ್ನು ತಿನ್ನುವ ಮೊದಲು ಕೈ ಕಾಲುಗಳನ್ನು ತೊಳೆಯಬೇಕು. ಇದು ಹಾನಿಕಾರಕ ಬ್ಯಾಕ್ಟೀರಿಯಾಗಳು ಆಹಾರದ ಮೂಲಕ ನಮ್ಮ ಹೊಟ್ಟೆಗೆ ತಲುಪುವುದನ್ನು ತಪ್ಪಿಸುತ್ತದೆ. ಆಹಾರವನ್ನು ಬೇಗ ಬೆಗ್ಗ ಅಗಿಯಬೇಡಿ. ಊಟವಾದ  ಕೂಡಲೇ ನೀರು ಕುಡಿಯಬೇಡಿ. ಊಟವಾದ 40 ನಿಮಿಷಗಳ ನಂತರ ನೀವು ನೀರನ್ನು ಕುಡಿಯಬಹುದು. ಯಾವಾಗಲು ಸುಖಾಸನದಲ್ಲಿಯೇ ಕುಳಿತು ಊಟ ಮಾಡಬೇಕು.


Also Read- ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಸಾಮರ್ಥ್ಯ ತಿಳಿದು ಜೀವನದಲ್ಲಿ ಮುಂದಕ್ಕೆ ಸಾಗಿ


- ಊಟವಾದ ಬಳಿಕ ಕೆಲವರು ತಮ್ಮ ತಟ್ಟೆಯಲ್ಲಿಯೇ ಕೈತೊಳೆಯುತ್ತಾರೆ. ಇದು ಅನ್ನಪೂರ್ಣೆಯ ಅಪಮಾನ ಎಂಬುದನ್ನು ಮರೆಯದಿರಿ. ಇದರಿಂದ ಚಂದ್ರ ಹಾಗೂ ಶುಕ್ರ ಕೂಡ ಅಪ್ರಸನ್ನರಾಗುತ್ತಾರೆ. ಇಂತಹ ಮನೆಯಿಂದ ಏಳಿಗೆ ಹೊರಟುಹೋಗುತ್ತದೆ.
- ತಟ್ಟೆಯಲ್ಲಿ ಎಂಜಲು ಬಿಟ್ಟು ಏಳುವುದು ಅನ್ನಪೂರ್ಣೆಯ ಅವಮಾನ. ಇದರಿಂದ ಅನ್ನಪೂರ್ಣೆಯ ಶಾಪ ತಟ್ಟುತ್ತದೆ.
-ಊಟ ಮಾಡುವಾಗ ನಮ್ಮ ಮುಖ ಯಾವಾಗಲು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು.
- ಊಟಕ್ಕೂ ಮೊದಲು ಅಥವಾ ಊಟವಾದ ಬಳಿಕ ಲಘುಶಂಕೆಗೆ ಹೋಗಬೇಕು.
(ಈ ಮಾಹಿತಿ ಧಾರ್ಮಿಕ ನಂಬಿಕೆ ಹಾಗೂ ಲೌಕಿಕ ಮಾನ್ಯತೆಗಳನ್ನು ಆಧಾರವಾಗಿಟ್ಟುಕೊಂಡು ಬರೆಯಲಾಗಿದೆ. ಇದನ್ನು ಸಾಮಾನ್ಯ ಓದುಗರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತಪಡಿಸಲಾಗಿದೆ)


Also Read- ಜಾತಕದಲ್ಲಿ ಗ್ರಹಗಳ ಸ್ಥಿತಿಗತಿಯನ್ನು ಸರಿಯಾಗಿಡಲು ಇಲ್ಲಿವೆ ಕೆಲ ಸರಳ ಉಪಾಯಗಳು