ಬೆಂಗಳೂರು : ದೀಪಾವಳಿ ಹಬ್ಬದಂದು ಲಕ್ಷ್ಮಿ ಪೂಜೆ ನಡೆಯುತ್ತದೆ. ಅಲ್ಲದೆ ದೀಪಾವಳಿ ಸಮಯದಲ್ಲಿ ಲಕ್ಷ್ಮೀ ದೇವಿಯ ಫೋಟೋವನ್ನು ಮನೆಗೆ ತರುವ ಸಂಪ್ರದಾಯವೂ ಇದೆ. ಆದರೆ ದೀಪಾವಳಿ ದಿನ ಈ ಕೆಳಗಿನ ಫೋಟೋಗಳನ್ನು ಮನೆಗೆ ತಂದರೂ ಹಣದ ಸುರಿಮಳೆಯಾಗುತ್ತದೆ ಎನ್ನುತ್ತದೆ ನಂಬಿಕೆ.   


COMMERCIAL BREAK
SCROLL TO CONTINUE READING

ದೀಪಾವಳಿ ಹಬ್ಬವನ್ನು ಈ ವರ್ಷ ನವೆಂಬರ್ 12 ರಂದು ಆಚರಿಸಲಾಗುತ್ತದೆ. ದೀಪಾವಳಿಯ ದಿನವನ್ನು  ಲಕ್ಷ್ಮೀ ದೇವಿ ಮತ್ತು ಗಣೇಶನ ಆರಾಧನೆಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ಲಕ್ಷ್ಮೀ  ಮತ್ತು ದೇವರನ್ನು ಸರಿಯಾಗಿ ಪೂಜಿಸುವುದರಿಂದ ಜೀವನದಲ್ಲಿ ಆರ್ಥಿಕ ಸಮೃದ್ಧಿ ನೆಲೆಯಾಗುತ್ತದೆ. 


ಇದನ್ನೂ ಓದಿ : ಐದು ಶತಮಾನಗಳ ಬಳಿಕ ದೀಪಾವಳಿಯಂದು ಅದ್ಭುತ ಯೋಗಗಳ ರಚನೆ, ತಾಯಿ ಲಕ್ಷ್ಮಿ ಕೃಪೆಯಿಂದ ಈ ಜನರಿಗೆ ಅಪಾರ ಧನ-ಸಂಪತ್ತು-ಪದೋನ್ನತಿ ಪ್ರಾಪ್ತಿ!


ಇದಲ್ಲದೆ, ಈ ದಿನದಂದು ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಲಕ್ಷ್ಮೀ  ದೇವಿ ಮತ್ತು ಗಣೇಶನ ಕೃಪೆಗೆ ಪಾತ್ರರಾಗುತ್ತಾರೆ. ಇದರ ಪರಿಣಾಮವಾಗಿ ಜೀವನದಲ್ಲಿ ಸಂಪತ್ತು ಮತ್ತು ಐಶ್ವರ್ಯದ ಸಾಧನಗಳು ಕೂಡಾ ಹೆಚ್ಚುತ್ತದೆ. 
ದೀಪಾವಳಿಯ ದಿನದಂದು ಲಕ್ಷ್ಮೀ ಮತ್ತು ಗಣೇಶನ ವಿಗ್ರಹ ಅಥವಾ ಫೋಟೋವನ್ನು ಖರೀದಿಸಬೇಕು ನಿಜ. ಇದನ್ನು ಹೊರತುಪಡಿಸಿ  ದೀಪಾವಳಿಯ ದಿನದಂದು ಇನ್ನೂ ಕೆಲವು ವಸ್ತುಗಳನ್ನು ಖರೀದಿಸಿದರೆ ಅದೃಷ್ಟ ಕೈ ಹಿಡಿಯುತ್ತದೆ ಎನ್ನಲಾಗಿದೆ. 


ಗಿಳಿ : 
ವಾಸ್ತು ಶಾಸ್ತ್ರದ ಪ್ರಕಾರ ದೀಪಾವಳಿಯಂದು ಗಿಳಿಯ ಫೋಟೋವನ್ನು ಖರೀದಿಸಿ ಮನೆಗೆ ತಂದರೆ ಶುಭ. ಜ್ಯೋತಿಷ್ಯ ಲೆಕ್ಕಾಚಾರದಲ್ಲಿ ಗಿಳಿ ಬುಧ ಮತ್ತು ಶುಕ್ರ ಗ್ರಹಗಳನ್ನು ಪ್ರತಿನಿಧಿಸುತ್ತದೆ. ಈ ಹಿನ್ನೆಲೆಯಲ್ಲಿ ದೀಪಾವಳಿಯಂದು ಗಿಳಿಯ ಫೋಟೋವನ್ನು  ಮನೆಗೆ ತಂದರೆ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ವಾಸ್ತು ನಿಯಮಗಳ ಪ್ರಕಾರ ಮಲಗುವ ಕೋಣೆಯಲ್ಲಿ ಹಸಿರು ಗಿಳಿಯ ಚಿತ್ರವನ್ನೂ ಇಡಬಹುದು.


ಇದನ್ನೂ ಓದಿ : ಸುಮಾರು ಆರು ದಶಕಗಳ ಬಳಿಕ ಧನತ್ರಯೋದಶಿಯಂದು ವಿಶೇಷ ಕಾಕತಾಳೀಯ ನಿರ್ಮಾಣ, ಧನಕುಬೇರ ಕೃಪೆಯಿಂದ ಈ ಜನರಿಗೆ ಭಾರಿ ಧನಲಾಭ!


ಏಳು ಕುದುರೆಗಳ ಫೋಟೋ : 
ವಾಸ್ತು ತಜ್ಞರ ಪ್ರಕಾರ ದೀಪಾವಳಿಯಂದು 7 ಕುದುರೆಗಳ ಫೋಟೋವನ್ನು ತಂದರೆ ಅದೃಷ್ಟ ಹೆಚ್ಚುತ್ತದೆ. ಇದರೊಂದಿಗೆ ಲಕ್ಷ್ಮೀ ದೇವಿಯ ಆಶೀರ್ವಾದವೂ ಸಿಗುತ್ತದೆ. ದೀಪಾವಳಿಯಂದು ಮನೆಯಲ್ಲಿ ಏಳು ಕುದುರೆಗಳ ಫೋಟೋವನ್ನು  ನೇತುಹಾಕುವುದರಿಂದ ಬಾಕಿ ಉಳಿದಿರುವ ಕೆಲಸಗಳು ಚುರುಕು ಪಡೆಯುತ್ತವೆ. ದೀಪಾವಳಿಯ ದಿನದಂದು, ಈ ಫೋಟೋವನ್ನು ಮನೆಯ ಮುಖ್ಯ ದ್ವಾರದ ಮೇಲೆ ಅಥವಾ ಪ್ರತಿಯೊಬ್ಬರ ಕಣ್ಣುಗಳು ಅದರ ಮೇಲೆ ಬೀಳುವಂತಹ ಸ್ಥಳದಲ್ಲಿ ಇರಿಸಬೇಕು.  


ಗೂಬೆ : 
ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮೀ ದೇವಿಯ ಜೊತೆಗೆ ಗೂಬೆ ಕೂಡಾ ಕಾಣುವ ಫೋಟೋವನ್ನು ದೀಪಾವಳಿಯಂದು ಖರೀದಿಸಬೇಕು. ಗ್ರಂಥಗಳಲ್ಲಿ, ಗೂಬೆಯನ್ನು ಲಕ್ಷ್ಮೀ  ದೇವಿಯ ವಾಹನವೆಂದು ಕರೆಯಲಾಗುತ್ತದೆ. ಹೀಗಾಗಿ ಈ ಫೋಟೋವನ್ನು ಮನೆಯಲ್ಲಿ ಇರಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಅಲ್ಲದೆ, ಮನೆಯ ನಕಾರಾತ್ಮಕ ಶಕ್ತಿಯು ನಾಶವಾಗುತ್ತದೆ. ದೀಪಾವಳಿಯಂದು ಪೂಜೆಯ ನಂತರ, ಹಣವನ್ನು ಇರಿಸುವ ಸ್ಥಳದಲ್ಲಿ ಈ ಫೋಟೋವನ್ನು ಇಡಬೇಕು. 


ಕುಬೇರನ ವಿಗ್ರಹ : 
ದೀಪಾವಳಿಯಂದು ಎಲ್ಲರೂ ಲಕ್ಷ್ಮೀ ಮತ್ತು ಗಣೇಶನ ವಿಗ್ರಹವನ್ನು ಖರೀದಿಸುತ್ತಾರೆ. ಆದರೆ, ಹೆಚ್ಚಿನ ಜನರು ಈ ದಿನ ಕುಬೇರ ದೇವನ ವಿಗ್ರಹವನ್ನು ಖರೀದಿಸಲು ಮರೆಯುತ್ತಾರೆ. ದೀಪಾವಳಿಯಂದು ನೀವು ಲಕ್ಷ್ಮಿ ದೇವಿ, ಗಣೇಶ ಮತ್ತು ಕುಬೇರ ದೇವನ ವಿಗ್ರಹಗಳನ್ನು ಖರೀದಿಸಬಹುದು.


ಇದನ್ನೂ ಓದಿ : Diwali 2023 ಬಳಿಕ ತ್ರಿಗ್ರಹಿ ಯೋಗ ನಿರ್ಮಾಣ, ಸೂರ್ಯ-ಮಂಗಳರ ಕೃಪೆಯಿಂದ ಈ ಜನರ ಜೀವನದಲ್ಲಿ ಅಪಾರ ಕನಕವೃಷ್ಟಿ!


ಮಹಾಲಕ್ಷ್ಮಿ ಯಂತ್ರ :
ದೀಪಾವಳಿಯ ದಿನದಂದು ಲಕ್ಷ್ಮಿ ಯಂತ್ರವನ್ನು ಖರೀದಿಸಿ ಪೂಜಿಸುವ ಸಂಪ್ರದಾಯವೂ ಇದೆ. ದೀಪಾವಳಿಯ ದಿನದಂದು, ಮಹಾ ಲಕ್ಷ್ಮಿ ಯಂತ್ರವನ್ನು ಖರೀದಿಸಿ ಅದನ್ನು ಯಥಾವತ್ತಾಗಿ ಪೂಜಿಸಿದರೆ ಲಕ್ಷ್ಮೀ  ದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.