2024ರಲ್ಲಿ ಈ ರಾಶಿಯವರ ಕೈ ತುಂಬಾ ನಲಿದಾಡುವುದು ಹಣ! ತನ್ನ ಉದಯದೊಂದಿಗೆ ಈ ರಾಶಿಯವರ ಭವಿಷ್ಯ ಬೆಳಗುವನು ಶನಿ ಮಹಾತ್ಮ !

2024 ರ ಮಾರ್ಚ್ 18 ರಿಂದ ಶನಿದೇವನು ಮತ್ತೆ ಉದಯಿಸುತ್ತಾನೆ. ಶನಿಗ್ರಹದ  ಉದಯದೊಂದಿಗೆ ವ್ಯಕ್ತಿಯ ಜೀವನದಲ್ಲಿ ಕೆಲವು ವಿಶೇಷ ಬದಲಾವಣೆಗಳು ಕಂಡುಬರುತ್ತವೆ. 

Written by - Ranjitha R K | Last Updated : Nov 6, 2023, 01:01 PM IST
  • ನವ ಗ್ರಹಗಳ ಪೈಕಿ ಶನಿ ಗ್ರಹಕ್ಕೆ ಪ್ರಮುಖ ಸ್ಥಾನವಿದೆ
  • 2024 ರ ಫೆಬ್ರವರಿಯಲ್ಲಿ ಶನಿಯು ಕುಂಭರಾಶಿಯಲ್ಲಿ ಅಸ್ತ
  • 2024 ರ ಮಾರ್ಚ್ 18 ರಿಂದ ಮತ್ತೆ ಉದಯ
2024ರಲ್ಲಿ ಈ ರಾಶಿಯವರ ಕೈ ತುಂಬಾ ನಲಿದಾಡುವುದು ಹಣ!  ತನ್ನ ಉದಯದೊಂದಿಗೆ ಈ ರಾಶಿಯವರ ಭವಿಷ್ಯ ಬೆಳಗುವನು ಶನಿ ಮಹಾತ್ಮ !  title=

Shani Uday Effect : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವ ಗ್ರಹಗಳ ಪೈಕಿ ಶನಿ ಗ್ರಹಕ್ಕೆ ಪ್ರಮುಖ ಸ್ಥಾನವಿದೆ. ಶನಿಯ ಶುಭ ದೃಷ್ಟಿ ವ್ಯಕ್ತಿಯ ಮೇಲೆ ಬಿದ್ದಾಗ, ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ಒಳ್ಳೆಯ ಬದಲಾವಣೆಗಳನ್ನು ಕಾಣುತ್ತಾನೆ ಎಂಬ ನಂಬಿಕೆ ಇದೆ. ಶನಿ ದೇವನನ್ನು ನ್ಯಾಯದ ದೇವರು ಎಂದೂ ಕರೆಯುತ್ತಾರೆ. ವ್ಯಕ್ತಿಗೆ ಆತನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುವ ದೊರೆಯೇ ಶನಿ ಮಹಾತ್ಮ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು 2024ರಲ್ಲಿ ಕುಂಭ ರಾಶಿಯಲ್ಲಿ ನೆಲೆಸುವ ಮೂಲಕ ತನ್ನ ಚಲನೆಯನ್ನು ಬದಲಾಯಿಸುತ್ತಾನೆ. 2024 ರ ಫೆಬ್ರವರಿಯಲ್ಲಿ ಶನಿಯು  ಕುಂಭರಾಶಿಯಲ್ಲಿ ಅಸ್ತಮಿಸುತ್ತಾನೆ. ಇದಾದ ನಂತರ  ಮಾರ್ಚ್ ತಿಂಗಳಲ್ಲಿ ಮತ್ತೆ  ಉದಯಿಸುತ್ತಾನೆ. 2024 ರ ಮಾರ್ಚ್ 18 ರಿಂದ ಶನಿದೇವನು ಮತ್ತೆ ಉದಯಿಸುತ್ತಾನೆ. ಶನಿಗ್ರಹದ  ಉದಯದೊಂದಿಗೆ ವ್ಯಕ್ತಿಯ ಜೀವನದಲ್ಲಿ ಕೆಲವು ವಿಶೇಷ ಬದಲಾವಣೆಗಳು ಕಂಡುಬರುತ್ತವೆ. ಶನಿಯ ಉದಯದಿಂದ ಯಾವ ರಾಶಿಯವರು ತಮ್ಮ ಜೀವನದಲ್ಲಿ ಬದಲಾವಣೆಗಳನ್ನು ಕಾಣಲಿದ್ದಾರೆ ನೋಡೋಣ. 

ಇದನ್ನೂ ಓದಿ : ಮುಂದಿನ 18 ತಿಂಗಳು ಈ ರಾಶಿಯವರ ಕೈಯ್ಯಲ್ಲಿರುವುದು ಕುಬೇರನ ಖಜಾನೆ ! ಹೋದಲೆಲ್ಲಾ ಯಶಸ್ಸು ನೀಡಿ ಕಾಯುವರು ರಾಹು -ಕೇತು

ವೃಷಭ ರಾಶಿ :
ವೈದಿಕ ಗ್ರಂಥಗಳ ಪ್ರಕಾರ, ವೃಷಭ ರಾಶಿಯವರು 2024 ರಲ್ಲಿ ಶನಿದೇವನ ಉದಯದಿಂದಾಗಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ಈ ಮೂಲಕ ಆದಾಯ ಹೆಚ್ಚಾಗುತ್ತದೆ. ಈ ಸಮಯವು ವ್ಯಾಪಾರ ವರ್ಗದವರಿಗೂ ಮಂಗಳಕರವಾಗಿರುತ್ತದೆ. ಶನಿಯ ಉದಯದಿಂದಾಗಿ ವ್ಯಾಪಾರದಲ್ಲಿ ಅಗಾಧವಾದ ಲಾಭವುಂಟಾಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಅನಿರೀಕ್ಷಿತ ಹಣ ಒಲಿದು ಬರುವ ಸಾಧ್ಯತೆಗಳಿವೆ. 

ತುಲಾ ರಾಶಿ : 
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯ ಉದಯದಿಂದಾಗಿ, ತುಲಾ ರಾಶಿಯ ಜನರು ತಮ್ಮ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ಕಾಣುತ್ತಾರೆ. ಈ ಜನರ ಜೀವನದಲ್ಲಿ ಸಕಾರಾತ್ಮಕ ಪರಿಣಾಮಗಳು ಕಂಡುಬರುತ್ತವೆ. ಅಷ್ಟೇ ಅಲ್ಲ, ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಿದ ಹಣವು ಈ ಸಮಯದಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ. ಆದಾಯದ ಹೆಚ್ಚಳದಿಂದ ಹೊಸ ಉದ್ಯೋಗಾವಕಾಶಗಳು ಉದ್ಭವಿಸುತ್ತವೆ. ಸಂತೋಷಕ್ಕೆ ಕಾರಣಗಳು ಹೆಚ್ಚಾಗುತ್ತವೆ. 

ಇದನ್ನೂ ಓದಿ : ಗುರು ದೆಸೆ ಈ 5 ರಾಶಿಗಳ ಅದೃಷ್ಟ ಬೆಳಗುವುದು, ಆದಾಯ ದುಪ್ಪಟ್ಟು.. ಸಂಪತ್ತು ನೀಡಿ ಕಾಯುವ ದೇವಗುರು!

ಧನು ರಾಶಿ : 
ಈ ರಾಶಿಯವರಿಗೆ ಮಂಗಳಕರ ದಿನಗಳು ಪ್ರಾರಂಭವಾಗುತ್ತವೆ. ಶನಿಯ ಉದಯದಿಂದಾಗಿ, ಈ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಕಾಣುತ್ತಾರೆ. ಜೊತೆಗೆ ಹೊಸ ಉದ್ಯೋಗಾವಕಾಶಗಳೂ ದೊರೆಯಲಿವೆ. ಶನಿಯ ಉದಯವು ನಿರುದ್ಯೋಗಿ ಯುವಕರಿಗೆ ಲಾಭವನ್ನು ನೀಡುತ್ತದೆ. ಈ ಅವಧಿಯಲ್ಲಿ ಹೊಸ ಉದ್ಯೋಗ ಆಫರ್ ಕೂಡಾ ಬರಬಹುದು. ಐಶ್ವರ್ಯ ಮತ್ತು ಸಂತೋಷದ ಸಾಧನಗಳಲ್ಲಿ ಹೆಚ್ಚಳವಾಗುವುದು. ವ್ಯಾಪಾರ ವರ್ಗದವರಿಗೂ ಈ ಸಮಯ ಮಂಗಳಕರವಾಗಿರುತ್ತದೆ. ಶನಿಯ ಅನುಗ್ರಹದಿಂದ, ಆರ್ಥಿಕ ಜೀವನದಲ್ಲಿ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News