ಬ್ಯಾಂಕ್ ಬ್ಯಾಲೆನ್ಸ್ 257 ರೂ.. ದೊಡ್ಡ ಸಿನಿಮಾಗಳೆಲ್ಲ ರಿಜೆಕ್ಟ್.. ಒಂದೇ ಚಿತ್ರದಿಂದ ಸ್ಟಾರ್ ಸ್ಟೇಟಸ್ ಗಳಿಸಿದ ನಟಿ ಈಕೆ!
12th fail Actress: ಸಿನಿರಂಗದಕ್ಕೆ ಪದಾರ್ಪಣೆ ಮಾಡಿದ ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ ಯುವತಿಗೆ ಒಂದೇ ಒಂದು ಚಿತ್ರದ ಮೂಲಕ ಇಂದು ಸ್ಟಾರ್ ಪಟ್ಟ.. ಹಾಗಾದರೆ ಯಾರು ಆ ನಟಿ ಅಂತೀರಾ.. ಈ ಸ್ಟೋರಿ ಓದಿ..
12th fail Actress Medha Shankar: ಚಿತ್ರರಂಗದಲ್ಲಿ ಯಶಸ್ಸು ಸಾಧಿಸುವುದು ಸುಲಭವಲ್ಲ. ನಟನೆ ಮತ್ತು ಸೌಂದರ್ಯದಿಂದ ಪ್ರೇಕ್ಷಕರನ್ನು ಮೆಚ್ಚಿಸಿದರೆ ಮಾತ್ರ ಸಿನಿಮಾ ವೃತ್ತಿಜೀವನ ಉತ್ತಮವಾಗಿರುತ್ತದೆ.. ಸಿನಿಮಾ ಅವಕಾಶಗಲನ್ನು ಬಯಸುವವರು ತಾಳ್ಮೆಯಿಂದ ಕಾಯಲೇ ಬೇಕು.. ಅಲ್ಲದೇ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು..
ಅದೇ ರೀತಿ ಇಂದು ನಾವು ಹೇಳಲು ಹೊರಟಿರುವ ನಟಿ ತನ್ನ ವೃತ್ತಿಜೀವನದ ಆರಂಭದಲ್ಲಿ ದೊಡ್ಡ ಚಿತ್ರಗಳಲ್ಲಿ ಅವಕಾಶಗಳನ್ನು ಪಡೆದರು.. ಆದರೆ ಎಲ್ಲವನ್ನೂ ರಿಜೆಕ್ಟ್ ಮಾಡಿದರು.. ಆಗ ಆಕೆಯ ಬ್ಯಾಂಕ್ ಬ್ಯಾಲೆನ್ಸ್ 250 ರೂ. ಆದರೆ ಸದ್ಯ ಈ ನಟಿ ಒಂದೇ ಒಂದು ಸಿನಿಮಾದಿಂದ ಸ್ಟಾರ್ ಸ್ಥಾನಮಾನವನ್ನು ಪಡೆದಿದ್ದಾರೆ.. ಅವರು ಬೇರೆ ಯಾರೂ ಅಲ್ಲ '12th ಫೇಲ್' ಚಿತ್ರದ ನಾಯಕಿ ಮೇಧಾ ಶಂಕರ್.
ಇದನ್ನೂ ಓದಿ-Sapthami Gowda: ಫುಲ್ ಸ್ಲಿಮ್ ಆಂಡ್ ಫಿಟ್ ಆಗಿ ಗಮನ ಸೆಳೆದ ಕಾಂತಾರಾ ಚೆಲುವೆ !
2023 ರಲ್ಲಿ ತೆರೆಕಂಡ '12th ಫೇಲ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಚಿತ್ರದಲ್ಲಿ ಐಆರ್‌ಎಸ್ ಶ್ರದ್ಧಾ ಜೋಶಿ ಪಾತ್ರದಲ್ಲಿ ಮೇಧಾ ಶಂಕರ್ ನಟಿಸಿದ್ದು.. ಇವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.. ಸೋಷಿಯಲ್ ಮಿಡಿಯಾದಲ್ಲಿ ಭಾರೀ ಫ್ಯಾನ್ ಫಾಲೋಯಿಂಗ್ ಸೃಷ್ಟಿಯಾಗಿದೆ..
ಇದನ್ನೂ ಓದಿ-Bollywood Actress: 50 ವರ್ಷ ಕಳೆದರೂ ಕನ್ಯೆಯಾಗಿ ಉಳಿದ ಸ್ಟಾರ್ ನಟಿ ಈಕೆ!
ಇನ್ನು ಮೇಧಾ ಶಂಕರ್ ಈ ಚಿತ್ರಕ್ಕಾಗಿ ಅವರು IMDb 'ಬ್ರೇಕೌಟ್ ಸ್ಟಾರ್' ಸ್ಟಾರ್‌ಮೀಟರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಪ್ರಭಾಸ್ ಅವರಂತಹ ಸೂಪರ್‌ಸ್ಟಾರ್‌ಗಳನ್ನು ಮೀರಿಸಿದ ಇವರು 2023 ರಲ್ಲಿ ದೇಶದ ಅತ್ಯಂತ ಜನಪ್ರಿಯ ನಟಿಯಾಗಿ ಹೊರಹೊಮ್ಮಿದ್ದಾರೆ...
ಇತ್ತೀಚೆಗೆ ನಟಿ IMDb ಗೆ ನೀಡಿದ ಸಂದರ್ಶನದಲ್ಲಿ, "2020 ರಲ್ಲಿ ಸತತವಾಗಿ ಮೂರು ದೊಡ್ಡ ಪ್ರಾಜೆಕ್ಟ್‌ಗಳನ್ನು ರಿಜೆಕ್ಟ್ ಮಾಡಿ ದೊಡ್ಡ ಸಂಕಷ್ಟದಲ್ಲಿದ್ದೆ.. ಆಗ ನನ್ನ ಬ್ಯಾಂಕ್ ಬ್ಯಾಲೆನ್ಸ್ 257 ರೂ. ಆಗಿತ್ತು.. ತುಂಬಾ ನಿರಾಸೆಗೊಂಡಿದ್ದೆ.. ದಿನನಿತ್ಯದ ಖರ್ಚಿಗೆ ಬೇರೆ ಕೆಲಸ ಮಾಡ್ತಿದ್ದೆ. ಆದರೆ ಸಿನಿಮಾಗಳಿಗಾಗಿ ಪ್ರಯತ್ನ ಮಾಡುವುದನ್ನು ನಾನು ಎಂದಿಗೂ ನಿಲ್ಲಿಸಿಲ್ಲ.. ಗ್ಲಾಮರಸ್ ಪಾತ್ರಗಳನ್ನು ಮಾಡುವುದಿಲ್ಲ.. ಆದರೆ ನಾನು ನಟಿಯಾಗಿ ನನ್ನನ್ನು ಸಾಬೀತುಪಡಿಸಲು ಸಿದ್ದಳಿದ್ದೇನೆ.. 12ನೇ ಫೇಲ್ ಹಿಟ್ ಆದ ನಂತರ ಎಲ್ಲರೂ ನ್ಯಾಷನಲ್ ಕ್ರಷ್ ಎಂದು ಕರೆಯುತ್ತಿದ್ದಾರೆ.. ಇದಕ್ಕೆ ತುಂಬಾ ಖುಷಿಯಿದೆ" ಎಂದು ಹೇಳಿಕೊಂಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.