ನವದೆಹಲಿ: ಹಾಲಿವುಡ್ ನಟಿ ಟಿಪ್ಪಿ ಹೆಡ್ರೆನ್ ಅವರನ್ನು ಇಂದು 'ಫಿಫ್ಟಿ ಷೇಡ್ಸ್' ಚಿತ್ರದ ನಟಿ ಡಕೋಟಾ ಜಾನ್ಸನ್ ಅವರ ಅಜ್ಜಿ ಎಂದು ಗುರುತಿಸಲಾಗುತ್ತದೆ, ಹಾಲಿವುಡ್ ಕ್ಲಾಸಿಕ್ ಥ್ರಿಲ್ಲರ್ ಪ್ರೇಮಿಗಳು ಅವರನ್ನು 'ದಿ ಬರ್ಡ್ಸ್' (1963) ಮತ್ತು 'ಮಾರ್ನಿ' (1964) ಚಿತ್ರಗಳಲ್ಲಿ ಆಲ್ಫ್ರೆಡ್ ಹಿಚ್‌ಕಾಕ್‌ನ ನಾಯಕಿ ಎಂದು ಗುರುತಿಸುತ್ತಾರೆ. ಆದರೆ, ವಾಸ್ತವದಲ್ಲಿ ಹಾಲಿವುಡ್ ಟ್ರಿವಿಯಾ ಗೊತ್ತಿರುವ ಜನರಿಗೆ, ಹೇಡನ್ ಅವರ ಹುಲಿ-ಸಿಂಹಗಳ ಸಂಗ್ರಹಾಲಯದ ಕುರಿತು ತಿಳಿದೇ ಇರುತ್ತದೆ.


COMMERCIAL BREAK
SCROLL TO CONTINUE READING

ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಇಂದಿಗೂ ಕೂಡ ತನ್ನ 90ನೇ ಇಳಿವಯಸ್ಸಿನಲ್ಲಿ ಹೇಡನ್ 13-14 ಹುಲಿ-ಸಿಂಹಗಳ ಜೊತೆ ವಾಸಿಸುತ್ತಾಳೆ ಎನ್ನಲಾಗಿದೆ. 'ದಿ ಗ್ರಹಾಂ ನಾರ್ಟನ್ ಶೋ'ನ ಆಂತರಿಕ ಆವೃತ್ತಿಯ ಸಂದರ್ಭದಲ್ಲಿ ಡಕೋಟಾ ಇದನ್ನು ಬಹಿರಂಗಪಡಿಸಿದೆ.


ಈ ಕುರಿತು ಹೇಳಿರುವ 30 ವರ್ಷದ ಡಕೋಟಾ, ಇಂದಿಗೂ ಕೂಡ ತನ್ನ ಅಜ್ಜಿಯ ಮನೆಯಲ್ಲಿ ಪ್ರಸ್ತುತ '13 ಅಥವಾ 14 ಸಿಂಹಗಳು ಮತ್ತು ಹುಲಿಗಳು ಇವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ತನ್ನ ಅಜ್ಜಿ ಮತ್ತು ತಾಯಿ 62 ವರ್ಷದ ಮೇಲಾನಿ ಗ್ರಿಫಿತ್, 1981 ರಲ್ಲಿ ಮೂಡಿಬಂದ ಚಲನಚಿತ್ರ 'ರೋರ್' ನಲ್ಲಿ ಹಲವಾರು ಹುಲಿ ಮತ್ತು ಸಿಂಹಗಳ ಜೊತೆಗೆ ಕಾಣಿಸಿಕೊಂಡಿದ್ದರು ಎಂದು ಡಕೋಟಾ ಹೇಳಿದ್ದಾಳೆ. ಜೊತೆಗೆ ನನ್ನ ಅಜ್ಜಿ ತುಂಬಾ ಒಳ್ಳೆಯವರು ಎಂದೂ ಕೂಡ ಅವಳು ಹೇಳಿದ್ದಾರೆ.