ಬೆಂಗಳೂರು: ಸ್ಯಾಂಡಲ್ ವುಡ್ ಸಿನಿ ರಸಿಕರ ಪಾಲಿನ ಡಿಬಾಸ್ ತಮ್ಮ ಹಳೆಯ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ‘ಮೆಜೆಸ್ಟಿಕ್’ ಚಿತ್ರಕ್ಕೆ 20 ವರ್ಷ(20 years of Majestic) ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಭಾವುಕರಾದರು.


COMMERCIAL BREAK
SCROLL TO CONTINUE READING

'ಮೆಜೆಸ್ಟಿಕ್' ಚಿತ್ರ(Majestic Film)ಕ್ಕೂ ಮುನ್ನ ಇದ್ದ ಪರಿಸ್ಥಿತಿ ನೆನೆದು, ತಮಗೆ ಮೊದಲ ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು. ಇದೇ ವೇಳೆ ಅಂದಿನ ತಮ್ಮ ಪರಿಸ್ಥಿತಿ ಬಗ್ಗೆ ದರ್ಶನ್ ಭಾವುಕರಾಗಿ ಮಾತನಾಡಿದ್ದು ಅಭಿಮಾನಿಗಳ ಕಣ್ಣು ಒದ್ದೆಯಾಗಿಸಿತು. 'ಮೆಜೆಸ್ಟಿಕ್' ಚಿತ್ರದ ನಿರ್ದೇಶಕ ಪಿ.ಎನ್. ಸತ್ಯ ಅವರನ್ನು ನೆನೆದ ದರ್ಶನ್, ಆವತ್ತು ಸತ್ಯ ಅವರು ನೀಡಿದ ಬೆಂಬಲ ಇಂದಿಗೂ ನನ್ನ ಸ್ಯಾಂಡಲ್ ವುಡ್(Sandalwood)ನಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದೆ ಎಂದರು. ಹಾಗೇ ತಮ್ಮ ಮೊದಲ ಸಿನಿಮಾಗೆ ಬಂಡವಾಳ ಹೂಡಿದ ನಿರ್ಮಾಪಕರ ಬಗ್ಗೆಯೂ ಹೆಮ್ಮೆಯ ಮಾತುಗಳನ್ನು ಆಡಿದರು.


ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಬಗ್ಗೆ ಜಗ್ಗೇಶ್‌ ಭಾವನಾತ್ಮಕ ಬರಹ


2 ದಶಕದ ಸಂಭ್ರಮ


2 ದಶಕಗಳ ಹಿಂದೆ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದ್ದ ‘ಮೆಜೆಸ್ಟಿಕ್’ ಸಿನಿಮಾವನ್ನು ರೀ ರಿಲೀಸ್‌(Majestic Re-Release) ಮಾಡಲು ನಿರ್ಮಾಪಕ ಎಂ.ಜಿ.ರಾಮಮೂರ್ತಿ ಮುಂದಾಗಿದ್ದಾರೆ. ದರ್ಶನ್‌ ನಾಯಕನಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ ‘ಮೆಜೆಸ್ಟಿಕ್’ ದೊಡ್ಡ ಹಿಟ್‌ ಕಂಡಿತ್ತು. ಮಾಸ್‌ ಲುಕ್‌ನಲ್ಲಿ ದರ್ಶನ್‌ ಮಿಂಚಿದ್ದರು. ಫೆಬ್ರವರಿ 8ಕ್ಕೆ ‘ಮೆಜೆಸ್ಟಿಕ್’ ಸಿನಿಮಾ 20 ವರ್ಷ ಪೂರೈಸಿದೆ. ಮತ್ತೊಂದ್ಕಡೆ ಫೆಬ್ರವರಿ 16ರಂದು ದರ್ಶನ್‌ ಹುಟ್ಟುಹಬ್ಬವಿದ್ದು, ಈ ಬಾರಿ ಡಿ ಬಾಸ್‌ ಬರ್ತ್‌ಡೇಯನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಕಾರಣಕ್ಕೆ ‘ಮೆಜೆಸ್ಟಿಕ್’ ಸಿನಿಮಾ ಮತ್ತೊಮ್ಮೆ ಚಿತ್ರ ಮಂದಿರಗಳಲ್ಲಿ ರಾರಾಜಿಸಲಿದೆ.


ಸೆಂಚ್ಯೂರಿ ಭಾರಿಸಿತ್ತು..!


ನಟ ದರ್ಶನ್‌ ಅವರಿಗೆ ಮೊದಲ ಸಿನಿಮಾ(Darshans 2002 Film)ದಲ್ಲಿಯೇ ಅದ್ಭುತ ಯಶಸ್ಸು ತಂದು ಕೊಟ್ಟಿತ್ತು ‘ಮೆಜೆಸ್ಟಿಕ್’. ಈ ಚಿತ್ರ ಅಂದುಕೊಂಡ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಸೆಂಚ್ಯೂರಿ ಭಾರಿಸಿತ್ತು. 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಅಭಿಮಾನಿಗಳ ಮನ ಗೆದ್ದಿತ್ತು. ಇಂತಹ ಅದ್ಭುತ ಸಿನಿಮಾವನ್ನು ಮತ್ತೊಮ್ಮೆ ಚಿತ್ರ ಮಂದಿರಗಳಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.


ಹಬ್ಬದ ವಾತಾವರಣ..!


ಅಷ್ಟಕ್ಕೂ ಚಿತ್ರ ಮಂದಿರಗಳಲ್ಲಿ 100 ಪರ್ಸೆಂಟ್‌ ಆಕ್ಯುಪೆನ್ಸಿ ಸಿಕ್ಕು ಕೆಲವೇ ದಿನಗಳಾಗಿವೆ. ಈ ಹಿನ್ನೆಲೆಯಲ್ಲಿ ಇದೇ ವಾರ 6 ಸಿನಿಮಾ, ಮುಂದಿನ ವಾರ 3 ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಈ ಹೊತ್ತಲ್ಲೇ ‘ಮೆಜೆಸ್ಟಿಕ್’(Majestic) ರೀ ರಿಲೀಸ್‌ ಆಗ್ತಿರೋದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ಡಿ ಬಾಸ್‌ ಹುಟ್ಟು ಹಬ್ಬದ ದಿನ ಚಿತ್ರ ಮಂದಿರಗಳ ಬಳಿ ಹಬ್ಬದ ವಾತಾವರಣ ನಿರ್ಮಾಣವಾಗೋದು ಪಕ್ಕಾ ಆಗಿದೆ.


ಇದನ್ನೂ ಓದಿ: Achyuth Kumar: ನಾಯಕನೂ.. ಮನೆಯ ನಾವಿಕನೂ.. ಅಚ್ಯುತ್ ಅಭಿನಯ ಅಬ್ಬಬ್ಬಾ..!


ಒಟ್ಟಿನಲ್ಲಿ ದರ್ಶನ್‌ ಬರ್ತ್‌ ಡೇ(Darshan Birthday) ದಿನ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್‌ ಸಿಗೋದು ಪಕ್ಕಾ ಆಗಿದೆ. ಆದರೆ ಎಷ್ಟು ಚಿತ್ರ ಮಂದಿರಗಳಲ್ಲಿ ‘ಮೆಜೆಸ್ಟಿಕ್’ ರೀ ರಿಲೀಸ್‌ ಆಗುತ್ತೆ ಅನ್ನೋದು ಇನ್ನೂ ಕನ್ಫರ್ಮ್‌ ಆಗಿಲ್ಲ. ಮತ್ತೊಂದ್ಕಡೆ ದಚ್ಚು ಅಭಿಮಾನಿಗಳು ಸಂಭ್ರಮದಿಂದ ಪೂರ್ವ ತಯಾರಿ ಆರಂಭಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.